Published on: July 13, 2022

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ

buy clomid canada ಸುದ್ದಿಯಲ್ಲಿ ಏಕಿದೆ?

Morsi ಭಾರತೀಯ ಸೇನೆ, ವಾಯುಪಡೆ, ನೌಕಾಪಡೆ, ಕೋಸ್ಟ್ ಗಾರ್ಡ್‌ಗಳು ಬಳಕೆ ಮಾಡಲಿರುವ 10 ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಆಧಾರಿತ ಮೊದಲ ಹಂತದ ಉತ್ಪನ್ನಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನಾವರಣಗೊಳಿಸಲಿದ್ದಾರೆ.

ಮುಖ್ಯಾಂಶಗಳು

  • ಪ್ರಸಕ್ತ ಸಾಲಿನಲ್ಲಿ ಅಂತಹ 75 ಎಐ ತಂತ್ರಜ್ಞಾನಗಳನ್ನು ಪರಿಚಯಿಸುವ ಗುರಿ ಹೊಂದಲಾಗಿದೆ.

ಇದರೊಂದಿಗೆ ಭಾರತೀಯ ಸಶಸ್ತ್ರ ಪಡೆಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ದೊಡ್ಡ ಮಟ್ಟದಲ್ಲಿ ಬಳಕೆ ಮಾಡಲು ಸಜ್ಜಾಗಿವೆ.

  • 10 ಎಐ ತಂತ್ರಜ್ಞಾನಗಳ ಪೈಕಿ ಕನಿಷ್ಠ ನಾಲ್ಕನ್ನು ಸೇನೆಯು ಬಳಕೆ ಮಾಡಲಿದೆ. ಇದು ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಎಐ ಗೆಸ್ಟರ್ ರೆಕಾಗ್ನಿಷನ್ ಸಿಸ್ಟಂ ಒಳಗೊಂಡಿದೆ.
  • ಈ ತಂತ್ರಜ್ಞಾನವು ವ್ಯಕ್ತಿಯೊಬ್ಬನ ಚಲನವಲನ, ಬಂದೂಕನ್ನು ಹೊಂದಿದ್ದಾನೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲಿದೆ.
  • ಅಲ್ಲದೆ ಐಪಿ ಹೊಂದಿದ ಕ್ಯಾಮರಾ ನೆಟ್‌ವರ್ಕ್‌ನಲ್ಲಿ ಸುಲಭವಾಗಿ ಸಂಯೋಜಿಸಬಹುದಾಗಿದೆ. ಕಣ್ಗಾವಲು ವ್ಯವಸ್ಥೆ, ರೋಬೋಟಿಕ್ಸ್ ವ್ಯವಸ್ಥೆ, ಸೈಬರ್ ಸೆಕ್ಯೂರಿಟಿ, ವಾಯ್ಸ್ ಕಮಾಂಡ್, ಡೇಟಾ ಅನಾಲಿಟಿಕ್ಸ್, ಟಾರ್ಗೆಟ್ ಟ್ರ್ಯಾಕಿಂಗ್, ಕಾವಲುಪಡೆ ಮುನ್ಸೂಚನೆ ನಿರ್ವಹಣೆ ಸೇರಿದಂತೆ ಹಲವು ಎಐ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ.
  • 75 ಎಐ ತಂತ್ರಜ್ಞಾನ ಉತ್ಪನ್ನಗಳನ್ನು ಪರಿಚಯಿಸಲಿದ್ದು, ಇನ್ನು 100ರಷ್ಟು ಅಂತಹ ಉತ್ಪನ್ನಗಳು ಅಭಿವೃದ್ಧಿ ಹಂತದಲ್ಲಿವೆ.

ಏನು ಈ ಕೃತಕ ಬುದ್ಧಿಮತ್ತೆ  (ಎಐ) ?

  • ಪ್ರೋಗ್ರಾಮ್ ಮಾಡಿಟ್ಟ ಹಾಗೆ ಅದಕ್ಕೆ ತಕ್ಕಂ ತೆ ವರ್ತಿಸುವ ಪ್ರಕ್ರಿಯೆಯನ್ನು ಕೃತಕ ಬುದ್ಧಿಮತ್ತೆ ಎನ್ನಲಾಗುತ್ತದೆ.
  • ಎಐಗೆ ಉತ್ತಮ ಉದಾಹರಣೆಯಿದ್ದರೆ ಅದು ರೋಬೊಟ್ ತಂತ್ರಜ್ಞಾನ. ಯಾವ ಪ್ರಶ್ನೆಗೆ ಹೇಗೆ ಉತ್ತರಿಸಬೇಕು, ಯಾವ ಆಜ್ಞೆಗೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬುದನ್ನು ಪೂರ್ವನಿರ್ಧರಿತವಾಗಿ ರೋಬೊಟ್ನಲ್ಲಿ ಅಳವಡಿಸಿರುವುದು ತಿಳಿದಿರುವ ಸಂಗತಿಯೇ. ಎಐ ನಿಖರತೆಗಿಂತ ಒಟ್ಟಾರೆಯ ಫಲಿತಾಂಶಕ್ಕೆ ಹೆಚ್ಚು ಒತ್ತು ನೀಡುತ್ತದೆ.
  • ಇನ್ನು ಮಷೀನ್ ಲರ್ನಿಂ ಗ್ ಎಂದರೆ ಕೊಟ್ಟಿರುವ ದತ್ತಾಂಶಗಳನ್ನೇ ಬಳಸಿಕೊಂಡು ಖುದ್ದು ಯಂತ್ರವೇ ನಿರ್ಧಾರ ಕೈಗೊಳ್ಳುವಂತೆ ಮಾಡುವುದು. ಇಲ್ಲಿ ಮೊದಲೇ ಮಾಡಿಟ್ಟ ಪ್ರೋ ಗ್ರಾಮ್ಗಳು ಹೆಚ್ಚೇ ನೂ ನೆರವಾಗುವುದಿಲ್ಲ. ಪ್ರೊಗ್ರಾಮರ್ಗಳಿಗೂ ಬರೆಯಲಾಗದ ಕ್ಲಿಷ್ಟ ಸಮಸ್ಯೆಗಳಿಗೆ ಖುದ್ದು ಯಂತ್ರವೇ ಪ್ರತಿಕ್ರಿಯೆ ನೀಡುವಂತೆ ಮಾಡುವುದು ಇದರ ವೈಶಿಷ್ಟ್ಯ . ಆದ್ದರಿಂದ ಮಷೀನ್ ಲರ್ನಿಂ ಗ್ ಫಲಿತಾಂಶಕ್ಕಿಂ ತ ಹೆಚ್ಚಾಗಿ ನಿಖರತೆಗೆ ಆದ್ಯತೆ ನೀಡುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಮಷೀನ್ ಲರ್ನಿಂ ಗ್ ಎನ್ನುವುದು ಕೃತಕ ಬುದ್ಧಿಮತ್ತೆಯ ವಿಶಾಲವಾದ ಒಂದು ಭಾಗವಷ್ಟೆ.