Published on: June 3, 2024

ಆರ್ಟೆಮಿಸ್ ಒಪ್ಪಂದ

ಆರ್ಟೆಮಿಸ್ ಒಪ್ಪಂದ

ಸುದ್ದಿಯಲ್ಲಿ ಏಕಿದೆ? ಆರ್ಟೆಮಿಸ್ ಬಾಹ್ಯಾಕಾಶ ಒಪ್ಪಂದಕ್ಕೆ ಇತ್ತೀಚೆಗೆ ಸ್ಲೋವೇನಿಯಾ ಮತ್ತು ಲಿಥುವೇನಿಯಾ ದೇಶಗಳು ಸಹಿ ಹಾಕಿದ್ದು, ಈ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳಲ್ಲಿ ಸ್ಲೋವೇನಿಯಾ 39 ಮತ್ತು ಲಿಥುವೇನಿಯಾ 40ನೇ ದೇಶವಾಗಿದೆ.

ಮುಖ್ಯಾಂಶಗಳು

  • 2024 ಏಪ್ರಿಲ್ನಲ್ಲಿ ಕೆಲವು ದೇಶಗಳು ಆರ್ಟೆಮಿಸ್ ಒಪ್ಪಂದಗಳಿಗೆ ಸಹಿ ಹಾಕಿದ್ದು, ಈ ಮೂಲಕ ಸ್ವೀ ಡನ್
  • ಒಪ್ಪಂದಕ್ಕೆ ಸಹಿ ಹಾಕಿದ 37ನೇ ದೇಶ ಹಾಗೂ ಸ್ವಿಟ್ಜರ್ಲೆಂಡ್ 38ನೇ ದೇಶ ಎನಿಸಿಕೊಂಡಿದ್ದವು.
  • ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಈ ದೇಶಗಳು ತಮ್ಮ ಚಂದ್ರಯಾನ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಪರಸ್ಪರ ಸಹಕಾರದ ಮತ್ತು ಜವಾಬ್ದಾರಿಯುತ ನಡವಳಿಕೆಗೆ ಬದ್ಧವಾಗಿರುತ್ತವೆ.
  • ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ)ಯ 22 ಸದಸ್ಯ ದೇಶಗಳಲ್ಲಿ 16 ದೇಶಗಳು ಈಗ ಈ ಒಪ್ಪಂದಕ್ಕೆ ಸಹಿ ಹಾಕಿವೆ.
  • ಜೂನ್ 21, 2023 ರಂದು, ಭಾರತೀಯ ಗಣರಾಜ್ಯವು ಆರ್ಟೆಮಿಸ್ ಒಪ್ಪಂದಗಳಿಗೆ ಸಹಿ ಹಾಕಿದ 27 ನೇ ರಾಷ್ಟ್ರವಾಯಿತು.

ಆರ್ಟೆಮಿಸ್ ಒಪ್ಪಂದ

ಮೊದಲಿಗೆ, ಆರ್ಟೆಮಿಸ್ ಒಪ್ಪಂ ದಗಳಿಗೆ ಅಕ್ಟೋ ಬರ್ 13, 2020ರಂದು ಎಂಟು ಸ್ಥಾಪಕ ದೇಶಗಳಾದ ಆಸ್ಟ್ರೇಲಿಯಾ, ಕೆನಡಾ, ಇಟಲಿ, ಜಪಾನ್, ಲುಕ್ಸೆಂ ಬರ್ಗ್, ಯುಎಇ, ಯುಕೆ ಮತ್ತು ಯುಎಸ್ಎ ಸಹಿ ಹಾಕಿದ್ದ ವು. ಇದೊಂದು ಹಣಕಾಸಿನ ಬದ್ಧತೆ ಇಲ್ಲದಿರುವ ಒಪ್ಪಂದವಾಗಿದ್ದು, ಇದರ ಅಡಿಯಲ್ಲಿ ನಡೆಯುವ ಎಲ್ಲಾ

ಚಟುವಟಿಕೆಗಳು ಶಾಂತಿಯುತ ಉದ್ದೇಶಗಳಿಗಾಗಿರುತ್ತವೆ.

ಪಾಲುದಾರ ದೇಶಗಳ ಜವಾಬ್ದಾರಿಗಳು

  • ಪರಸ್ಪರ ಪೂರಕವಾದ ವ್ಯವಸ್ಥೆಗಳನ್ನು ಬೆಂಬಲಿಸಲು ಪ್ರಯತ್ನಿಸಬೇಕು.
  • ಪಾಲುದಾರ ದೇಶಗಳು ಯಾವುದೇ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಗಗನಯಾನಿಗಳಿಗೆ ಸಾಧ್ಯವಿರುವ ಎಲ್ಲಾ ನೆರವು ನೀಡಲು ಬದ್ಧರಾಗಿರಬೇಕು. ನೋಂದಣಿ ಒಪ್ಪಂದಕ್ಕೆ ಅನುಗುಣವಾಗಿ, ಯಾವ ಆಕಾಶಕಾಯಕ್ಕೆ ಯಾರು ನೋಂದಣಿ ಮಾಡಬೇಕು ಎಂಬುದನ್ನು ನಿರ್ಧರಿಸಬೇಕು.
  • ಆರ್ಟೆಮಿಸ್ ಯಾತ್ರೆಯಿಂದ ಇಡೀ ಪ್ರಪಂಚಕ್ಕೆ ಪ್ರಯೋಜನವಾಗುವಂತೆ, ಪಾಲುದಾರ ದೇಶಗಳು ತಮ್ಮೆಲ್ಲಾ ವೈಜ್ಞಾನಿಕ ದತ್ತಾಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು.
  • ಸದಸ್ಯ ದೇಶಗಳು ತಮ್ಮ ಬಾಹ್ಯಾಕಾಶ ಚಟುವಟಿಕೆಗಳ ಕುರಿತು ವಿಶ್ವಸಂಸ್ಥೆಗೆ ತಿಳಿಸಬೇಕು.
  • ಪಾಲುದಾರ ದೇಶಗಳು ಬಾಹ್ಯಾ ಕಾಶದಲ್ಲಿ ಹಾನಿಕಾರಕ ಮಧ್ಯ ಪ್ರವೇಶದಿಂದ ದೂರ ಉಳಿಯಬೇಕು ಮತ್ತು ಬಾಹ್ಯಾಕಾಶದ ಶಾಂತಿಯುತ ಬಳಕೆಗಳ ಕುರಿತ ವಿಶ್ವ ಸಂಸ್ಥೆಯ ಸಮಿತಿ (UNCOPUOS)ಯ ಬಾಹ್ಯಾಕಾಶ ತ್ಯಾಜ್ಯ ತಗ್ಗಿಸುವಿಕೆಯ ಕುರಿತ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಬೇಕು.

ಬಾಹ್ಯಾಕಾಶದ ಶಾಂತಿಯುತ ಬಳಕೆಗಳ ಕುರಿತ ವಿಶ್ವ ಸಂಸ್ಥೆಯ ಸಮಿತಿ

  • ಬಾಹ್ಯಾಕಾಶದ ಶಾಂತಿಯುತ ಬಳಕೆಗಳ ಕುರಿತ ವಿಶ್ವ ಸಂಸ್ಥೆಯ ಸಮಿತಿಯನ್ನು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 1959ರಲ್ಲಿ ಸ್ಥಾಪಿಸಲಾಯಿತು.
  • ಶಾಂತಿ, ಭದ್ರ ತೆ ಮತ್ತು ಅಭಿವೃದ್ಧಿಗಾಗಿ ಇಡೀ ಮಾನವ ಕುಲಕ್ಕೆ ಲಾಭವಾಗುವಂತೆ ಬಾಹ್ಯಾ ಕಾಶದ ಅನ್ವೇಷಣೆ ಮತ್ತು ಬಳಕೆಯನ್ನು ನಿರ್ದೇಶಿಸುವ ಉದ್ದೇಶದಿಂದ ಈ ಸಮಿತಿಯನ್ನು ಸ್ಥಾಪಿಸಲಾಯಿತು.
  • ಬಾಹ್ಯಾಕಾಶ ಅನ್ವೇ ಷಣೆಯಿಂದ ಉಂಟಾಗುವ ಕಾನೂನು ಸಮಸ್ಯೆ ಗಳ ಅಧ್ಯ ಯನಮುಂತಾದ ಜವಾಬ್ದಾರಿಗಳನ್ನು ಈ ಸಮಿತಿಗೆ ನೀಡಲಾಗಿತ್ತು.
  • ಈ ಸಮಿತಿಯಲ್ಲಿ ಎರಡು ಉಪಸಂಸ್ಥೆಗಳಿವೆ: 1.ವೈಜ್ಞಾನಿಕ ಮತ್ತು ತಾಂತ್ರಿಕ ಉಪಸಮಿತಿ, 2. ಕಾನೂನು ಉಪಸಮಿತಿ. ಇವೆರಡನ್ನೂ 1961ರಲ್ಲಿ ಸ್ಥಾಪಿಸಲಾಯಿತು.

ಭಾರತಕ್ಕೆ ಆಗಬಹುದಾದ ಲಾಭವೇನು?

  • ಆರ್ಟೆಮಿಸ್ ಒಪ್ಪಂದಗಳ ಪ್ರಕಾರ ಭಾರತವು ಸಮಾನ ನಿಯಮಾವಳಿಗೆ ಒಳಪಟ್ಟು, ಯುಎಸ್ಎ ನಡೆಸುವ ಚಂದ್ರ ಮತ್ತು ಇತರ ಆಕಾಶಕಾಯಗಳ ಅನ್ವೇಷಣೆ ಮತ್ತು ಸಂಶೋಧನೆಯ ಆರ್ಟೆಮಿಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು.
  • ವಿಶೇಷವಾಗಿ ಇಲೆಕ್ಟ್ರಾನಿಕ್ಸ್ ಸೇರಿದಂತೆ ಬಾಹ್ಯಾಕಾಶ ಕ್ಷೇತ್ರದಲ್ಲಿನ ತಂತ್ರಜ್ಞಾನಗಳ ಆಮದಿನ ಮೇಲೆ ಇರುವ ನಿರ್ಬಂಧಗಳ ಸಡಿಲಿಕೆಗೆ ಈ ಒಪ್ಪಂದವು ದಾರಿ ಮಾಡಿಕೊಡುತ್ತದೆ.
  • ಯುಎಸ್ಎಯ ಮಾರುಕಟ್ಟೆಗಳಿಗಾಗಿ ಸಾಧನಗಳ ಅಭಿವೃದ್ಧಿ ಮತ್ತು ಆವಿಷ್ಕಾರ ನಡೆಸುವ ಮೂಲಕ ಭಾರತೀಯ ಕಂಪನಿಗಳು ಲಾಭ ಪಡೆಯಬಹುದು.
  • ಇನ್ನಷ್ಟು ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಜಂಟಿಯಾಗಿ ಭಾಗವಹಿಸಲು ಭಾರತಕ್ಕೆ ಇದು ಅವಕಾಶಮಾಡಿಕೊಡಲಿದೆ. ಮಾನವ ಸಹಿತ ಗಗನಯಾನ ಸೇರಿದಂತೆ ದೂರಗಾಮಿ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಒಂದು ಸಮಾನ ಮಾನದಂಡವನ್ನೂ ಭಾರತವು ಹೊಂದಲಿದೆ.
  • ಮೈಕ್ರೋ ಇಲೆಕ್ಟ್ರಾನಿಕ್ಸ್, ಕ್ವಾಂಟಮ್, ಬಾಹ್ಯಾಕಾಶ ಭದ್ರತೆ ಮುಂತಾದ ಹೆಚ್ಚು ಕಾರ್ಯವ್ಯೂಹಾತ್ಮಕವಾದ ಕ್ಷೇತ್ರಗಳಲ್ಲಿ ಯುಎಸ್ಎ ಜೊತೆಗೆ ಭಾರತದ ಭಾಗವಹಿಸುವಿಕೆಯು ಹೆಚ್ಚಲಿದೆ.