Published on: October 25, 2021
ಆರ್.ಕೆ.ಲಕ್ಷ್ಮಣ್ ವಿಶೇಷ ಅಂಚೆ ಲಕೋಟೆ
ಆರ್.ಕೆ.ಲಕ್ಷ್ಮಣ್ ವಿಶೇಷ ಅಂಚೆ ಲಕೋಟೆ
ಸುದ್ಧಿಯಲ್ಲಿ ಏಕಿದೆ? ಭಾರತೀಯ ಅಂಚೆ ಕರ್ನಾಟಕ ವೃತ್ತವು ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಹೊರತಂದಿರುವ ವಿಶೇಷ ಅಂಚೆ ಲಕೋಟೆ ಹಾಗೂ ಮೂರು ಪೋಸ್ಟ್ ಕಾರ್ಡ್‌ಗಳನ್ನು ನಜರಬಾದ್‌ನ ಅಂಚೆ ತರಬೇತಿ ಕೇಂದ್ರದಲ್ಲಿ ಬಿಡುಗಡೆ ಮಾಡಲಾಯಿತು.
ಆರ್.ಕೆ.ಲಕ್ಷ್ಮಣ್
- ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ್ ಅಯ್ಯರ್ ಅವರು, ಅವರ ಸ್ನೇಹಿತರಿಗೆ, ಆಪ್ತರಿಗೆ,ಹಾಗೂ ಅವರ ಕಾರ್ಟೂನ್ ಪ್ರಿಯರಿಗೆ, ‘ಆರ್.ಕೆ.ಲಕ್ಷ್ಮಣ್’ ಎನ್ನುವ ಹೆಸರಿನಲ್ಲಿ ಜನಪ್ರಿಯರಾಗಿದ್ದಾರೆ. ಭಾರತದ ಇಂಗ್ಲೀಷ್ ಭಾಷೆಯ ಖ್ಯಾತ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ಒಳ್ಳೆಯ ಲೇಖಕರಾಗಿಯೂ ಹೆಸರು ಪಡೆದಿದ್ದರು.
- ವ್ಯಂಗ್ಯಚಿತ್ರಕಾರರಾಗಿ ಆಂಗ್ಲಭಾಷಾ ಪತ್ರಿಕೆಯಲ್ಲಿ ದಶಕಗಳ ಕಾಲ ಕೆಲಸ ನಿರ್ವಹಿಸಿ ಜನಪ್ರಿಯರಾಗಿದ್ದರು. ಲಕ್ಷ್ಮಣ್ ರವರು,ಅವರು ಅಕ್ಟೋಬರ್ ೨೩, ೧೯೨೪ ರಂದು ಮೈಸೂರಿನ ಲಕ್ಷ್ಮೀಪುರಂನಲ್ಲಿ ಜನಿಸಿದರು. ತಂದೆ ಕೃಷ್ಣಸ್ವಾಮಿ. ಇವರ ತಾಯಿ ಸೌಜನ್ಯಮಯಿಯವರು ಮೈಸೂರು ಮಹಾರಾಣಿಯವರಿಗೆ ತುಂಬ ಆಪ್ತರು.
- ಇವರು ತಮ್ಮ ಪ್ರಾಥಮಿಕ ಶಿಕ್ಷಣ ಪಡೆದದ್ದು ಕನ್ನಡ ಮಾಧ್ಯಮದಲ್ಲಿ. ಬಾಲ್ಯದಲ್ಲಿ ಗೋಡೆ, ನೆಲ ಹೀಗೆ ಎಲ್ಲೆಂದರಲ್ಲಿ ಚಿತ್ರ ಬಿಡಿಸುತ್ತಿದ್ದರು. “ಪುಣ್ಯಕೋಟಿ” ಪದ್ಯ ಅವರ ಮೇಲೆ ಗಾಢ ಪರಿಣಾಮ ಬೀರಿತ್ತು. ತಂದೆಯವರು ತಮಿಳುನಾಡಿನ ಸೇಲಂನಿಂದ ಬಂದು ಮೈಸೂರಿನ ಮಹಾರಾಜಾ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯರಾಗಿದ್ದರು. ಸುಪ್ರಸಿದ್ಧ ಕಾದಂಬರಿಕಾರ ಆರ್. ಕೆ. ನಾರಾಯಣ್ ಇವರ ಅಣ್ಣ. ಮಹಾರಾಜ ಕಾಲೇಜಿನಲ್ಲಿ ಬಿ.ಎ.ಪದವಿ ಪಡೆದರು.