Published on: August 23, 2022

ಆಲಿವ್ ರಿಡ್ಲೆ ಆಮೆಗಳು

ಆಲಿವ್ ರಿಡ್ಲೆ ಆಮೆಗಳು

where to buy provigil ireland ಸುದ್ದಿಯಲ್ಲಿ ಏಕಿದೆ?

Charqueadas ದೇವಬಾಗ್ ಬಳಿಯ ದಂಡೇಬಾಗ್‌ನಲ್ಲಿ ದಡಕ್ಕೆ ತೇಲಿಬಂದ ಆಳಸಮುದ್ರ ಮೀನುಗಾರಿಕೆಯ ಬಲೆಯಲ್ಲಿ ಎರಡು ಆಲಿವ್ ರಿಡ್ಲೆ ಆಮೆಗಳು ಸಿಲುಕಿದ್ದವು. 

ಆಲಿವ್ ರಿಡ್ಲೆ ಆಮೆಗಳು

  • ಆಲಿವ್ ರಿಡ್ಲಿ ಸಮುದ್ರ ಆಮೆ (ಲೆಪಿಡೋಚೆಲಿಸ್ ಒಲಿವೇಸಿಯಾ), ಇದನ್ನು ಸಾಮಾನ್ಯವಾಗಿ ಪೆಸಿಫಿಕ್ ರಿಡ್ಲಿ ಸಮುದ್ರ ಆಮೆ ಎಂದೂ ಕರೆಯಲಾಗುತ್ತದೆ, ಇದು ಚೆಲೋನಿಡೆ ಜಾತಿಯ ಕುಟುಂಬಕ್ಕೆ ಸೇರಿದೆ.
  • ಆಲಿವ್ ರಿಡ್ಲಿ ಆಮೆಗಳು ಅಟ್ಲಾಂಟಿಕ್, ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದಲ್ಲಿ ಉಷ್ಣವಲಯದ ಪ್ರದೇಶಗಳಲ್ಲಿ ಮತ್ತು ಅಟ್ಲಾಂಟಿಕ್ ಮಹಾಸಾಗರದಲ್ಲಿ, ಅವು ಪಶ್ಚಿಮ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದ ಕರಾವಳಿಯಲ್ಲಿ ಕಂಡುಬರುತ್ತವೆ.
  • ಕರ್ನಾಟಕದ ಕಡಲತೀರ ಪ್ರದೇಶದಲ್ಲಿ ಮೂರು ಪ್ರಬೇಧದ ಆಮೆಗಳನ್ನ ನಾವು ಕಾಣಬಹುದು. ಗ್ರೀನ ಟರ್ಟಲ್, ಹಾಕ್ ಬಿಲ್ಡ್, ಆಲಿವ್ ರಿಡ್ಲೆ ಹೀಗೆ ಮೂರು ಪ್ರಬೇಧಗಳಿವೆ.
  • ಅದರಲ್ಲಿ ಆಲಿವ್ ರಿಡ್ಲೆ ಆಮೆ ಉತ್ತರ ಕನ್ನಡ ಜಿಲ್ಲೆಯ ಕಡಲತೀರವನ್ನ ತನ್ನ ಸಂತಾನೋತ್ಪತ್ತಿ ತಾಣವನ್ನಾಗಿ ಆಯ್ಕೆ ಮಾಡಿಕೊಂಡಿದೆ. ಪ್ರಮುಖವಾಗಿ ಈ ಆಮೆಗಳು ಜನವರಿ ತಿಂಗಳಿನಿಂದ ಮಾರ್ಚ್​ವರಗೆ ಸಂತಾನೋತ್ಪತ್ತಿ ಮಾಡುತ್ತವೆ. ಪ್ರಶಾಂತವಾದ ಕಡಲತೀರ ಪ್ರದೇಶದಲ್ಲಿ ಹುಣ್ಣಿಮೆ ಬೆಳಕಿನಲ್ಲಿ ಬಂದು ಮರಳಿನಲ್ಲಿ ಗೂಡು ಕಟ್ಟಿ ಮೊಟ್ಟೆಯಿಟ್ಟು, ಮರಳಿ ಆ ಗೂಡನ್ನು ಮುಚ್ಚಿ ಯಾರಿಗೂ ಗೊತ್ತಾಗದಂತೆ ತಾನು ಬಂದ ದಾರಿಯನ್ನ ಅಳಿಸುತ್ತಾ ಮರಳಿ ಸಮುದ್ರಕ್ಕೆ ಸೇರಿಕೊಳ್ಳುತ್ತವೆ.
  • ಒಂದು ಬಾರಿ ಈ ಆಮೆ ಮೊಟ್ಟೆ ಇಟ್ಟರೆ ಸುಮಾರು 100 ಕ್ಕೂ ಹೆಚ್ಚು ಇಡುತ್ತವೆ. ಆದರು ಇತ್ತಿಚಿನ ದಿನಗಳಲ್ಲಿ ಈ ಆಮೆಗಳ ಸಂಖ್ಯೆ ತೀರಾ ಕಡಿಮೆ ಆಗುತ್ತಿದ್ದು, ಆಳಿವಿನ ಅಂಚಿಗೆ ಬಂದಿವೆ. ಹೀಗಾಗಿ ಸರ್ಕಾರ ಇವುಗಳನ್ನ ಸಂರಕ್ಷಣೆ ಮಾಡುವ ಯೋಜನೆಗೆ ಮುಂದಾಗಿದೆ.
  • ಈ ಆಮೆಗಳ ಪ್ರಾಮುಖ್ಯತೆ ಎನೆಂದರೆ, ಸಮುದ್ರದ ಆಹಾರ ಸರಪಳಿಯನ್ನ ಭದ್ರತೆಗೊಳಿಸುತ್ತವೆ. ಅನುಪಯುಕ್ತವಾದ ಜೆಲ್ಲಿ ಮೀನುಗಳನ್ನ ಇದು ಭಕ್ಷಿಸುವುದರಿಂದ ಮೀನುಗಾರಿಗೆ, ಮೀನಿನ ಸಂತತಿಯಲ್ಲಿ ಬಹಳ ಉಪಯುಕ್ತವಾದ ಪಾತ್ರ ವಹಿಸುತ್ತವೆ.
  • ವಿಪರ್ಯಾಸವೆಂದರೆ 100 ಆಮೆಗಳಲ್ಲಿ ಕೇವಲ ಒಂದು ಅಥವಾ ಎರಡು ಆಮೆಗಳು ಮಾತ್ರ ಯೌವ್ವನದ ಸ್ಥತಿ ತಲುಪುತ್ತವೆ ಎಂಬ ಉಲ್ಲೆಖಗಳಿವೆ. ಹೀಗಾಗಿ ಇದರ ಸಂತತಿ ಕಡಿಮೆ ಇದೆ. ಮುಖ್ಯವಾಗಿ ಜನರಲ್ಲಿ ಕೂಡ ಇದರ ಬಗ್ಗೆ ಅರಿವು ಅವಶ್ಯಕವಾಗಿ ಬೇಕಿದೆ. ಯಾಕೆಂದರೆ ಈ ಆಮೆಗಳ ಮೊಟ್ಟೆ, ಹೆಚ್ಚು ಪ್ರೋಟೀನ್ ಯುಕ್ತವಾಗಿದ್ದರಿಂದ ಇವುಗಳನ್ನ ತಿನ್ನುತ್ತಾರೆ. ಇದನ್ನ ತಪ್ಪಿಸಬೇಕು.