ಆಸ್ಟ್ರೇಲಿಯನ್ ಓಪನ್ 2024
ಆಸ್ಟ್ರೇಲಿಯನ್ ಓಪನ್ 2024
ಸುದ್ದಿಯಲ್ಲಿ ಏಕಿದೆ? 2024 ರ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಮಟ್ಟದ ಟೆನ್ನಿಸ್ ಪಂದ್ಯಾವಳಿಯಾಗಿದ್ದು, ಮೆಲ್ಬೋರ್ನ್ ಪಾರ್ಕ್ನಲ್ಲಿ ಜನವರಿ 2024 ರಲ್ಲಿ ನಡೆಯಿತು. ಇದು ಆಸ್ಟ್ರೇಲಿಯನ್ ಓಪನ್ನ 112ನೇ ಆವೃತ್ತಿಯಾಗಿದೆ.
ಪುರುಷರ ಸಿಂಗಲ್ಸ್
ವಿಜೇತರು: ಯಾನಿಕ್ ಸಿನ್ನರ್ (ಇಟಲಿ): ಅವರು 1969 ರಲ್ಲಿ ಓಪನ್ ಎರಾ
ಪ್ರಾರಂಭವಾದಾಗಿನಿಂದ ಇವರು 27 ನೇ ಪುರುಷರ ಸಿಂಗಲ್ಸ್ ವಿಜೇತರಾದರು ಮತ್ತು ಈ ಸಾಧನೆಯನ್ನು ಸಾಧಿಸಿದ ಮೊದಲ ಇಟಾಲಿಯನ್ ಆಟಗಾರರಾದರು.
ರನ್ನರ ಅಪ್:ಡೇನಿಯಲ್ ಮೆಡ್ವೆಡೆವ್ (ರಷ್ಯಾ)
ಮಹಿಳೆಯರ ಸಿಂಗಲ್ಸ್
ವಿಜೇತರು: ಅರಿನಾ ಸಬಲೆಂಕಾ (ಬೆಲಾರಸ್): ಇದು ಅವರ ಎರಡನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯಾಗಿದೆ
ರನ್ನರ್ ಅಪ್: ಝೆಂಗ್ ಕಿನ್ವೆನ್ (ಚೀನಾ)
ಪುರುಷರ ಡಬಲ್ಸ್
ವಿಜೇತರು: ರೋಹನ್ ಬೋಪಣ್ಣ (ಭಾರತ) ಮತ್ತು ಮ್ಯಾಥ್ಯೂ ಎಬ್ಡೆನ್(ಆಸ್ಟ್ರೇಲಿಯಾ)
ರನ್ನರ್ ಅಪ್: ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಸ್ಸೋರಿ (ಇಟಲಿ)
ಮಹಿಳೆಯರ ಡಬಲ್ಸ್
ವಿಜೇತರು: ಹ್ಸೀಹ್ ಸು-ವೀ (ತೈವಾನ್) ಮತ್ತು ಎಲಿಸ್ ಮೆರ್ಟೆನ್ಸ್
ರನ್ನರ್ ಅಪ್: ಜೆಲೆನಾ ಒಸ್ಟಾಪೆಂಕೊ ಮತ್ತು ಲ್ಯುಡ್ಮಿಲಾ ಕಿಚೆನೊಕ್ (ಲಾಟ್ವಿಯಾ-ಉಕ್ರೇನ್)
ರೋಹನ್ ಬೋಪಣ್
- ಭಾರತದ (ಕರ್ನಾಟಕ) ರೋಹನ್ ಬೋಪಣ್ಣ ಅವರು ಮೊದಲ ಗ್ರ್ಯಾನ್ ಸ್ಲ್ಯಾಮ್ ಪುರುಷರ ಡಬಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
- ಈ ಸಾಧನೆ ಮಾಡಿದ ಭಾರತದ ಮೂರನೇ ಆಟಗಾರನೆಂಬ ಹೆಗ್ಗಳಿಕೆಗೂ ರೋಹನ್ ಪಾತ್ರರಾದರು. ಈ ಹಿಂದೆ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಪ್ರಶಸ್ತಿ ಗೆದ್ದಿದ್ದರು. ಮಹಿಳೆಯರ ವಿಭಾಗದಲ್ಲಿ ಸಾನಿಯಾ ಮಿರ್ಜಾ ಜಯಿಸಿದ್ದರು.
- ರೋಹನ್ ಅವರಿಗೆ ವೃತ್ತಿ ಜೀವನದ ಎರಡನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಇದಾಗಿದೆ. 2017ರ ಫ್ರೆಂಚ್ ಓಪನ್ ಟೆನಿಸ್ನಲ್ಲಿ ಅವರು ಮಿಶ್ರ ಡಬಲ್ಸ್ನಲ್ಲಿ ಗೆದ್ದಿದ್ದರು. ಆಗ ಕೆನಡಾದ ಗ್ಯಾಬ್ರಿಯೆಲಾ ದಬ್ರೋವ್ಸ್ಕಿ ಅವರ ಜೊತೆಗಾರ್ತಿಯಾಗಿದ್ದರು.
- 43 ವರ್ಷದ ಬೋಪಣ್ಣ ಪುರುಷರ ಟೆನಿಸ್ನಲ್ಲಿ ಅತ್ಯಂತ ಹಿರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ನಿಮಗಿದು ತಿಳಿದಿರಲಿ
ನೊವಾಕ್ ಜೊಕೊವಿಕ್ ಅತಿ ಹೆಚ್ಚು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು (10) ಓಪನ್ ಎರಾದ
ದಾಖಲೆಯನ್ನು ಹೊಂದಿದ್ದಾರೆ, ನಂತರ ರೋಜರ್ ಫೆಡರರ್ (6) ಮತ್ತು ಆಂಡ್ರೆ ಅಗಾಸ್ಸಿ (4) ಇದ್ದಾರೆ.