Published on: September 1, 2021
ಆಹಾರ ತುರ್ತು ಪರಿಸ್ಥಿತಿ
ಆಹಾರ ತುರ್ತು ಪರಿಸ್ಥಿತಿ
ಸುದ್ಧಿಯಲ್ಲಿ ಏಕಿದೆ ? ಶ್ರೀಲಂಕಾದ ಖಾಸಗಿ ಬ್ಯಾಂಕುಗಳಲ್ಲಿ ವಿದೇಶಿ ವಿನಿಮಯ ಖಾಲಿಯಾದ ಪರಿಣಾಮ ಆಮದು ಪ್ರಕ್ರಿಯೆಗೆ ತಡೆ ಬಿದ್ದಿದ್ದು ಅದರ ಬೆನ್ನಲ್ಲೇ ಶ್ರೀಲಂಕಾ ಆಹಾರ ತುರ್ತುಪರಿಸ್ಥಿತಿ ಘೋಷಣೆ ಮಾಡಿದೆ.
- ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಆಹಾರ ಅಭದ್ರತೆ ತೋರಿರುವುದರಿಂದ ಸಕ್ಕರೆ, ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ದಾಸ್ತಾನಿನ ವಿರುದ್ಧ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ.
- ಶ್ರೀಲಂಕಾದಲ್ಲಿ ಅಕ್ಕಿ, ನೀರುಳ್ಳಿ, ಆಲೂಗಡ್ಡೆ ಸೇರಿದಂತೆ ಹಲವು ದಿನಸಿ ಸಾಮಗ್ರಿ ಬೆಲೆ ಗಗನಕ್ಕೇರುತ್ತಲೇ ಇದೆ. ಅಲ್ಲದೆ ಹಾಲಿನ ಪುಡಿ, ಸೀಮೆ ಎಣ್ಣೆ, ಅಡುಗೆ ಅನಿಲ ಖರೀದಿಗೆ ಗ್ರಾಹಕರು ಅಂಗಡಿ ಮುಂದೆ ಸರದಿ ನಿಲ್ಲುತ್ತಿದ್ದಾರೆ.
ಶ್ರೀಲಂಕಾದ ಆರ್ಥಿಕತೆ
- ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಶ್ರೀಲಂಕಾದ ಆರ್ಥಿಕತೆಯು 2020 ರಲ್ಲಿ 3.6 ಶೇಕಡಾ ಕಡಿಮೆಯಾಗಿದೆ. ಮಾರ್ಚ್ 2020 ರಲ್ಲಿ, ವಿದೇಶಿ ವಿನಿಮಯವನ್ನು ಉಳಿಸಲು ಸರ್ಕಾರವು ವಾಹನಗಳ ಆಮದು ಮತ್ತು ಖಾದ್ಯ ತೈಲಗಳು ಮತ್ತು ಅರಿಶಿನದಂತಹ ಇತರ ವಸ್ತುಗಳನ್ನು ನಿಷೇಧಿಸಿತು. ಸೆಂಟ್ರಲ್ ಬ್ಯಾಂಕ್ ಆಫ್ ಶ್ರೀಲಂಕಾ ಸ್ಥಳೀಯ ಕರೆನ್ಸಿಯನ್ನು ಹೆಚ್ಚಿಸುವ ಸಲುವಾಗಿ ಬಡ್ಡಿದರಗಳನ್ನು ಹೆಚ್ಚಿಸಿತು.