Published on: February 10, 2023
ಇಸ್ರೊದ ಎಸ್ಎಸ್ಎಲ್ವಿ ಡಿ–2
ಇಸ್ರೊದ ಎಸ್ಎಸ್ಎಲ್ವಿ ಡಿ–2
ಸುದ್ಧಿಯಲ್ಲಿ ಏಕಿದೆ? ಮೂರು ಉಪಗ್ರಹಗಳನ್ನು ಹೊತ್ತ ಇಸ್ರೊದ ‘ಕಿರು ಉಪಗ್ರಹ ಉಡಾವಣಾ ನೌಕೆ (ಸ್ಮಾಲ್ ಸ್ಯಾಟ್ಲೈಟ್ ಲಾಂಚ್ ವೆಹಿಕಲ್: ಎಸ್ಎಸ್ಎಲ್ವಿ-ಡಿ2)’ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೂಲಕ ನಭಕ್ಕೆ ಹಾರಿತು. ಉಪಗ್ರಗಳೆಲ್ಲವೂ ಕಕ್ಷೆಗೆ ಸೇರಿದ್ದು, ಬಾಹ್ಯಾಕಾಶ ಕಾರ್ಯಕ್ರಮ ಯಶಸ್ಸು ಕಂಡಿದೆ ಎಂದು ಇಸ್ರೋ ತಿಳಿಸಿದೆ
ಮುಖ್ಯಾಂಶಗಳು
- ‘ಎಸ್ಎಸ್ಎಲ್ವಿ’ಯ ಎರಡನೇ ಆವೃತ್ತಿಯಾದ ‘ಎಸ್ಎಸ್ಎಲ್ವಿ- ಡಿ2’ ಮೂಲಕ ಇಸ್ರೊ ತನ್ನ ಭೂ ವೀಕ್ಷಣಾ ಉಪಗ್ರಹವಾದ ಇಒಎಸ್– 07, ಅಮೆರಿಕ ಮೂಲದ ‘ಅಂಟಾರಿಸ್’ನ ‘ಜಾನಸ್’ ಮತ್ತು ಚೆನ್ನೈನ ‘ಸ್ಪೇ \ಸ್ ಕಿಡ್ಜ್ ಇಂಡಿಯಾ’ದ ‘ಆಜಾದಿಸ್ಯಾಟ್–2’ ಅನ್ನು ಕಕ್ಷೆಗೆ ಕಳುಹಿಸಿತು.
- ಈ ವರ್ಷದಲ್ಲಿ ಇಸ್ರೊದಿಂದ ನಡೆದ ಮೊದಲ ಬಾಹ್ಯಾಕಾಶ ಕಾರ್ಯಕ್ರಮ ಇದಾಗಿದೆ. 34 ಮೀಟರ್ ಎತ್ತರದ ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡಿತು.
- ‘ಕಿರು ಉಪಗ್ರಹ ಉಡಾವಣಾ ನೌಕೆ’ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸುವ ನಿಟ್ಟಿನಲ್ಲಿ ಇಸ್ರೊ ‘ಎಸ್ಎಸ್ಎಲ್ವಿ’ ಮೇಲೆ ಅಪಾರವಾದ ನಿರೀಕ್ಷೆಯನ್ನಿಟ್ಟುಕೊಂಡಿದೆ.
- ‘ಅಜಾದಿಸ್ಯಾಟ್’ ಅನ್ನು ಹೊತ್ತ ‘ಎಸ್ಎಸ್ಎಲ್ವಿ’ಯ ಮೊದಲ ಆವೃತ್ತಿಯನ್ನು ಇಸ್ರೊ 2022ರ ಆಗಸ್ಟ್ 7 ರಂದು ಉಡಾಯಿಸಿತ್ತಾದರೂ, ಕಕ್ಷೆಯ ವೈಪರೀತ್ಯ, ರಾಕೆಟ್ನ ಹಾದಿಯಲ್ಲಿನ ವಿಚಲನೆಯಿಂದಾಗಿ ಭಾಗಶಃ ವಿಫಲವಾಗಿತ್ತು. ಕೊನೇ ಹಂತದಲ್ಲಿ ದತ್ತಾಂಶ ನಷ್ಟವಾಗಿತ್ತು.
‘ಎಸ್ಎಸ್ಎಲ್ವಿ’ ಬಗ್ಗೆ
- 500 ಕೆ.ಜಿಯವರೆಗಿನ ಉಪಗ್ರಹಗಳನ್ನು ಕೆಳ ಮಟ್ಟದ ಭೂಕಕ್ಷೆಗೆ ಸೇರಿಸಲು ‘ಎಸ್ಎಸ್ಎಲ್ವಿ’ ಉಪಯುಕ್ತವಾಗಿದೆ. ಇದು ಕಡಿಮೆ ವೆಚ್ಚ, ಕಡಿಮೆ ಸಮಯ ಮತ್ತು ಹೆಚ್ಚು ಉಪಗ್ರಹಗಳನ್ನು ಸಾಗಿಸಲು ನೆರವಾಗಲಿದೆ. ಕನಿಷ್ಠ ಉಡಾವಣಾ ಮೂಲಸೌಕರ್ಯವನ್ನು ‘ಎಸ್ಎಸ್ಎಲ್ವಿ’ ಬಯಸುತ್ತದೆ.
- ಕಡಿಮೆ ತಿರುಗುವ ಸಮಯ ಮತ್ತು ಕನಿಷ್ಠ ಉಡಾವಣಾ ಮೂಲಸೌಕರ್ಯ ಸಾಕಾಗುತ್ತದೆ. 3 ಪ್ರೊಪಲ್ಷನ್ ಹಂತಗಳು ಮತ್ತು ವೇಗದ ಟರ್ಮಿನಲ್ ಮಾಡ್ಯೂಲ್ ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು 34 ಮೀಟರ್ ಎತ್ತರ, 2 ಮೀ ಸುತ್ತಳತೆ ಮತ್ತು 120 ಟನ್ ಮೇಲಕ್ಕೇರುವ ಸಾಮರ್ಥ್ಯವನ್ನು ಹೊಂದಿದೆ.
ಉಪಗ್ರಹಗಳ ವಿವರ
- ಇಒಎಸ್–07: ಇದು 156.3 ಕೆ.ಜಿ. ತೂಕದ ಭೂ ವೀಕ್ಷಣಾ ಉಪಗ್ರಹವಾಗಿದ್ದು, ಇಸ್ರೊ ಅಭಿವೃದ್ಧಿಪಡಿಸಿದೆ.
- ಜಾನಸ್-1:2 ಕೆ.ಜಿ. ತೂಕದ ಉಪಗ್ರಹವು ಅಮೆರಿಕದ ‘ಅಂಟಾರಿಸ್’ನದ್ದಾಗಿದೆ.
- ಆಜಾದಿಸ್ಯಾಟ್-2: 7 ಕೆ.ಜಿ. ತೂಕದ ಉಪಗ್ರಹವು ಭಾರತದ ಸುಮಾರು 750 ವಿದ್ಯಾರ್ಥಿನಿಯರ ಸಂಯೋಜಿತ ಪ್ರಯತ್ನದ ಫಲವಾಗಿದ್ದು, ‘ಸ್ಪೇ ಸ್ ಕಿಡ್ಜ್ ಇಂಡಿಯಾ’ ಅಭಿವೃದ್ಧಿಪಡಿಸಿದೆ.