Published on: December 21, 2022

ಇ-ಬೈಕ್ ಟ್ಯಾಕ್ಸಿ ಸೇವೆ

ಇ-ಬೈಕ್ ಟ್ಯಾಕ್ಸಿ ಸೇವೆ

ಸುದ್ದಿಯಲ್ಲಿ ಏಕಿದೆ? ಇ-ಬೈಕ್ ಟ್ಯಾಕ್ಸಿ ಸೇವೆಗಳಿಗೆ ಸರ್ಕಾರ ಅನುಮತಿಸಿದ್ದು, ಶೀಘ್ರದಲ್ಲೇ ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸಲಿವೆ.

ಮುಖ್ಯಾಂಶಗಳು

  • ಸಾರಿಗೆ ಇಲಾಖೆಯು ವಿಕೆಡ್ ರೈಡ್, ಬೌನ್ಸ್‌ ಎಂಬ ಖಾಸಗಿ ಸಂಸ್ಥೆಗೆ ಪರವಾನಗಿ ನೀಡಲಾಗಿದೆ.
  • ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ-2021 ರ ಅಡಿಯಲ್ಲಿ ಬೆಂಗಳೂರಿನಲ್ಲಿ 100 ಇ-ಬೈಕ್ ಟ್ಯಾಕ್ಸಿಗಳನ್ನು ನಿರ್ವಹಿಸಲು ಡಿಸೆಂಬರ್ ನಲ್ಲಿ  ವಿಕೆಟ್ ರೈಡ್‌ಗೆ ಅನುಮತಿ ನೀಡಲಾಗಿದೆ.
  • ಇ -ಬೈಕ್‌ಗಳು ಬೈಕ್ ಟ್ಯಾಕ್ಸಿಗಳಾಗಿ ಕಾರ್ಯನಿರ್ವಹಿಸಲು ಮಾತ್ರ ಪರವಾನಗಿ ನೀಡಲಾಗಿದೆ.
  • 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಗ್ರಾಹಕರು ಇ-ಬೈಕ್‌ಗಳನ್ನು ಬಾಡಿಗೆಗೆ ಪಡೆಯಬಹುದು.

ನಿಯಮಗಳು

  • ಬೈಕಗಳಲ್ಲಿ GPS-ಸಕ್ರಿಯಗೊಳಿಸಲಾಗಿದೆ
  • ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳು ಮೊದಲ 5 ಕಿಲೋ ಮೀಟರ್ ಗೆ ದರ ರೂ.25 ನಂತರದ 10 ಕಿ. ಮೀ ಪ್ರಯಾಣಕ್ಕೆ ರೂ.50 ದರ ವಿಧಿಸಬೇಕಿದೆ.
  • ಸವಾರ ಮತ್ತು ಹಿಂಬದಿ ಸವಾರ ಇಬ್ಬರೂ ಹಳದಿ ಹೆಲ್ಮೆಟ್ ಧರಿಸಿರಬೇಕು. ಚಾಲಕನು ‘ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ’ ಎಂದು ಗುರುತಿಸಲಾದ ಪ್ರತಿಫಲಿತ ವೆಸ್ಟ್ ಮತ್ತು ಹಳದಿ ಹೆಲ್ಮೆಟ್ ಅನ್ನು ಧರಿಸಬೇಕು.
  • ನಿರ್ವಾಹಕರು ಗ್ರಾಹಕರಿಗೆ ಹೆಚ್ಚುವರಿ ಹೆಲ್ಮೆಟ್ ನೀಡಬೇಕಾಗುತ್ತದೆ.
  • ಇ-ಬೈಕ್ ಟ್ಯಾಕ್ಸಿ ಚಾಲನೆಗೆ 5 ವರ್ಷದ ಪರವಾನಗಿಯನ್ನು ರೂ.5 ಸಾವಿರ ಭದ್ರತಾ ಠೇವಣಿ ಪಡೆದು ನೀಡಲಾಗುತ್ತದೆ.
  • ಮುಂದಿನ 5 ವರ್ಷಗಳ ಅವಧಿಗೆ ಪರವಾನಗಿ ಮಾನ್ಯವಾಗಿರುತ್ತದೆ.
  • ಪ್ರಯಾಣದ ಮೂಲ ಮತ್ತು ಗಮ್ಯಸ್ಥಾನದ ನಡುವಿನ ಅಂತರವು 10 ಕಿಮೀ ಮೀರುವಂತಿಲ್ಲ.

ಉದ್ದೇಶ

  • ನಗರ ಚಲನಶೀಲತೆಯನ್ನು ಬಲಪಡಿಸಲು ಕಳೆದ ವರ್ಷ ಜುಲೈನಲ್ಲಿ ರಾಜ್ಯ ಸರ್ಕಾರವು ಇ-ಬೈಕ್ ಟ್ಯಾಕ್ಸಿ ನೀತಿಯನ್ನು ಜಾರಿಗೆ ತಂದಿತ್ತು. ಸಾರ್ವಜನಿಕ ಸಾರಿಗೆಯನ್ನು, ವಿಶೇಷವಾಗಿ ಮೆಟ್ರೋವನ್ನು ಪ್ರವೇಶಿಸಲು ಜನರಿಗೆ ಇ-ಬೈಕ್ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ.

ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ

  • ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ‘ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ- 2021’ ಅನ್ನು ಪ್ರಾರಂಭಿಸಿದರು.

ಏನಿದು ಯೋಜನೆ?

  • ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ 2021 ರ ಮುಖ್ಯ ಉದ್ದೇಶವೆಂದರೆ ಸಾರ್ವಜನಿಕರು ತಮ್ಮ ಮನೆಗಳಿಂದ ಬಸ್ ನಿಲ್ದಾಣಗಳು, ರೈಲ್ವೆ ಮತ್ತು ಮೆಟ್ರೋ ಸ್ಟೇಷನ್‌ಗಳಿಗೆ ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ತೆರಳುವಂತೆ ಮಾಡುವುದು.
  • ವಿಶೇಷವಾಗಿ ಬೆಂಗಳೂರು ನಗರದಲ್ಲಿ ಪ್ರಯಾಣದ ಸಮಯ ಮತ್ತು ಅನನುಕೂಲತೆ ಕಡಿಮೆ ಮಾಡುವುದು. “ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ 2021 ಸಾರ್ವಜನಿಕ ಸಾರಿಗೆ ಮತ್ತು ದೈನಂದಿನ ಪ್ರಯಾಣಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.

ಯೋಜನೆಯ ಪ್ರಯೋಜನಗಳು

  • ಹೊಸ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯು ಸ್ವಯಂ ಉದ್ಯೋಗ ಸೃಷ್ಟಿ, ಪರಿಸರ ಸ್ನೇಹಿ ಪರಿಸರ, ಇಂಧನ ಸಂರಕ್ಷಣೆ, ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದು ಮತ್ತು ಸಂಬಂಧಿತ ಕೈಗಾರಿಕೆಗಳ ಸ್ಥಾಪನೆಯನ್ನು ಉತ್ತೇಜಿಸುವ ಗುರಿ ಹೊಂದಿದೆ. ಹೊಸ ಯೋಜನೆಯು ವ್ಯಕ್ತಿಗಳು, ಪಾಲುದಾರಿಕೆ ಸಂಸ್ಥೆಗಳು ಮತ್ತು ಕಂಪನಿಗಳಿಗೆ ಭಾಗವಹಿಸಲು ಅವಕಾಶ ನೀಡುತ್ತದೆ.