Published on: February 27, 2023

ಇ-ಸಂಜೀವಿನಿ ಆಪ್‌

ಇ-ಸಂಜೀವಿನಿ ಆಪ್‌


ಸುದ್ದಿಯಲ್ಲಿ ಏಕಿದೆ? ಪ್ರಧಾನಿ ನರೇಂದ್ರ ಮೋದಿಯವರು 98ನೇ ಮನ್‌ ಕಿ ಬಾತ್‌ ನಡೆಸಿಕೊಟ್ಟಿದ್ದು, ಇದರಲ್ಲಿ ಟೆಲಿ ಸಮಲೋಚನೆ ಮೂಲಕ ವೈದ್ಯಕೀಯ ಸೇವೆ ನೀಡುವ ಇ-ಸಂಜೀವಿನಿ ಆಪ್‌ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.


ಏನಿದು ಇ-ಸಂಜೀವಿನಿ?

  • ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ವೈದ್ಯರನ್ನು ಜನರು ಭೌತಿಕವಾಗಿ ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಜನರಿಗಾಗಿ ಇ-ಸಂಜೀವಿನಿ ಆಪ್‌ ಪರಿಚಯಿಸಲಾಗಿತ್ತು.
  • ಇ-ಸಂಜೀವಿನಿ ಅಂದರೆ ಇದೊಂದು ಅಂತರ್‌ಜಾಲ ಆಧರಿತ ಟೆಲಿಮೆಡಿಸಿನ್ ವೇದಿಕೆ.
  • ಇ-ಸಂಜೀವಿನಿ ವೈದ್ಯರಿಂದ ವೈದ್ಯರಿಗೆ ಮತ್ತು ರೋಗಿಯಿಂದ ವೈದ್ಯರಿಗೆ ಟೆಲಿ ಸಮಾಲೋಚನೆ ನಡೆಸುವುದನ್ನು ಸುಲಭಗೊಳಿಸಲು ಉಚಿತ, ಬ್ರೌಸರ್ ಆಧರಿತ ಆ್ಯಪ್ ಇದಾಗಿದೆ.
  • ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಆರೋಗ್ಯ ಸಚಿವಾಳಯವು ಇ-ಸಂಜೀವಿನಿ ಟೆಲಿಮೆಡಿಸಿನ್‌ ಸೇವೆ ಪರಿಚಯಿಸಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಉದ್ದೇಶ

  • ಇ-ಸಂಜೀವಿನಿಯು ಗ್ರಾಮೀಣ vs ನಗರ, ಶ್ರೀಮಂತ ಮತ್ತು ಬಡವರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಅವರ ನಡುವಿನ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡುವ ಮೂಲಕ ಆರೋಗ್ಯ ಸೇವೆಯನ್ನು ಸಮಾನಗೊಳಿಸುವ ಗುರಿ ಹೊಂದಿದೆ.

ಇ-ಸಂಜೀವಿನಿ ಬಳಕೆ

  • ಸಂಜೀವನಿ ಅನ್ನು ಈಗಲೂ ಸಾವಿರಾರು ಜನರು ಬಳಸುತ್ತಿದ್ದಾರೆ. ಇದಕ್ಕೆ ದೇಶದ ಸುಮಾರು 50,000 ಆರೋಗ್ಯ ಮತ್ತು ವೆಲ್‌ನೆಸ್‌ ಕೇಂದ್ರಗಳು ಕನೆಕ್ಟ್‌ ಆಗಿವೆ.
  • ಇ-ಸಂಜೀವಿನಿ ಮಹತ್ವಾಕಾಂಕ್ಷೆಯ ಉಪಕ್ರಮದ ಎರಡನೇ ಆವೃತ್ತಿಯು ಇ-ಸಂಜೀವಿನಿ OPD ಟೆಲಿಮೆಡಿಸಿನ್ ಪ್ಲಾಟ್‌ಫಾರ್ಮ್ ಆಗಿದೆ. ಇದನ್ನು 2020ರ ಏಪ್ರಿಲ್‌ 13ರಂದು ಆರಂಭಿಸಲಾಗಿದೆ.
  • ಇ-ಸಂಜೀವಿನಿ ಒಪಿಡಿಯಲ್ಲಿ ರೋಗಿಯ ಪರೀಕ್ಷಾ ವರದಿಯನ್ನು ಪರಿಶೀಲಿಸಿದ ನಂತರ ಸಮಾಲೋಚನೆಯ ಸೌಲಭ್ಯವೂ ಇದೆ.
  • ಇಲ್ಲಿ ರೋಗಿಯು ಕ್ಲಿಕ್ ಮಾಡುವ ಮೂಲಕ ತನ್ನ ಪರೀಕ್ಷಾ ವರದಿಯ ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಬಹುದು. ಅದನ್ನು ಈ ಆಪ್‌ ಬಳಸುವ ವೈದ್ಯರು ಪರಿಶೀಲಿಸಿ ಸಮಲೋಚನೆ ನೀಡುತ್ತಾರೆ.