Published on: September 16, 2021

‘ಉಡಾನ್’

‘ಉಡಾನ್’

ಸುದ್ಧಿಯಲ್ಲಿ ಏಕಿದೆ?  ದೈನಂದಿನ ಸಾಮಾನ್ಯ ಮಾಹಿತಿಗಳ ಬಗ್ಗೆಯೇ ದೇಶೀಯ ಭಾಷೆಗಳಲ್ಲಿ ಅನುವಾದಗಳು ಸಮರ್ಪಕವಾಗಿರದೇ ಇರುವ ಸಮಸ್ಯೆಗಳಿವೆ. ಇದಕ್ಕೆ ಪರಿಹಾರವೆಂಬಂತೆ ವಿದ್ಯಾರ್ಥಿಗಳಿಗೆ ಆಯಾ ಭಾಷೆಗಳಲ್ಲಿ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆ  ‘ಉಡಾನ್ ಎಂಬ ಯೋಜನೆಯೊಂದಕ್ಕೆ ಭಾರತೀಯ ತಂತ್ರಜ್ಞಾನ ಸಂಸ್ಥೆ- ಬಾಂಬೆ (ಐಐಟಿ)  ಚಾಲನೆ ನೀಡಿದೆ.

ಏನಿದು ಉಡಾನ್ ಯೋಜನೆ?

  • ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಿಕೊಂಡು ವೈಜ್ಞಾನಿಕ ಮತ್ತು ತಾಂತ್ರಿಕ ವಿಷಯವನ್ನು ಇಂಗ್ಲಿಷ್‌ನಿಂದ ಹಿಂದಿಗೆ ಸೇರಿದಂತೆ ಇತರ ಭಾರತೀಯ ಎಲ್ಲ ಭಾಷೆಗಳಿಗೆ ಅನುವಾದಿಸುವ ವೇದಿಕೆಯೊಂದನ್ನು ಸಿದ್ಧಪಡಿಸಲಾಗಿದೆ. ಎಂಜಿನಿಯರಿಂಗ್ ಪಠ್ಯಪುಸ್ತಕಗಳು ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ಇದು ಅನುವಾದಿಸುತ್ತದೆ. ಒಬ್ಬ ಭಾಷಾತಜ್ಞ ಕೆಲಸ ಮಾಡುವುದಕ್ಕೆ ಹಿಡಿಯುವ ಆರನೇ ಒಂದು ಭಾಗದಷ್ಟು ಸಮಯದಲ್ಲೇ ಈ ತಂತ್ರಜ್ಞಾನ ವೇದಿಕೆ ಅನುವಾದ ಮಾಡಬಲ್ಲದು.
  • ಈ ಯೋಜನೆಯನ್ನು ಇನ್ಸ್ಟಿಟ್ಯೂಟ್ ಚೇರ್ ಪ್ರೊಫೆಸರ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರೊ. ಗಣೇಶ್ ರಾಮಕೃಷ್ಣನ್ ಮತ್ತು ಅವರ ತಂಡ ಅಭಿವೃದ್ಧಿಪಡಿಸಿದೆ.
  • ಈ ಯೋಜನೆಯು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿದೆ. ಇದು ಭಾರತೀಯ ಭಾಷೆಗಳ ಮೂಲಕ ಉನ್ನತ ಶಿಕ್ಷಣವನ್ನು ನೀಡುವುದನ್ನು ಉತ್ತೇಜಿಸಲಿದ್ದು, ಮುಂದೆ ಈ ಯೋಜನೆಯು ಒಂದು ವರ್ಷದಲ್ಲಿ 500 ಎಂಜಿನಿಯರಿಂಗ್ ಪಠ್ಯಗಳನ್ನು ಹಿಂದಿಯಲ್ಲಿ ಮತ್ತು 15 ವರ್ಷಗಳಲ್ಲಿ 15 ಭಾರತೀಯ ಭಾಷೆಗಳಲ್ಲಿ ಭಾಷಾಂತರಿಸುವ ಗುರಿಯನ್ನು ಹೊಂದಿದೆ.