Published on: December 25, 2021

ಉತ್ಪನ್ನ ರಫ್ತು

ಉತ್ಪನ್ನ ರಫ್ತು

http://californiawithkids.com/tag/free-samples/ ಸುದ್ಧಿಯಲ್ಲಿ ಏಕಿದೆ ?  ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದಿಂದ ನಾನಾ ಉತ್ಪನ್ನ ರಫ್ತು ಮಾಡುವ ದೇಶದ 30 ಜಿಲ್ಲೆಗಳಲ್ಲಿ ಬಳ್ಳಾರಿ ಜಿಲ್ಲೆಯೂ ಒಂದಾಗಿದೆ. ರಾಜ್ಯ ಮಾತ್ರವಲ್ಲದೇ ಅಂತಾರಾಜ್ಯ, ರಾಷ್ಟ್ರಗಳಿಗೆ ಸ್ಥಳೀಯ ಗಣಿನಾಡಿನ ಉತ್ಪನ್ನ ಪೂರೈಕೆ ಮಾಡುವಲ್ಲಿ ಗಣಿ ಜಿಲ್ಲೆ ಮುಂಚೂಣಿಯಲ್ಲಿದೆ.

http://clindatainsight.com/wp-content/uploads/typehub/custom/mbaugruc/.v4.php ಉದ್ಯಮ ಕ್ಷೇತ್ರದಲ್ಲಿ ಛಾಪು

  • ಏಪ್ರಿಲ್‌-ಸೆಪ್ಟೆಂಬರ್‌- 2021-22ರಲ್ಲಿ ದೇಶದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಫ್ತಿನಲ್ಲಿ ತೊಡಗಿಸಿಕೊಂಡ ಭಾರತದ ಪ್ರಮುಖ 30 ಜಿಲ್ಲೆಗಳ ಪಟ್ಟಿಯಲ್ಲಿ ರಾಜ್ಯದಿಂದ ಬಳ್ಳಾರಿ,ದಕ್ಷಿಣ ಕನ್ನಡ ಒಳಗೊಂಡಿದೆ. ಇದರಿಂದ ಉದ್ಯಮ ಕ್ಷೇತ್ರದ ಬಲವರ್ಧನೆಗೆ ಇನ್ನಷ್ಟು ಸಹಕಾರಿಯಾಗಿದೆ. ಅಲ್ಲದೇ ಇಲ್ಲಿನ ಉತ್ಪನ್ನಗಳು ದೇಶದ ನಾನಾ ರಾಜ್ಯ,ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಥಾನ ಪಡೆದಿವೆ.

ವಿದೇಶಗಳಲ್ಲೂ ಜನಪ್ರಿಯ

  • ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಿಂದ ಇತ್ತೀಚೆಗೆ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ದೇಶದ ನಾನಾ ರಾಜ್ಯಗಳ ಪೈಕಿ ಒಟ್ಟು 10ರಾಜ್ಯಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿರಫ್ತು ಮಾಡುತ್ತಿರುವ 30 ಜಿಲ್ಲೆಗಳನ್ನು ಗುರುತಿಸಲಾಗಿದೆ. ಇದರಲ್ಲಿ ಕರ್ನಾಟಕದಿಂದ ಬೆಂಗಳೂರು ನಗರ, ದಕ್ಷಿಣ ಕನ್ನಡ, ಬಳ್ಳಾರಿ, ಗುಜರಾತ್‌ ರಾಜ್ಯದಿಂದ ಏಳು ಜಿಲ್ಲೆಗಳು, ತಮಿಳುನಾಡು ರಾಜ್ಯದಿಂದ 4 ಜಿಲ್ಲೆ, ಮಹಾರಾಷ್ಟ್ರದಿಂದ 7 ಜಿಲ್ಲೆ, ಉತ್ತರ ಪ್ರದೇಶದ 1ಜಿಲ್ಲೆ, ಆಂಧ್ರ ಪ್ರದೇಶದಿಂದ ಎರಡು, ಹರಿಯಾಣ, ಪಶ್ಚಿಮ ಬಂಗಾಳ, ಓಡಿಸ್ಸಾ, ರಾಜಸ್ಥಾನ ರಾಜ್ಯದಿಂದ ತಲಾ ಒಂದು ಜಿಲ್ಲೆ ಸೇರಿ ಒಟ್ಟು 30 ಜಿಲ್ಲೆಗಳನ್ನು ಪ್ರಮುಖ ರಫ್ತು ಜಿಲ್ಲೆಗಳನ್ನಾಗಿ ಗುರುತಿಸಲಾಗಿದೆ.

ಏನೇನು ರಫ್ತು?

  • ದೇಶದಲ್ಲಿ ಟಾಪ್‌ ರಫ್ತು ಮಾಡುವ ಜಿಲ್ಲೆಗಳಲ್ಲಿ ಸ್ಥಾನ ಪಡೆದಿರುವ ಬೆಂಗಳೂರು ನಗರದಿಂದ ಎಂಜಿನಿಯರಿಂಗ್‌, ಎಲೆಕ್ಟ್ರಿಕಲ್‌ ಗೂಡ್ಸ್‌, ಔಷಧಗಳು , ಟೆಕ್ಸ್‌ಟೈಲ್ಸ್‌, ಆಗ್ರ್ಯಾನಿಕ್‌ ಸೇರಿದಂತೆ ಹಲವು ವಸ್ತುಗಳನ್ನು ರಫ್ತು ಮಾಡಲಾಗುತ್ತದೆ.
  • ದಕ್ಷಿಣ ಕನ್ನಡ ಜಿಲ್ಲೆಯಿಂದ ಪೆಟ್ರೋಲಿಯಂ ಪ್ರೊಡಕ್ಟ್, ಡ್ರಗ್ಸ್‌ ಮತ್ತು ಫಾರ್ಮಾಸ್ಯುಟಿಕಲ್ಸ್‌, ಐರನ್‌, ಸಾಗರ ಉತ್ಪನ್ನ, ಎಂಜಿನಿಯರಿಂಗ್‌ ಗೂಡ್ಸ್‌
  • ಬಳ್ಳಾರಿ ಜಿಲ್ಲೆಯಿಂದ ಅಕ್ಕಿ, ಎಂಜಿನಿಯರಿಂಗ್‌ ಗೂಡ್ಸ್‌, ಕಲ್ಲಿದ್ದಲು, ಅದಿರು ಸೇರಿದಂತೆ ಇತರ ಖನಿಜಗಳು, ಹಣ್ಣು ಮತ್ತು ತರಕಾರಿ, ಡ್ರಗ್ಸ್‌ ಮತ್ತು ಫಾರ್ಮಾಸ್ಯುಟಿಕಲ್ಸ್‌, ಗ್ರಾನೈಟ್‌, ಜೀನ್ಸ್‌ ಸೇರಿದಂತೆ ನಾನಾ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಫ್ತು ಮಾಡಲಾಗುತ್ತಿದೆ.