Published on: September 23, 2021
ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ ಸ್ಕಾಲರ್ ಶಿಪ್
ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ ಸ್ಕಾಲರ್ ಶಿಪ್
ಸುದ್ಧಿಯಲ್ಲಿ ಏಕಿದೆ? ಮೊದಲ ಬಾರಿಗೆ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳ ವಿದೇಶಿ ಉನ್ನತ ಶಿಕ್ಷಣಕ್ಕಾಗಿ ಜಾರ್ಖಂಡ್ ರಾಜ್ಯ ಸರ್ಕಾರ ಸ್ಕಾಲರ್ ಶಿಪ್ ಯೋಜನೆ ಜಾರಿಗೊಳಿಸಿದೆ.
- ಈ ನೂತನ ವಿದ್ಯಾರ್ಥಿವೇತನ ಯೋಜನೆಗೆ ಮರಂಗ್ ಗೋಮ್ಕೆ ಜೈಪಾಲ್ ಸಿಂಗ್ ಮುಂಡಾ ಎಂದು ನಾಮಕರಣ ಮಾಡಿದ್ದು, ರಾಜ್ಯದಯ ಎಸ್ ಟಿ ವರ್ಗಕ್ಕೆ ಸೇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
- ಅದರ ಪ್ರಕಾರ ವರ್ಷಕ್ಕೆ 10 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು.
- ಅಯ್ಕೆಯಾದ ಅಭ್ಯರ್ಥಿಗಳು ಈ ಸ್ಕಾಲರ್ ಶಿಪ್ ಸಹಾಯದಿಂದ ಇಂಗ್ಲೆಂಡ್ ಮತ್ತು ಐರ್ಲೆಂಡ್ ದೇಶಗಳಲ್ಲಿನ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಪಡೆದುಕೊಳ್ಳಬಹುದಾಗಿದೆ.