Published on: May 14, 2024

ಉಪನಗರ ರೈಲು ಯೋಜನೆ

ಉಪನಗರ ರೈಲು ಯೋಜನೆ

ಸುದ್ದಿಯಲ್ಲಿ ಏಕಿದೆ?  ಬೆಂಗಳೂರು ಉಪನಗರ ರೈಲು ಯೋಜನೆಗೆ ರೂ. 2,693 ಕೋಟಿ (300 ಮಿಲಿಯನ್ ಯೂರೋ) ಸಾಲ ನೀಡಲು ವಿಶ್ವದ ಅತಿದೊಡ್ಡ ಬಹುಪಕ್ಷೀಯ ಹಣಕಾಸು ಸಂಸ್ಥೆಯಾದ ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ (ಯುರೋಪಿಯನ್ ಒಕ್ಕೂಟದ ಹೂಡಿಕೆ ಬ್ಯಾಂಕ್) ಒಪ್ಪಿಗೆ ನೀಡಿದೆ.

ಮುಖ್ಯಾಂಶಗಳು

  • ಉಪನಗರ ರೈಲಿನ ಅತಿ ಉದ್ದದ ಕಾರಿಡಾರ್‌ ಹೀಲಲಿಗೆ-ರಾಜಾನುಕುಂಟೆ ಮಾರ್ಗದ (ಕನಕ ಮಾರ್ಗ) ನಿರ್ಮಾಣವನ್ನು ಪ್ರಾರಂಭಿಸಿದೆ.
  • ಈ ಅನುಮೋದನೆಯೊಂದಿಗೆ 15,767 ಕೋಟಿ ರೂ.ಗಳ ಉಪನಗರ ರೈಲು ಯೋಜನೆಗೆ ಸಾಲದ ಘಟಕವನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲಾಗಿದೆ.
  • ಮತ್ತೊಂದು ಪ್ರಮುಖ ಸಾಲದಾತ ಬ್ಯಾಂಕ್ ಆಗಿರುವ ಜರ್ಮನಿಯKreditanstalt für Wiederaufbau (KfW) ಡೆವಲಪ್‌ಮೆಂಟ್ ಬ್ಯಾಂಕ್, 2023 ರ ಡಿಸೆಂಬರ್ ನಲ್ಲಿ ರೂ. 4,552 ಕೋಟಿ (500 ಮಿಲಿಯನ್ ಯುರೋ) ಸಾಲ ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ರೂ 40.96 ಕೋಟಿ (4.5 ಮಿಲಿಯನ್ ಯುರೋಗಳು) ಅನುದಾನ ನೀಡಿದೆ.

ಯೋಜನೆಯ ವಿವರ

  • ಅನುದಾನ: ಯೋಜನೆಗೆ ಕರ್ನಾಟಕ ಸರ್ಕಾರ ಮತ್ತು ಕೇಂದ್ರದಿಂದ ತಲಾ ಶೇ. 20 ರಷ್ಟು ಆರ್ಥಿಕ ನೆರವು ಶೇ. ಮತ್ತು 60 ರಷ್ಟನ್ನು ಸಾಲದ ಮೂಲಕ ಸಂಗ್ರಹಿಸಲಾಗುವುದು.
  • ಯೋಜನೆ ಅನುಷ್ಟಾನ: ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್‌)
  • 1 ಕಿಮೀ ಯೋಜನೆಯ ನಾಲ್ಕು ಕಾರಿಡಾರ್‌ಗಳಲ್ಲಿ ಎರಡನ್ನು L&T ಕಂಪನಿಗೆ ನೀಡಲಾಗಿದೆ.
  • ಮೊದಲ ಭಾಗ ಚಿಕ್ಕಬಾಣಾ ವರ-ಯಶವಂತಪುರ ನಡುವಿನ 7.4 ಕಿ.ಮೀ. ಮಾರ್ಗದಲ್ಲಿ2025 ಡಿಸೆಂಬರ್‌ ವೇಳೆಗೆ ರೈಲು ಸಂಚಾರ ಆರಂಭವಾಗಲಿದ್ದು, ಇದರಲ್ಲಿದೇಶ ದಲ್ಲೇ ಅತಿ ಉದ್ದದ ಗರ್ಡರ್‌ ಬಳಸಲಾಗುತ್ತಿದೆ

ನಾಲ್ಕು ಉಪ-ನಗರ ರೈಲು ಕಾರಿಡಾರ್‌ ಗಳು

ಕಾರಿಡಾರ್ -1 ಬೆಂಗಳೂರು- ದೇವನಹಳ್ಳಿ(ಸಂಪಿಗೆ ಮಾರ್ಗ)

ಕಾರಿಡಾರ್ -2 ಬೈಯಪ್ಪನಹಳ್ಳಿ- ಚಿಕ್ಕಬಾಣಾವರ(ಮಲ್ಲಿಗೆ ಮಾರ್ಗ)

ಕಾರಿಡಾರ್ -3 ಕೆಂಗೇರಿ- ಬೆಂಗಳೂರು ಕಂಟೋನ್ಮೆಂಟ್(ಪಾರಿಜಾತ ಲೈನ್)

ಕಾರಿಡಾರ್ -4 ಹೀಲಳಿಗೆ – ರಾಜಾನುಕುಂಟೆ(ಕನಕ ಮಾರ್ಗ)

ಉದ್ದೇಶ: ಪ್ರತಿದಿನ ಸುಮಾರು 8.9 ಲಕ್ಷ ಪ್ರಯಾಣಿಕರಿಗೆ ಸುಸ್ಥಿರ ಸಾರಿಗೆ ಮತ್ತು ಸಾರಿಗೆ ಆಧಾರಿತ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.