Published on: July 28, 2023
ಎಂಆರ್ಪಿಎಲ್ ಘಟಕ ಮಂಗಳೂರು
ಎಂಆರ್ಪಿಎಲ್ ಘಟಕ ಮಂಗಳೂರು
ಸುದ್ದಿಯಲ್ಲಿ ಏಕಿದೆ? ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಕಂಪನಿಯು2022-23ನೇ ಸಾಲಿನಲ್ಲಿ, ಒಂದೇ ಸ್ಥಳದಲ್ಲಿ ತೈಲ ಸಂಸ್ಕರಣೆ ಮಾಡುವ ದೇಶದ ಸರ್ಕಾರಿ ಸ್ವಾಮ್ಯದ ರಿಫೈನರಿಗಳ ಪೈಕಿ ಅತಿದೊಡ್ಡ ರಿಫೈನರಿ ಎಂಬ ಹೆಗ್ಗಳಿಕೆ ಪಡೆದಿದೆ.
ಮುಖ್ಯಾಂಶಗಳು
- ಕಳೆದ ಹಣಕಾಸು ವರ್ಷದಲ್ಲಿ 1.71 ಕೋಟಿ ಮೆಟ್ರಿಕ್ ಟನ್ ಕಚ್ಚಾತೈಲವನ್ನು ಸಂಸ್ಕರಿಸುವ ಮೂಲಕ ಎಂಆರ್ಪಿಎಲ್ ಈ ಸಾಧನೆಮಾಡಿದೆ.
- ರಾಷ್ಟ್ರದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಘಟಕಗಳು ಸಂಸ್ಕರಿಸುವ ಕಚ್ಚಾತೈಲದಲ್ಲಿ ಶೇ 10ರಷ್ಟನ್ನು ಎಂಆರ್ಪಿಎಲ್ ಸಂಸ್ಕರಿಸುತ್ತದೆ.
- ಜಗತ್ತಿನ 250ಕ್ಕೂ ಹೆಚ್ಚು ಬಗೆಯ ಕಚ್ಚಾ ತೈಲಗಳನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಎಂಆರ್ಪಿಎಲ್ ಹೊಂದಿದ್ದು, ಮಧ್ಯಪ್ರಾಚ್ಯ, ರಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕ, ಯುರೋಪ್ನ ಕಚ್ಚಾತೈಲವನ್ನು ಇಲ್ಲಿ ಸಂಸ್ಕರಿಸಲಾಗುತ್ತದೆ
ಎಂಆರ್ಪಿಎಲ್
- ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್, ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮಾಲೀಕತ್ವದಲ್ಲಿರುವ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಒಂದು ವಿಭಾಗವಾಗಿದೆ. ಇದನ್ನು 1988 ರಲ್ಲಿ ಸ್ಥಾಪಿಸಲಾಗಿದೆ.