Published on: November 21, 2023

‘ಎಲಿವೇಟ್– 2023’

‘ಎಲಿವೇಟ್– 2023’

ಸುದ್ದಿಯಲ್ಲಿ  ಏಕಿದೆ?  ವಾಣಿಜ್ಯೋದ್ಯಮವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಉದ್ದೇಶದಿಂದ ನವೋದ್ಯಮಗಳನ್ನು ಪ್ರೋತ್ಸಾಹಿಸಲು, ‘ಎಲಿವೇಟ್– 2023’ ಯೋಜನೆಯಡಿ ಆರಂಭಿಕ ಹಂತದ ನವೋದ್ಯಮಗಳಿಗೆ ನೆರವಾಗಲು 50 ಲಕ್ಷದವರೆಗೆ ಅನುದಾನ ನೀಡಲಾಗುವುದು ಎಂದು’ ಕರ್ನಾಟಕ ರಾಜ್ಯ ಸರ್ಕಾರ ಹೇಳಿದೆ.

ಮುಖ್ಯಾಂಶಗಳು

  • ಆಸಕ್ತ ನವೋದ್ಯಮಗಳು ಆನ್ಲೈನ್ ಮೂಲಕ ‘ಎಲಿವೇಟ್ 2023 ಮತ್ತು ಎಲಿವೇಟ್ ಉನ್ನತಿ– 2023’ ಯೋಜನೆಗೆ ಅರ್ಜಿ ಸಲ್ಲಿಸಬಹುದು.
  • ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿರುವ ನವೋದ್ಯಮಗಳಿಗೆ ಸ್ಥಳೀಯವಾಗಿ ನೆರವಾಗಲು ಅಲ್ಲಿಯೇ ವೇದಿಕೆ ಕಲ್ಪಿಸಲಾಗಿದೆ. ಈ ಯೋಜನೆಯಡಿ ಮಹಿಳಾ ಉದ್ಯಮಿಗಳಿಗೂ ನೆರವು ನೀಡಲಾಗುವುದು’.
  • ‘ಸಮಾಜ ಕಲ್ಯಾಣ ಇಲಾಖೆಯು ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆಯಡಿ ಮೀಸಲಿಟ್ಟ ಅನುದಾನದಿಂದ ‘ಎಲಿವೇಟ್ ಉನ್ನತಿ’ ಕಾರ್ಯಕ್ರಮ ಹಮ್ಮಿಕೊಂಡಿದೆ.
  • ಸ್ವಾತಂತ್ರ್ಯದ 75ನೇ ವರ್ಷದ ನೆನಪಿಗಾಗಿ ‘ಐಡಿಯಾ2ಪಿಒಸಿ– ಎಲಿವೇಟ್’ ಯೋಜನೆಯಡಿ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಮತ್ತು ಮಹಿಳಾ ಉದ್ಯಮಿಗಳನ್ನು ಗುರುತಿಸಲು ‘ಅಮೃತ ಸ್ಟಾರ್ಟ್ ಅಪ್– 2021’ ಆರಂಭಿಸಲಾಗಿದೆ.
  • ಕಲ್ಯಾಣ ಕರ್ನಾಟಕ ಭಾಗದಲ್ಲಿ ನವೋದ್ಯಮಗಳನ್ನು ಪ್ರೋತ್ಸಾಹಿಸಲು ‘ಎಲಿವೇಟ್ ಕಲ್ಯಾಣ ಕರ್ನಾಟಕ’ ಆರಂಭಿಸಲಾಗಿದೆ.
  • ಪ್ರತಿ ವರ್ಷ ಸುಮಾರು 100 ನವೋದ್ಯಮಗಳಿಗೆ ಈ ಯೋಜನೆಯಡಿ ನೆರವು ನೀಡಲಾಗುತ್ತದೆ’.

ಉದ್ದೇಶ :

ಆರಂಭಿಕ ಹಂತದ ನಿಧಿಯ ಅಗತ್ಯವಿರುವ ನವೋದ್ಯಮಿಗಳನ್ನು ಪ್ರೋತ್ಸಾಹಿಸಲು ಸರ್ಕಾರವು ಪ್ರತಿ ಸ್ಟಾರ್ಟಪ್‌ಗೆ ರೂ 50 ಲಕ್ಷದವರೆಗೆ ಒಂದು ಬಾರಿ ಅನುದಾನವನ್ನು ನೀಡುತ್ತದೆ.

ನಿಮಗಿದು ತಿಳಿದಿರಲಿ

“ಈಕ್ವಿಟಿ ರಿಟರ್ನ್ ತೆಗೆದುಕೊಳ್ಳದೆ ಸ್ಟಾರ್ಟಪ್‌ಗಳಿಗೆ ಅನುದಾನ ನೀಡುವ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ.