Published on: December 27, 2021
ಐತಿಹಾಸಿಕ ಸ್ಮಾರಕಗಳ ಸರ್ವೆ
ಐತಿಹಾಸಿಕ ಸ್ಮಾರಕಗಳ ಸರ್ವೆ
ಸುದ್ಧಿಯಲ್ಲಿ ಏಕಿದೆ ? ರಾಜ್ಯಾದ್ಯಂತ ಮಣ್ಣಿನಲ್ಲಿ ಅಡಗಿರುವ, ಅಳಿವಿನಂಚಿಗೆ ತಲುಪುತ್ತಿರುವ 25ರಿಂದ 30ಸಾವಿರ ಸ್ಮಾರಕಗಳಿದ್ದರೂ, ಸರಕಾರದಿಂದ ಸಂರಕ್ಷಣೆ ಕಾರ್ಯ ಮಾತ್ರ ಮಂದಗತಿಯಲ್ಲಿ ನಡೆಯುತ್ತಿದೆ. ಈವರೆಗೆ ಕೇವಲ 844 ಸ್ಮಾರಕಗಳನ್ನು ಮಾತ್ರ ರಾಜ್ಯ ಪುರಾತತ್ವ ಇಲಾಖೆಯಿಂದ ಸಮೀಕ್ಷೆಯಿಂದ ಪತ್ತೆ ಮಾಡಿ ಸಂರಕ್ಷಿಸಲಾಗಿದೆ.
ಪ್ರಮುಖಾಂಶಗಳು
- 2020-21ರ ಬಜೆಟ್ನಲ್ಲಿ ಐತಿಹಾಸಿಕ ದೇಗುಲ, ಪ್ರಾಚೀನ ಸ್ಥಳ, ಸ್ಮಾರಕಗಳ ಪುನರುಜ್ಜೀವನಗೊಳಿಸಲು ಸಂರಕ್ಷಣಾ ಯೋಜನೆ ಘೋಷಣೆಗೊಂಡಿತ್ತು. ಆದರೆ, ಅನುದಾನ ಕೊರತೆಯಿಂದ ಯೋಜನೆ ಮಂದಗತಿಯಲ್ಲಿ ನಡೆಯುತ್ತಿದೆ.
- 2020-21ನೇ ಆರ್ಥಿಕ ವರ್ಷದ 10ಲಕ್ಷ ರೂ. ಅನುದಾನದಲ್ಲಿ ಚಿಕ್ಕಬಳ್ಳಾಪುರ, ಶಿಕಾರಿಪುರ, ಕಲ್ಬುರ್ಗಿ, ಹಾಸನ, ಕಿತ್ತೂರು ತಾಲೂಕುಗಳಲ್ಲಿ ಮಾತ್ರ ಗ್ರಾಮವಾರು ಸ್ಮಾರಕ ಸಮೀಕ್ಷೆ ನಡೆದಿದೆ.
- 2021-22 ಸಾಲಿಗೆ 50ಲಕ್ಷ ಅನುದಾನದಲ್ಲಿ 13 ತಾಲೂಕಿನ ಸ್ಮಾರಕ ಸಮೀಕ್ಷೆ ಕೈಗೆತ್ತಿಕೊಳ್ಳಲಾಗುತ್ತಿದೆ.
ಎಲ್ಲೆಲ್ಲಿ ಸ್ಮಾರಕ ಸಮೀಕ್ಷೆ ಕೈಗೆತ್ತಿಕೊಳ್ಳಲಾಗುತ್ತಿದೆ?
- ಬೆಂಗಳೂರು, ಬೆಳಗಾವಿ, ಗುಲ್ಬರ್ಗ, ಮೈಸೂರು ವಿಭಾಗಗಳ ಜಿಲ್ಲಾವರು ಪುರಾತನ ದೇವಾಲಯ, ಮಸೀದಿ, ದರ್ಗಾ, ಪುರಾತತ್ವ ನೆಲೆ, ಕೋಟೆ, ಅರಮನೆ, ಪರಂಪರಾ ಕಟ್ಟಡ ಸೇರಿದಂತೆ ಐತಿಹಾಸಿಕ ಸ್ಮಾರಕ ಸಂರಕ್ಷಣೆ ನಡೆಸಲಾಗುತ್ತಿದೆ.
ಎಲ್ಲೆಲ್ಲಿ ನೂತನ ಸಮೀಕ್ಷೆ?
- ನಂಜನಗೂಡು, ಟಿ.ನರಸೀಪುರ, ಶ್ರೀರಂಗಪಟ್ಟಣ, ಹಾಲೂರು, ಮಂಗಳೂರು, ಮಡಿಕೇರಿ, ಬೆಂಗಳೂರು ನಗರ, ಹಿರಿಯೂರು, ರಾಯಚೂರು, ಕೊಟ್ಟೂರು, ಕಮಲಾಪುರ, ಸವಣೂರು, ಬೈಲಹೊಂಗಲ.
ಸ್ಮಾರಕ ರಕ್ಷಣೆ ಏಕೆ ಬೇಕು?
- ಐತಿಹಾಸಿಕ ಕುರುಹುಗಳಿಂದ ಅಧ್ಯಯನಗಳಿಗೆ ಸಹಕಾರಿ.
- ಪ್ರವಾಸೋದ್ಯಮ ಅಭಿವೃದ್ಧಿ.
- ಗ್ರಾಮೀಣ ಭಾಗದ ನಿಖರ ಹಿನ್ನೆಲೆ ಖಾತ್ರಿ.
- ಮುಂದಿನ ಪೀಳಿಗೆಗೆ ಇತಿಹಾಸ ಸಾಕ್ಷಿ ಒದಗಿಸಲು.