Published on: July 27, 2024

ಒಲಿಂಪಿಕ್ ಆರ್ಡರ್

ಒಲಿಂಪಿಕ್ ಆರ್ಡರ್

ಸುದ್ದಿಯಲ್ಲಿ ಏಕಿದೆ? ಇತ್ತೀಚೆಗೆ ಅಭಿನವ್ ಬಿಂದ್ರಾ ಅವರಿಗೆ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ)ಯಿಂದ ಒಲಿಂಪಿಕ್ ಆರ್ಡರ್ ಪ್ರಶಸ್ತಿಯನ್ನು ನೀಡಲಾಯಿತು.

ಮುಖ್ಯಾಂಶಗಳು

ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯಗೊಳ್ಳುವ ಒಂದು ದಿನದ ಮೊದಲು ಆಗಸ್ಟ್ 10, 2024 ರಂದು ಪ್ಯಾರಿಸ್‌ನಲ್ಲಿ ಪ್ರತಿಷ್ಠಿತ ಒಲಿಂಪಿಕ್ ಆರ್ಡರ್ ಅನ್ನು ಸ್ವೀಕರಿಸಲಿದ್ದಾರೆ.

ಒಲಿಂಪಿಕ್ ಆರ್ಡರ್ ಪ್ರಶಸ್ತಿ ವಿವರಗಳು

ಸ್ಥಾಪನೆ: 1975

ಒಲಂಪಿಕ್ ಡಿಪ್ಲೊಮಾ ಆಫ್ ಮೆರಿಟ್ ಬದಲಿಗೆ ಈ ಪ್ರಷಷ್ಠಿಯನ್ನು ಸ್ಥಾಪಿಸಲಾಯಿತು

ಚಿನ್ನ, ಬೆಳ್ಳಿ ಮತ್ತು ಕಂಚು ಮೂರು ವರ್ಗಗಳಲ್ಲಿ ನೀಡಲಾಗುತ್ತದೆ

ಒಲಂಪಿಕ್ ಆರ್ಡರ್ ಐಒಸಿಯ ಅತ್ಯುನ್ನತ ಪ್ರಶಸ್ತಿಯಾಗಿದ್ದು, ಒಲಂಪಿಕ್ ಚಟುವಟಿಕೆಗಳಿಗೆ ನೀಡಿದ ಕೊಡುಗೆಗಳಿಗಾಗಿ ನೀಡಲಾಗುತ್ತದೆ. ಇದು ಕ್ರೀಡೆಯಲ್ಲಿ ವ್ಯಕ್ತಿಯ ಗಮನಾರ್ಹ ಮತ್ತು ಅರ್ಹವಾದ ಸಾಧನೆಗಳನ್ನು ಗುರುತಿಸುತ್ತದೆ.

ನೀಡುವವರು: ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ

ಅಭಿನವ್ ಅಪ್ಜಿತ್ ಬಿಂದ್ರಾ

ಬಿಂದ್ರಾ ಅವರು 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯನ್ನು ಗೆಲ್ಲುವ ಮೂಲಕ ವೈಯಕ್ತಿಕ ಒಲಿಂಪಿಕ್ ಚಿನ್ನವನ್ನು ಗಳಿಸಿದ ಮೊದಲ ಭಾರತೀಯರಾದರು.

2018 ರಿಂದ, ಬಿಂದ್ರಾ IOC ಅಥ್ಲೀಟ್ ಆಯೋಗದ ಸದಸ್ಯರಾಗಿದ್ದಾರೆ.

ಪ್ರಶಸ್ತಿಯು ಬಿಂದ್ರಾ ಅವರು ಅಸಾಧಾರಣ ಸೇವೆ ಮತ್ತು ಒಲಿಂಪಿಕ್ ಆದರ್ಶಗಳು ಮತ್ತು ಕ್ರೀಡಾ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಗುರುತಿಸುತ್ತದೆ.

ಜನನ: 1982