Published on: August 9, 2022

ಓದುವ ಬೆಳಕು

ಓದುವ ಬೆಳಕು

ಸುದ್ದಿಯಲ್ಲಿ ಏಕಿದೆ?

ಮಕ್ಕಳ ಓದನ್ನು ಉತ್ತೇಜಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಜಾರಿಗೆ ತಂದಿರುವ ‘ಓದುವ ಬೆಳಕು’ ಯೋಜನೆಯಡಿ ಕಲಬುರ್ಗಿ ಜಿಲ್ಲೆಯಲ್ಲಿ ಒಟ್ಟು 87314 ಮಕ್ಕಳು ನೋಂದಾಯಿಸಿಕೊಂಡಿದ್ದಾರೆ.

ಮುಖ್ಯಾಂಶಗಳು

  • ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರಾಸಕ್ತಿ ಕಾರಣಕ್ಕೆ ಯೋಜನೆ ಜಾರಿಯಾದ ಮೊದಲ ವರ್ಷಕ್ಕೆ ಹೋಲಿಸಿದರೆ, ಉಳಿದ ವರ್ಷಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ.
  • ಯೋಜನೆ: 2020ರ ಮಕ್ಕಳ ದಿನಾಚರಣೆ ದಿನದಂದು 6ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಈ ಯೋಜನೆ ಜಾರಿ ಮಾಡಲಾಗಿತ್ತು.
  • ಈ ಯೋಜನೆಯಡಿ ಗ್ರಂಥಾಲಯಗಳಲ್ಲಿ ಉಚಿತವಾಗಿ ಮಕ್ಕಳ ಹೆಸರು ನೋಂದಾಯಿಸಲಾಗುತ್ತದೆ. ಅವರಿಗೆ ಪುಸ್ತಕಗಳನ್ನು ಎರವಲು ಕೊಡಲಾಗುತ್ತದೆ.
  • ನೋಂದಣಿ ಶುಲ್ಕವನ್ನು ಗ್ರಾಮ ಪಂಚಾಯಿತಿ ಸೆಸ್‌ನಿಂದ ಭರಿಸಲಾಗುತ್ತದೆ. 2020ರ ಡಿಸೆಂಬರ್ ಒಳಗೆ ಎಲ್ಲ ಮಕ್ಕಳನ್ನು ಈ ಯೋಜನೆ ವ್ಯಾಪ್ತಿಗೆ ತರುವ ಗುರಿಯಿತ್ತು. ಆದರೆ, ಈವರೆಗೆ  ಅದು ಸಾಧ್ಯವಾಗಿಲ್ಲ.