Published on: January 6, 2022
ಕಡಲ ಕಾನೂನು
ಕಡಲ ಕಾನೂನು
ಸುದ್ಧಿಯಲ್ಲಿ ಏಕಿದೆ ? ಭಾರತದ ಭೂಪಟ ನೋಡಿದಾಗ ಶ್ರೀಲಂಕಾ ಅದರಲ್ಲಿ ಕಾಣಿಸುತ್ತದೆ. ಆದರೆ, ಯಾವುದೇ ನೆರೆ ಹೊರೆಯ ದೇಶಗಳು ಕಾಣಿಸುವುದಿಲ್ಲ. ಭಾರತ ಭೂಪಟದಲ್ಲಿ ಶ್ರೀಲಂಕಾ ಕಾಣಿಸಿಕೊಂಡಿರುವುದರ ಹಿಂದೆ ಕಡಲ ಕಾನೂನು ಕಾರಣವಾಗಿದೆ.
ಮುಖ್ಯಾಂಶಗಳು
- ಇದನ್ನು ಸಾಗರ ಕಾನೂನು ಎಂದು ಕರೆಯಲಾಗುತ್ತದೆ. ವಿಶ್ವಸಂಸ್ಥೆ ಸ್ಥಾಪನೆ ನಂತರ ಈ ಕಾನೂನು ಅಸ್ತಿತ್ವಕ್ಕೆ ಬಂದಿದೆ. ಈ ಕಾಯ್ದೆ ಜಾರಿಗೆ ತರಲು ಸಾಗರ ಕಾನೂನಿನ ಮೇಲಿನ ವಿಶ್ವಸಂಸ್ಥೆ ಸಮಾವೇಶವನ್ನು (UNCLOC-1) ಮೊದಲ ಬಾರಿಗೆ 1956ರಲ್ಲಿ ನಡೆಸಲಾಯಿತು. 1958 ರಿಂದ ಈ ಕಾನೂನು ಜಾರಿಯಲ್ಲಿದೆ.
- UNCLOC-1ರಲ್ಲಿ ಕಡಲಿಗೆ ಸಂಬಂಧಿಸಿದ ಗಡಿಗಳು, ಒಪ್ಪಂದಗಳಿಗೆ ಸಂಬಂಧಿಸಿದಂತೆ ಒಮ್ಮತಕ್ಕೆ ಬರಲಾಗಿದೆ. ನಂತರ 1982 ರವರೆಗೆ ಮೂರು ಸಮ್ಮೇಳನಗಳು ನಡೆದಿವೆ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮುದ್ರಕ್ಕೆ ಸಂಬಂಧಿಸಿದ ಕಾಯ್ದೆಗಳನ್ನು ಗುರುತಿಸುವ ಪ್ರಕ್ರಿಯೆ ನಡೆದಿದೆ.
ಸಾಗರ ಕಾನೂನು ಎಂದರೆ ಏನು?
- ಈ ಕಾಯ್ದೆಯನ್ನು ಜಾರಿಗೆ ತಂದಾಗ, ಭಾರತದ ನಕ್ಷೆಯಲ್ಲಿ ಬೇಸ್ ಲೈನ್ ನಿಂದ 200 ನಾಟಿಕಲ್ ಮೈಲಿ ದೂರದಲ್ಲಿರುವ ಪ್ರದೇಶವನ್ನು ಅಂದರೆ, ಆ ದೇಶದ ಬೇಸ್ ಲೈನ್ ತೋರಿಸುವುದು ಕಡ್ಡಾಯವೆಂದು ನಿರ್ಧರಿಸಲಾಗಿದೆ. ಅಂದರೆ ಒಂದು ದೇಶ ಕರಾವಳಿಯಲ್ಲಿದ್ದರೆ ಅಥವಾ ಅದರ ಭಾಗ ಸಮುದ್ರಕ್ಕೆ ಸಂಪರ್ಕ ಹೊಂದಿದ್ದರೆ, ಆ ದೇಶದ ಗಡಿ ಸುತ್ತಲಿನ ಪ್ರದೇಶವನ್ನು ಸಹ ಆ ದೇಶದ ನಕ್ಷೆಯಲ್ಲಿ ತೋರಿಸಲಾಗುತ್ತದೆ.
- ಭಾರತದ ಭೂಪಟದಲ್ಲಿ ಶ್ರೀಲಂಕಾವನ್ನು ತೋರಿಸಲು ಇದೇ ಕಾರಣ. ಏಕೆಂದರೆ ಶ್ರೀಲಂಕಾ ಭಾರತದಿಂದ 200 ನಾಟಿಕಲ್ ಮೈಲುಗಳ ಅಂತರದಲ್ಲಿದೆ. ಭಾರತದ ಗಡಿಯ 200 ನಾಟಿಕಲ್ ಮೈಲುಗಳೊಳಗಿನ ದೂರದಲ್ಲಿದೆ. ಅದಕ್ಕಾಗಿಯೇ ಶ್ರೀಲಂಕಾ ಭಾರತದ ಭೂಪಟದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.