Published on: November 22, 2021
ಕನಕದಾಸರ 534 ನೇ ಜಯಂತಿ ಆಚರಣೆ
ಕನಕದಾಸರ 534 ನೇ ಜಯಂತಿ ಆಚರಣೆ
ಸುದ್ಧಿಯಲ್ಲಿ ಏಕಿದೆ ? ದಾಸಶ್ರೇಷ್ಠ ಕನಕದಾಸರ 534ನೇ ಜಯಂತಿಯನ್ನು 22 ನವೆಂಬರ್ ರಂದು ಆಚರಿಸಲು ಸಕಲ ಸಿದ್ಧತೆ ನಡೆದಿದೆ
ಕನಕ ದಾಸರ ಕಿರು ಪರಿಚಯ
- ಕನಕದಾಸಸರರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಜನಿಸಿದರು.
- ಬಾಡ ಗ್ರಾಮ ಕನಕದಾಸರ ಜನ್ಮಭೂಮಿಯಾದರೆ, ಬ್ಯಾಡಗಿ ತಾಲೂಕಿನ ಕಾಗಿನೆಲೆ ಕನಕದಾಸರ ಕರ್ಮಭೂಮಿ.
- ತಾಯಿ ಬಚ್ಚಮ್ಮ ಮತ್ತು ತಂದೆ ಬೀರಪ್ಪ ಅವರ ಮಗನಾಗಿ ಜನಿಸಿದ ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ.16ನೇ ಶತಮಾನದಲ್ಲಿ ಜನಿಸಿ ಅಂದಿನ ಸಮಾಜದ ಅಂಕುಡೊಂಕುಗಳನ್ನು ಕೀರ್ತನೆಗಳ ಮೂಲಕ ತಿದ್ದಿದ ಖ್ಯಾತಿ ಕನಕದಾಸರದ್ದು.
- ಪ್ರತಿವರ್ಷ ಅವರು ಜನಿಸಿದ ತಿಥಿ ನಕ್ಷತ್ರ ಮೇಲೆ ಕನಕದಾಸರ ಜಯಂತಿ ಆಚರಿಸಲಾಗುತ್ತಿದೆ.ಕಾಗಿನೆಲೆಯಲ್ಲಿ ಕನಕದಾಸರ ಗದ್ದುಗೆ ನಿರ್ಮಿಸಲಾಗಿದೆ.
- ಅಂದು ಕನಕದಾಸರು ರಚಿಸಿದ ನಳಚರಿತ್ರೆ, ಮೋಹನತರಂಗೀಣಿ,ರಾಮಧಾನ್ಯ ಚರಿತ ಮತ್ತು ಹರಿಭಕ್ತಿಸಾರ ಕೃತಿಗಳು ಕನ್ನಡ ಸಾಹಿತ್ಯದ ಶ್ರೇಷ್ಠಕೃತಿಗಳಾಗಿವೆ. ಅವರು ಕಾಗಿನೆಲೆ ಆಧಿಕೇಶವನ ಅಂಕಿತನಾಮದಲ್ಲಿ ರಚಿಸಿದ ಕೀರ್ತನೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ.