Published on: May 4, 2023
ಕರ್ನಾಟಕ ಉದ್ಯೋಗ ವರದಿ
ಕರ್ನಾಟಕ ಉದ್ಯೋಗ ವರದಿ
ಸುದ್ದಿಯಲ್ಲಿ ಏಕಿದೆ? ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಎಫ್ಐಸಿಸಿಐ) ಹಾಗೂ ಕ್ವೆಸ್ ಸಂಸ್ಥೆ ಜಂಟಿಯಾಗಿ ಹೊರತಂದ ವರದಿಯನ್ನು ಬಿಡುಗಡೆ ಮಾಡಲಾಯಿತು
ಮುಖ್ಯಾಂಶಗಳು
- ಕರ್ನಾಟಕದ ನಿರುದ್ಯೋಗ ದರವು ಭಾರತಕ್ಕಿಂತ ಕಡಿಮೆಯಾಗಿದೆ ಮತ್ತು ರಾಜ್ಯವು ಸಂಘಟಿತ ಉದ್ಯೋಗ ಸೇರ್ಪಡೆಯಲ್ಲಿ ಏರಿಕೆ ಕಾಣುತ್ತಿದೆ, ಆದರೆ ಹೆಚ್ಚಿನ ಕಾರ್ಮಿಕರನ್ನು ಸಂಘಟಿತ ವಲಯಕ್ಕೆ ಸ್ಥಳಾಂತರಿಸುವುದು ಸವಾಲಾಗಿದೆ ಸಲ್ಲಿಸಿದ ವರದಿಯಲ್ಲಿ ಹೇಳಲಾಗಿದೆ.
- ‘ರಾಜ್ಯದ 2.9 ಕೋಟಿ ಉದ್ಯೋಗಿಗಳಲ್ಲಿ ಶೇ 24.7ರಷ್ಟು (73.8 ಲಕ್ಷ) ಜನರು ಸಂಘಟಿತ ವಲಯದಲ್ಲಿದ್ದಾರೆ. ಈ ಪ್ರಮಾಣ ದೇಶದ ಸರಾಸರಿಗಿಂತ (ಶೇ 20) ಹೆಚ್ಚಿದೆ.
ವರದಿಯಲ್ಲಿರುವ ಅಂಶಗಳು
- “ಕರ್ನಾಟಕವು ಭಾರತದ ಜನಸಂಖ್ಯೆಯ 4.7 ಪ್ರತಿಶತವನ್ನು ಹೊಂದಿದೆ, ಆದರೆ ಇಪಿಎಫ್ಒ ವೇತನದಾರರ ಅಡಿಯಲ್ಲಿ ಸೇರಿಸಲಾದ ಸಂಘಟಿತ ಉದ್ಯೋಗಗಳಲ್ಲಿ ಶೇಕಡಾ 10.4 ರಷ್ಟು ಕರ್ನಾಟಕದಿಂದ ಬಂದಿದೆ” ಎಂದು ವರದಿ ಹೇಳಿದೆ. ರಾಜ್ಯದಲ್ಲಿ ಪ್ರತಿವರ್ಷ 13.5 ಲಕ್ಷ ಜನರು ಇಪಿಎಫ್ಒ, ಇಎಸ್ಐಸಿ ಅಡಿ ನೋಂದಾಯಿಸಿಕೊಳ್ಳುತ್ತಿದ್ದಾರೆ.
- ‘ನೌಕರರ ಭವಿಷ್ಯನಿಧಿ ಸಂಘಟನೆ (ಇಪಿಎಫ್ಒ) ಹಾಗೂ ನೌಕರರ ರಾಜ್ಯ ವಿಮಾನಿಗಮದ (ಇಎಸ್ಐಸಿ) ನೋಂದಣಿ ಪ್ರಕಾರ ಸಂಘಟಿತ ವಲಯದ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ. ಮಹಾರಾಷ್ಟ್ರವು ಮೊದಲ ಸ್ಥಾನದಲ್ಲಿದ್ದು, 5 ವರ್ಷ ಗಳಲ್ಲಿ 1.2 ಕೋ ಟಿ ಉದ್ಯೋಗ ಸೃಷ್ಟಿಯಾಗಿದೆ.
- ರಾಜ್ಯದಲ್ಲಿ ಜನಸಂಖ್ಯೆಯ ಶೇ 45ರಷ್ಟು (2.9 ಕೋಟಿ) ಜನರು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿದ್ದಾರೆ. 1.3 ಕೋಟಿ ಜನರು ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಉಳಿದವರು ಬೇರೆ ಕ್ಷೇತ್ರಗಳಲ್ಲಿ ಇದ್ದಾರೆ’.
- ಕರ್ನಾಟಕವು 2021-22ರಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಅಡಿಯಲ್ಲಿ 15 ಲಕ್ಷ ಉದ್ಯೋಗಗಳನ್ನು ಸೇರಿಸಿದೆ – ಇದು ಹಿಂದಿನ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ.
- ವರದಿಯ ಪ್ರಕಾರ, ರಾಜ್ಯದ 6.6 ಕೋಟಿ ಜನಸಂಖ್ಯೆಯಲ್ಲಿ, ಅಂದಾಜು 2.9 ಕೋಟಿ (ಶೇ. 43.54) ಉದ್ಯೋಗಿಗಳಿದ್ದಾರೆ. “2.9 ಕೋಟಿ ದುಡಿಯುವ ಜನಸಂಖ್ಯೆಯಲ್ಲಿ, 1.3 ಕೋಟಿ (ಶೇ. 46.6) ಕೃಷಿ ವಲಯದಲ್ಲಿ (ಅಸಂಘಟಿತ ) ಮತ್ತು ಅವರಲ್ಲಿ 1.5 ಕೋಟಿ (ಶೇ. 53.4) ಕೃಷಿಯೇತರ ವಲಯದ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಕರ್ನಾಟಕದಲ್ಲಿರುವ ಸವಾಲುಗಳು:
- ಕಾರ್ಮಿಕರನ್ನು ಪ್ರಾಥಮಿಕವಾಗಿ ಕೃಷಿಯಿಂದ ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳಿಗೆ ಸ್ಥಳಾಂತರಿಸುವ ಸವಾಲಿನ ಹೊರತಾಗಿ, 2030 ರ ವೇಳೆಗೆ ಸಂಘಟಿತ ವಲಯ ಉದ್ಯೋಗಿಗಳನ್ನು ಶೇಕಡಾ 24 ರಿಂದ 50 ಕ್ಕೆ ಹೆಚ್ಚಿಸುವುದು ಮತ್ತು ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯನ್ನು ಶೇಕಡಾ 49 ಕ್ಕೆ ಹೆಚ್ಚಿಸುವುದು ಕರ್ನಾಟಕದ ಸವಾಲಗಳೆಂದು ವರದಿ ಹೇಳಿದೆ
ವರದಿಯಲ್ಲಿರುವ ಶಿಫಾರಸ್ಸುಗಳು
- ಕರ್ನಾಟಕ ಉದ್ಯೋಗ ವರದಿ ರಾಜ್ಯದಲ್ಲಿ 5 ವರ್ಷ ಗಳಲ್ಲಿ 67.9 ಲಕ್ಷ ಉದ್ಯೋ ಗ ಸಂಘಟಿತ ವಲಯದಲ್ಲಿ ಸೃಷ್ಟಿಯಾಗಿದೆ. ಇಷ್ಟಾಗಿಯೂ ಅಸಂಘಟಿತ ವಲಯದ ಉದ್ಯೋ ಗಿಗಳನ್ನು ಸಂಘಟಿತ ವಲಯದಡಿಗೆ ತರಲು ಮಾಸಿಕ ಪ್ರೋತ್ಸಾಹಧನದಂತಹ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು
- ಶೇ 50ರಷ್ಟು ಹೆಚ್ಚಳ ಸವಾಲು: ‘ಅಸಂಘಟಿತ ವಲಯದ ಉದ್ಯೋಗಿಗಳನ್ನು ಸಂಘಟಿತ ವಲಯದಡಿ ತರುವುದು ಸವಾಲಾಗಿದೆ. ಶೇ 24.7ರಷ್ಟಿರುವ ಸಂಘಟಿತ ವಲಯ ಉದ್ಯೋಗಸ್ಥರ ಪ್ರಮಾಣವನ್ನು 2030ರ ವೇಳೆಗೆ ಶೇ 50ಕ್ಕೆ ಹೆಚ್ಚಿಸುವುದು ಕಷ್ಟ. ಆದ್ದರಿಂದ ಕೌಶಲ ವೃದ್ಧಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ವರದಿಯಲ್ಲಿ ಸಲಹೆಮಾಡಲಾಗಿದೆ.
- ‘ಸಂಘಟಿತ ವಲಯದಲ್ಲಿ ಉದ್ಯೋಗ ಸೃಷ್ಟಿ ವೇಗವಾಗಿ ನಡೆಯುತ್ತಿದೆ. ಆದರೂ ಸಂಘಟಿತ ವಲಯದಲ್ಲಿ ಉದ್ಯೋಗ ಸೃಷ್ಟಿಯ ಬಗ್ಗೆ ಜಿಲ್ಲಾವಾರು ವಿಶ್ಲೇಷಣೆ ಆಗಬೇಕಿದೆ. ಸಂಘಟಿತ ಉದ್ಯೋಗಿಗಳ ಪ್ರಮಾಣ ಹೆಚ್ಚಳಮಾಡಲು ಪ್ರತ್ಯೇಕ ನೀತಿ ಜಾರಿಗೊಳಿಸಬೇಕಾದ ಅಗತ್ಯವಿದೆ. ‘ಪ್ರಧಾನಮಂತ್ರಿ ರೋಜಗಾರ್’ ಅಂತಹ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿ, ಅನುಷ್ಠಾನಗೊಳಿಸಬೇಕು’.
- 20 ಅಭಿವೃದ್ಧಿಶೀಲ ಜಿಲ್ಲೆಗಳಲ್ಲಿ ಕಾರ್ಮಿಕ-ತೀವ್ರ ಕೈಗಾರಿಕೆಗಳಲ್ಲಿ ಮೊದಲ ಮೂರು ವರ್ಷಗಳವರೆಗೆ ಸಾಮಾಜಿಕ ಭದ್ರತೆ ಪ್ರಯೋಜನಗಳಿಗೆ ಉದ್ಯೋಗದಾತರ ಕೊಡುಗೆಗಳನ್ನು ಪಾವತಿಸಲು ಯೋಜನೆಯನ್ನು ರಚಿಸಲು ವರದಿಯು ಸರ್ಕಾರವನ್ನು ಒತ್ತಾಯಿಸಿದೆ. ಅಲ್ಲದೆ, 10 ಕಡಿಮೆ ಆದಾಯದ ಜಿಲ್ಲೆಗಳನ್ನು ಗುರುತಿಸಲು ಮತ್ತು ಮೂರು ವರ್ಷಗಳವರೆಗೆ ರಚಿಸಲಾದ ಪ್ರತಿ ಉದ್ಯೋಗಕ್ಕೆ ರೂ 2,000 ಪ್ರೋತ್ಸಾಹಕವನ್ನು ಪಾವತಿಸುವ ಮೂಲಕ ಸಂಘಟಿತ ವಲಯದಲ್ಲಿ ಉದ್ಯೋಗ ಸೃಷ್ಟಿಯನ್ನು ಬೆಂಬಲಿಸಲು ಪ್ರೋತ್ಸಾಹಕ ಕಾರ್ಯಕ್ರಮವನ್ನು ಪರಿಚಯಿಸಲು ಸರ್ಕಾರವನ್ನು ಕೇಳಿದೆ.