Published on: December 9, 2022

ಕರ್ನಾಟಕ ಯುವ ನೀತಿ

ಕರ್ನಾಟಕ ಯುವ ನೀತಿ

ಸುದ್ಧಿಯಲ್ಲಿ ಏಕಿದೆ?

ಎಲ್ಲ ಕ್ಷೇತ್ರಗಳಲ್ಲಿ ಯುವಕರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಯುವ ನೀತಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಕರ್ನಾಟಕ ಯುವ ನೀತಿ- 2022′ ಏನನ್ನು ಒಳಗೊಂಡಿದೆ ?

  • ಯುವ ಜನರ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ಯುವ ಸಬಲೀಕರಣ ನಿರ್ದೇಶನಾಲಯ, ಯುವ ಬಜೆಟ್‌, ಯುವ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆ ವ್ಯವಸ್ಥೆ ಒಳಗೊಂಡಿದೆ ‘

ಮುಖ್ಯಾಂಶಗಳು

  • ಕಳೆದ ಅಕ್ಟೋಬರ್ 2021 ರಲ್ಲಿ, ಕರ್ನಾಟಕ ಯುವ ನೀತಿಯನ್ನು ರೂಪಿಸಲು ರಾಜ್ಯ ಸರ್ಕಾರವು ತಜ್ಞರ ಸಮಿತಿಯನ್ನು ರಚಿಸಿತ್ತು.
  • ಡಾ.ಆರ್‌. ಬಾಲಸುಬ್ರಹ್ಮಣ್ಯಂ ನೇತೃತ್ವದ 14 ಮಂದಿಯ ಸಮಿತಿ ರಾಜ್ಯಾದ್ಯಂತ ಅಧ್ಯಯನ ನಡೆಸಿ, ಸಾವಿರಾರು ಜನರ ಅಭಿಪ್ರಾಯ ಸಂಗ್ರಹಿಸಿ ಸರಕಾರಕ್ಕೆ ಹಲವು ಶಿಫಾರಸು ಒಳಗೊಂಡ ಯುವನೀತಿ ಕರಡು ಸಲ್ಲಿಸಿತ್ತು. ಅದರಂತೆ ನೂತನ ಯುವ ನೀತಿಯನ್ನು ಮುಂದಿನ ಎಂಟು ವರ್ಷಕ್ಕೆ ಅಂದರೆ 2030 ರವರೆಗೆ ಕಾರ್ಯ ನಿರ್ವಹಣೆಗೆ ಅನುಮೋದನೆ ದೊರಕಿದೆ.
  • ಪ್ರಥಮ ಬಾರಿಗೆ ಇಂತಹ ಸಮಗ್ರ ನೀತಿಯನ್ನು ರೂಪಿಸಲಾಗಿದೆ.
  • ಸಮಿತಿಯು ಶಿಕ್ಷಣ, ತರಬೇತಿ, ಉದ್ಯೋಗ, ಉದ್ಯಮಶೀಲತೆ, ಆರೋಗ್ಯ ಮತ್ತು ಯೋಗಕ್ಷೇಮ, ಕ್ರೀಡೆ ಮತ್ತು ದೈಹಿಕ ಸದೃಢತೆ, ಕಲೆ ಮತ್ತು ಸಂಸ್ಕೃತಿ ಹಾಗೂ ಮೌಲ್ಯಾಧಾರಿತ ನಾಯಕತ್ವದ ಅಭಿವೃದ್ಧಿ ಸೇರಿದಂತೆ ವಿವಿಧ ಅಂಶಗಳ ಮೇಲೆ ಗಮನ ಹರಿಸುತ್ತಿದ್ದು 15 ರಿಂದ 29 ರ ವಯೋಮಾನದ ಯುವಕರಿಗೆ ಒತ್ತು ನೀಡುತ್ತದೆ.

ಯುವ ನೀತಿಯಲ್ಲಿ ಏನಿದೆ ?

  • ಯುವಜನರಿಗೆ ಭವಿಷ್ಯದ ಸವಾಲು ಎದುರಿಸಲು ಪೂರಕ ತರಬೇತಿ ನೀಡುವುದು, ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹಿಸಲು ಉದ್ಯಮಶೀಲರಿಗೆ/ ಉದ್ಯಮಿಗಳಿಗೆ ಆರ್ಥಿಕ ಬೆಂಬಲ, ಮಾರ್ಗದರ್ಶನ ನೀಡುವುದು, ನಾಯಕತ್ವ ಗುಣ ಬೆಳೆಸುವುದರ ಜತೆಗೆ ಅವಕಾಶ ಸೃಷ್ಟಿಸುವ ಮೂಲಕ ಯುವಜನರ ನಾಗರಿಕ ಮತ್ತು ರಾಜಕೀಯ ಭಾಗವಹಿಸುವಿಕೆ ಸಕ್ರಿಯಗೊಳಿಸುವುದು ಮೊದಲಾದ ಸಂಗತಿಗಳು ಯುವನೀತಿಯಲ್ಲಿವೆ.
  • ಯುವ ಬಜೆಟ್:‌ ಯುವಜನತೆಯ ಅಭಿವೃದ್ಧಿಗೆ ಸಾರ್ವಜನಿಕ ಹಣಕಾಸು ಪೂರೈಕೆ ವ್ಯವಸ್ಥಿತಗೊಳಿಸುವಂತೆ ನೆರವಾಗಲು ವಾರ್ಷಿಕ ಯುವಜನ ಬಜೆಟ್‌ ರೂಪಿಸುವುದು. ಆ ಹಣವನ್ನು ಅತ್ಯುತ್ತಮ ರೀತಿಯಲ್ಲಿ ಖರ್ಚು ಮಾಡಲು ಹಾಗೂ ಅದರ ಮೇಲ್ವಿಚಾರಣೆ ಖಾತರಿ ವ್ಯವಸ್ಥೆ ರೂಪಿಸುವ ಅಂಶವಿದೆ.
  • ಯುವನೀತಿ ಮಾಹಿತಿ ಕೋಶ ಸ್ಥಾಪನೆ
  • ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಮುಟ್ಟಿನ ನೈರ್ಮಲ್ಯ ಕೇಂದ್ರಗಳ ಸ್ಥಾಪನೆ, ಕೌಟುಂಬಿಕ ಹಿಂಸಾಚಾರ ಮತ್ತು ವೈವಾಹಿಕ ವೈಷಮ್ಯದ ಸಂತ್ರಸ್ತರ ಸಹಾಯಕ್ಕೆ ಸ್ಥಾಪನೆಯಾದ ಸಾಂತ್ವನ ಕೇಂದ್ರಗಳ ಸ್ಥಿತಿಗತಿ ಪರಿಶೀಲನೆ.
  • ಡಿಜಿಟಲ್‌ ಚಟದಿಂದ ಮಕ್ಕಳು ಮತ್ತು ಯುವಜನರನ್ನು ಮುಕ್ತಗೊಳಿಸುವ ಬಗ್ಗೆ ಪೋಷಕರಲ್ಲಿಅರಿವು ಕಾರ್ಯಕ್ರಮ.
  • ಮದ್ಯ, ತಂಬಾಕು, ಮಾದಕ ವಸ್ತು ಸೇವನೆಯಿಂದಾಗುವ ಹಾನಿ ಕುರಿತು ಜಾಗೃತಿ ಇತರೆ ಅಂಶಗಳಿವೆ.

ಅಂಕಿ ಅಂಶಗಳು

  • 2011ರ ಜನಸಂಖ್ಯೆ ಆಧಾರದಲ್ಲಿ2021-22ನೇ ಸಾಲಿನಲ್ಲಿರಾಜ್ಯದ ಒಟ್ಟು ಜನಸಂಖ್ಯೆಯಲ್ಲಿಅಂದಾಜು ಯುವಜನತೆ ಶೇ. 29 (2,11,81,723)
  • ರಾಜ್ಯದಲ್ಲಿಅತಿ ಹೆಚ್ಚು ಯುವಜನರಿರುವ ಜಿಲ್ಲೆಬೆಂಗಳೂರು ನಗರ- ಶೇ. 21.73
  • 2018ರ ದತ್ತಾಂಶದನ್ವಯ ನಿರುದ್ಯೋಗಿ ಯುವಜನತೆ- ಶೇ. 4.65
  • 2018ರ ದತ್ತಾಂಶದನ್ವಯ ಕಾರ್ಮಿಕ ಕ್ಷೇತ್ರದಲ್ಲಿತೊಡಗಿಸಿಕೊಂಡವರು. ಮಹಿಳೆಯರು- ಶೇ.1.1. ಪುರುಷರು- ಶೇ. 17 (ವಯೋಮಾನ 15- 20 ವರ್ಷ)
  • ಕಾರ್ಮಿಕ ಕ್ಷೇತ್ರದಲ್ಲಿನಿರುದ್ಯೋಗಿ ಯುವಜನತೆ- ಶೇ.11.35
  • ಕಾರ್ಮಿಕ ಕ್ಷೇತ್ರದಲ್ಲಿತರಬೇತಿ ಹೊಂದಿದ ನಿರುದ್ಯೋಗಿ ಯುವಜನತೆ- ಶೇ.0.55
  • 2019ರಲ್ಲಿಆತ್ಮಹತ್ಯೆಗೆ ಶರಣಾದ ಯುವಜನತೆ- 559
  • 2020ರಲ್ಲಿಆತ್ಮಹತ್ಯೆಗೆ ಶರಣಾದ ಯುವಜನತೆ- 398
  • 2019ರ ಅಂಕಿಸಂಖ್ಯೆ ಆಧರಿಸಿ ಶಾಲಾ ಶಿಕ್ಷಣದಿಂದ ಹೊರಬೀಳುವವರ ಪ್ರಮಾಣ
  • ಲಿಂಗ ಪ್ರಾಥಮಿಕ ಹಿರಿಯ ಪ್ರಾಥಮಿಕ ಪ್ರೌಢಶಾಲೆ
  • ಗಂಡು ಮಕ್ಕಳು ಶೇ.0.99 ಶೇ.1.21 ಶೇ.9.74
  • ಹೆಣ್ಣು ಮಕ್ಕಳು ಶೇ.0.85 ಶೇ.1.97 ಶೇ.6.23