Published on: August 27, 2022

‘ಕರ್ನಾಟಕ ವಿಷನ್ ವರದಿ’

‘ಕರ್ನಾಟಕ ವಿಷನ್ ವರದಿ’

ಸುದ್ದಿಯಲ್ಲಿ ಏಕಿದೆ?

ವಿಧಾನಸೌಧದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿ, ‘ಕರ್ನಾಟಕ ವಿಷನ್‌ ವರದಿ’ ಬಿಡುಗಡೆ ಮಾಡಿದರು. ಇಡೀ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರದ ದೂರದೃಷ್ಟಿಗಾಗಿ ‘ಕರ್ನಾಟಕ ವಿಷನ್‌ ವರದಿ’ ಹೊರತರಲಾಗಿದೆ.

ಮುಖ್ಯಾಂಶಗಳು

  • ಡಾ.ಗುರುರಾಜ್‌ ನೇತೃತ್ವದ ತಂಡ ಒಂದು ವರ್ಷ ಕಾಲ ಅಧ್ಯಯನಗಳು, ಸಂಶೋಧನೆಗಳು, ಸಭೆಗಳನ್ನು ನಡೆಸಿ ಈ ವರದಿ ರೂಪಿಸಿದೆ. 250 ಕ್ಕೂ ಅಧಿಕ ತಜ್ಞರು ಈ ವರದಿ ರೂಪಿಸಲು ಸಲಹೆ ನೀಡಿದ್ದಾರೆ. ಬೇರೆ ದೇಶಗಳ ಉತ್ತಮ ಕ್ರಮಗಳನ್ನು ಕೂಡ ಇಲ್ಲಿ ದಾಖಲಿಸಲಾಗಿದೆ.
  • ಟೆಲಿ ಮೆಡಿಸಿನ್‌, ಗ್ರಾಮೀಣ ಪ್ರದೇಶದಿಂದ ಆರಂಭವಾಗಿ ತೃತೀಯ ಹಂತದ ಆರೋಗ್ಯ ಸೇವೆ ಸೇರಿದಂತೆ ಅನೇಕ ಅಂಶಗಳನ್ನು ಇದು ಒಳಗೊಂಡಿದೆ.
  • ಗ್ರಾಮೀಣ ಪ್ರದೇಶದ ಆರೋಗ್ಯ ಸೇವೆಗೆ ಸರ್ಕಾರ ಆದ್ಯತೆ ನೀಡಿದ್ದು, ಉತ್ತರ ಕರ್ನಾಟಕ ಸೇರಿದಂತೆ ಅಭಿವೃದ್ಧಿ ವಂಚಿತ ಜಿಲ್ಲೆಗಳಲ್ಲಿ 100 ಸಮುದಾಯ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ನಗರಗಳಲ್ಲಿ ಬಿಪಿಎಲ್‌ ಕುಟುಂಬಗಳು ಹೆಚ್ಚಿರುವ ಸ್ಥಳಗಳಲ್ಲಿ ‘ನಮ್ಮ ಕ್ಲಿನಿಕ್‌’ ಆರಂಭಿಸಲಾಗುತ್ತಿದೆ. ಎರಡು ತಿಂಗಳೊಳಗೆ ಬೆಂಗಳೂರಿನಲ್ಲಿ 243 ಕ್ಲಿನಿಕ್‌ ಕಾರ್ಯಾರಂಭ ಮಾಡುವ ಉದ್ದೇಶವನ್ನು ಹೊಂದಲಾಗಿದೆ.