Published on: July 3, 2024

ಕರ್ನಾಟದಲ್ಲಿ ಪತ್ರಿಕಾ ದಿನಾಚರಣೆ

ಕರ್ನಾಟದಲ್ಲಿ ಪತ್ರಿಕಾ ದಿನಾಚರಣೆ

ಸುದ್ದಿಯಲ್ಲಿ ಏಕಿದೆ? ಪ್ರತಿ ವರ್ಷ ಕರ್ನಾಟಕದಲ್ಲಿ ಜುಲೈ 1ರಂದು ‘ಪತ್ರಿಕಾ ದಿನ’ವನ್ನು ಆಚರಿಸಲಾಗುತ್ತದೆ. ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಪ್ರಕಟಗೊಂಡ ದಿನವಾಗಿದೆ.

ಉದ್ದೇಶ

ಪತ್ರಿಕೋದ್ಯಮದ ಪರಿಚಯ, ಅದರ ಹಿನ್ನೆಲೆ, ಕಾಲಕ್ಕೆ ತಕ್ಕಂತೆ ಅದು ಬದಲಾದ ವೈಖರಿ ಬಗ್ಗೆ ಜನಸಾಮಾನ್ಯರಿಗೆ ತಿಳಿಸಬೇಕು ಎನ್ನುವ ಉದ್ದೇಶದಿಂದ ಈ ದಿನ ಕರ್ನಾಟದಲ್ಲಿ’ಪತ್ರಿಕಾ ದಿನಾಚರಣೆ’ ಆಚರಿಸಲಾಗುತ್ತದೆ.

ಮಂಗಳೂರು ಸಮಾಚಾರ

  • ಕನ್ನಡದ ಪ್ರಪ್ರಥಮ ಪತ್ರಿಕೆ ಮಂಗಳೂರು ಸಮಾಚಾರ 1843ರ ಜುಲೈ 1ರಂದ ಮಂಗಳೂರಿನಲ್ಲಿ ಬಾಸೆಲ್ ಮಿಷನ್‍ನವರ ಮುದ್ರಣಾಲಯದಿಂದ ಪ್ರಕಟವಾಯಿತು.
  • ಇದನ್ನು ಕಾಗದ ಎಂದು ಜನಪ್ರಿಯವಾಗಿ ಕರೆಯಲಾಗುತ್ತಿತ್ತು. ಇದು ಪ್ರತಿ ಹದಿನೈದು ದಿನಗಳಿ(ಎರಡು ವಾರ)ಗೊಮ್ಮೆ ಪ್ರಕಟವಾಗುತ್ತಿತ್ತು.
  • ರೆವರೆಂಡ್ ಹರ್ಮನ್ ಮೋಗ್ಲಿಂಗ್ ಅವರು ಸಂಪಾದಕರಾಗಿದ್ದರು.
  • ಜರ್ಮನ್‍ನ ಮತ ಪ್ರಚಾರಕರಾದ ಮೋಗ್ಲಿಂಗ್ ಅವರನ್ನು ಕನ್ನಡ ಪತ್ರಿಕೋದ್ಯಮದ ಮೂಲಪುರುಷ, ಕನ್ನಡ ಪತ್ರಿಕೋದ್ಯಮದ ಪಿತಾಮಹ ಎಂದು ಅವರನ್ನು ಕರೆಯಲಾಗುತ್ತದೆ.

ಭಾರತದ ಮೊದಲ ಪತ್ರಿಕೆ

  • 1780 ರಲ್ಲಿ ಭಾರತದ ಮೊದಲ ಪತ್ರಿಕೆ ಬೆಂಗಾಲ್ ಗೆಜೆಟ್ ಅನ್ನು ಪ್ರಕಟಿಸಲಾಯಿತು.
  • ಬ್ರಿಟಿಷ್ ಭಾರತದ ರಾಜಧಾನಿ ಕೋಲ್ಕತ್ತಾದಲ್ಲಿ ಪ್ರಕಟವಾದ ಇಂಗ್ಲಿಷ್ ಭಾಷೆಯ ವಾರಪತ್ರಿಕೆಯಾಗಿತ್ತು
  • ಇದು ಏಷ್ಯಾದಲ್ಲಿ ಮುದ್ರಿತವಾದ ಮೊದಲ ಪತ್ರಿಕೆಯಾಗಿದೆ ಮತ್ತು 1780 ಮತ್ತು1782 ನಡುವೆ ಎರಡು ವರ್ಷಗಳ ಕಾಲ ಪ್ರಕಟವಾಯಿತು
  • ಸಂಪಾದಕರು: ಜೇಮ್ಸ್ ಅಗಸ್ಟಸ್ ಹಿಕಿ