Published on: December 28, 2022

ಕಲಾಗ್ರಾಮ

ಕಲಾಗ್ರಾಮ

Ji’an ಸುದ್ದಿಯಲ್ಲಿ ಏಕಿದೆ? Felipe Carrillo Puerto ರಾಜಸ್ಥಾನದ ‘ಚೋಖಿ ಧನಿ’ ಮಾದರಿಯಲ್ಲಿ, ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಮಲ್ಲತ್ತಹಳ್ಳಿಯ ಕಲಾಗ್ರಾಮವನ್ನು ಅಭಿವೃದ್ಧಿ ಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ.

ಮುಖ್ಯಾಂಶಗಳು

  • ಮೂಲಸೌಕರ್ಯಗಳ ಕೊರತೆಯಿರುವ ಕಲಾಗ್ರಾಮಕ್ಕೆ ಕಾಯಕಲ್ಪ ನೀಡಬೇಕೆಂಬ ಆಗ್ರಹ ಕಲಾವಿದರ ವಲಯದಲ್ಲಿತ್ತು. ಹೀಗಾಗಿ, ಅಲ್ಲಿ ನಿರಂತರ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಹಾಗೂ ಪ್ರವಾಸಿಗರನ್ನು ಸೆಳೆಯಲು ಇಲಾಖೆ ಮುಂದಾಗಿದೆ.
  • ವಿವಿಧ ಸಾಂಸ್ಕೃತಿಕ ಚಟುವಟಿಕಗಳ ಜತೆಗೆ ವಸತಿ, ಆಹಾರ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ, ಥೀಮ್ ಪಾರ್ಕ್ ಸೇರಿ ಹಲವು ವೈವಿಧ್ಯಗಳನ್ನು ಒಂದೇ ಸೂರಿನಡಿ ತರಲಾಗುತ್ತದೆ.
  • ಕರ್ನಾಟಕ ಲಲಿತಕಲಾ ಅಕಾಡೆಮಿಯ ಆಡಳಿತ ಕಚೇರಿ ತಲೆಯೆತ್ತುತ್ತಿದೆ.  ‘ಕಲಾಗ್ರಾಮದಲ್ಲಿ ನಾಟಕ, ಯಕ್ಷಗಾನ, ಜಾನಪದ ನೃತ್ಯ, ಸಂಗೀತ ಸೇರಿ ರಾಜ್ಯದ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುತ್ತದೆ.
  • ರಾಜ್ಯದ ವಿವಿಧ ಭಾಗಗಳ ಆಹಾರವೂ ಒಂದೆಡೆ ಸಿಗುವಂತೆ ಮಾಡಲಾಗುವುದು.

ರಾಜಸ್ಥಾನದ ಚೋಖಿ ಧನಿ

  • ಮನರಂಜನೆ ಜತೆಗೆ ಆತಿಥ್ಯ: ರಾಜಸ್ಥಾನದಲ್ಲಿ ಅಭಿವೃದ್ಧಿಪಡಿಸಲಾದ ಚೋಖಿ ಧನಿ ಗ್ರಾಮದಲ್ಲಿ ಸ್ಥಳೀಯ ಪರಂಪರೆ ಮತ್ತು ಸಂಸ್ಕೃತಿಗೆ ಉತ್ತೇಜನ ನೀಡಲಾಗುತ್ತಿದೆ. ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ ಪಡೆದಿದೆ. ಇಲ್ಲಿ ರಾಜಸ್ಥಾನ ಕಲಾ ಪ್ರಕಾರಗಳ ಜತೆಗೆ ಸ್ಥಳೀಯ ಆಹಾರ ಸವಿಯುವ ಅವಕಾಶವು ಇದೆ. ವಿವಿಧ ದರ್ಜೆಯ ಹೋಟೆಲ್ ಗಳು ಇವೆ. ಸ್ಥಳೀಯ ಕಲಾವಿದರಿಗೆ ಪ್ರದರ್ಶನಗಳನ್ನು ನಡೆಸಲು ಅವಕಾಶ ಒದಗಿಸಲಾಗಿದೆ. ವಿವಿಧ ಕಲಾ ಉತ್ಸವಗಳನ್ನೂ ನಡೆಸಲಾಗುತ್ತಿದೆ