Published on: July 13, 2022

ಕಾಟ್ಸಾ ಕಾಯ್ದೆಗೆ ತಿದ್ದುಪಡಿ

ಕಾಟ್ಸಾ ಕಾಯ್ದೆಗೆ ತಿದ್ದುಪಡಿ

http://thelittersitter.com/about/img_5509/ ಸುದ್ದಿಯಲ್ಲಿ ಏಕಿದೆ?

http://manglikrishta.com/category/thirty-plus-brides/ ರಷ್ಯಾದಿಂದ ಎಸ್- 400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿ ಸಂಬಂಧ ಭಾರತಕ್ಕೆ ಪ್ರತಿಕೂಲವಾಗಿರುವ ಕಾಟ್ಸಾ ಕಾಯ್ದೆಗೆ ಅಮೆರಿಕದ ಸಂಸತ್ನಲ್ಲಿ ಶಾಸನಾತ್ಮಕ ತಿದ್ದುಪಡಿ ಮಸೂದೆಯನ್ನು ಭಾರತ – ಅಮೆರಿಕದ ಕಾಂಗ್ರೆಸ್ಸಿಗ ರೋ ಖನ್ನಾ ಮಂಡಿಸಿದ್ದಾರೆ.

ಮುಖ್ಯಾಂಶಗಳು·        

 • ಕಾಟ್ಸಾ (ಸಿಎಎಟಿಎಸ್) ಕಾಯ್ದೆಯ ತಿದ್ದುಪಡಿ ಮಸೂದೆ ಅಮೆರಿಕ ಮತ್ತು ಭಾರತದ ರಕ್ಷಣಾ ಸಂಬಂಧವನ್ನು ಬಲಪಡಿಸುತ್ತದೆ ಮತ್ತು ಆಕ್ರಮಣಕಾರರನ್ನು ಹಿಮ್ಮೆಟ್ಟಿಸುತ್ತದೆ.·         ಉಭಯ ರಾಷ್ಟ್ರಗಳ ಬಾಂಧವ್ಯ ವೃದ್ಧಿಸಲು ಇದು ಅತ್ಯಂತ ತುರ್ತು ಕ್ರಮವಾಗಿದೆ’

ಹಿನ್ನಲೆ         

 • ಎಸ್ -400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ರಷ್ಯಾದಿಂದ ಖರೀದಿಸಿದ ಟರ್ಕಿ ಮೇಲೆ ಅಮೆರಿಕ ಈಗಾಗಲೇ ಕಾಟ್ಸಾ (ಸಿಎಎಟಿಎಸ್) ಕಾಯ್ದೆಯ ನಿರ್ಬಂಧಗಳನ್ನು ಹೇರಿದೆ. ಇದೇ ನಿರ್ಬಂಧಗಳನ್ನು ಭಾರತದ ಮೇಲೂ ಹೇರುವ ಅಂದಾಜು ಇದೆ·
 • ಭಾರತವು ರಷ್ಯಾದಿಂದ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಸ್ವೀಕರಿಸಲು ಪ್ರಾರಂಭಿಸಿದೆ.·
 • ಈ ಹಿನ್ನೆಲೆಯಲ್ಲಿ ಅಮೆರಿಕ ವಿರೋಧಿ ನಡೆ ಅನುಸರಿಸುವ ರಾಷ್ಟ್ರಗಳ ಮೇಲೆ ವಿಧಿಸುವ CAATSA ಅಥವಾ ಕಾಟ್ಸಾ ಕಾಯ್ದೆಯನ್ನು ಭಾರತಕ್ಕೆ ವಿಧಿಸದಿರಲು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಮೆರಿಕ ಸ್ಪಷ್ಟನೆ ನೀಡಿದೆ.

ಏನಿದು S-400 ಕ್ಷಿಪಣಿ?     

 • ಇದು ಸುಧಾರಿತ, ದೀರ್ಘ-ಶ್ರೇಣಿಯ, ಮೇಲ್ಮೈಯಿಂದ ಗಾಳಿಗೆ ನೆಗೆಯುವ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದೆ. ಅಮೆರಿದ ಥಾಡ್ ಕ್ಷಿಪಣಿ ವ್ಯವಸ್ಥೆಗಿಂತಲೂ S-400 ಬಹಳ ಶಕ್ತಿಶಾಲಿ.

S-400 ಟ್ರಯಂಫ್ (Triumf) ವಾಯು ರಕ್ಷಣಾ ವ್ಯವಸ್ಥೆ ಎಂದರೇನು?·        

 • S-400 ಟ್ರಯಂಫ್ ಮಾಸ್ಕೋ ಮೂಲದ ಅಲ್ಮಾಜ್ ಸೆಂಟ್ರಲ್ ಡಿಸೈನ್ ಬ್ಯೂರೋದಿಂದ ತಯಾರಾದ SA-21ನ ನ್ಯಾಟೋ ಪದನಾಮವನ್ನು ಹೊಂದಿದೆ. ರಫ್ತಿಗೆ ಉದ್ದೇಶಿಸಲಾದ ರಷ್ಯಾದ ಆರ್ಸೆನಲ್ನಲ್ಲಿ ಅತ್ಯಂತ ಆಧುನಿಕ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ.·
 •  ಒಳಬರುವ ಶತ್ರು ವಿಮಾನಗಳು, ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು 400 ಕಿ.ಮೀ. ವ್ಯಾಪ್ತಿಯೊಳಗೆ ನಾಶಪಡಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಇದು ಸುಮಾರು 600 ಕಿ.ಮೀ. ಟ್ರ್ಯಾಕಿಂಗ್ ಸಾಮರ್ಥ್ಯವನ್ನು ಹೊಂದಿದೆ.·
 • ಸುಮಾರು 400 ಕಿ.ಮೀ. ದೂರದಲ್ಲಿರುವ ಸ್ಟೆಲ್ತ್ ತಂತ್ರಜ್ಞಾನಗಳನ್ನು ಒಳಗೊಂಡಂತೆ ಹಾರುವ ಗುರಿಗಳನ್ನು ಹೊಡೆದುರುಳಿಸಲು ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಸಿಡಿತಲೆ ಕ್ಷಿಪಣಿಗಳು ಮತ್ತು ಶಬ್ದಾತೀತ ಗುರಿಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಹಿಂದಿನ ಆವೃತ್ತಿಯಾದ S-300ಗೆ ಹೋಲಿಸಿದರೆ S-400 ಸುಮಾರು 2.5 ಪಟ್ಟು ಹೆಚ್ಚು ವೇಗದ ಫೈರಿಂಗ್ ದರವನ್ನು ಹೊಂದಿದೆ.·
 • S-400 ಬ್ಯಾಟರಿಯು ದೀರ್ಘ-ಶ್ರೇಣಿಯ ರೇಡಾರ್, ಕಮಾಂಡ್ ಪೋಸ್ಟ್ ವೆಹಿಕಲ್, ಟಾರ್ಗೆಟ್ ಅಕ್ವಿಸಿಷನ್ ರೇಡಾರ್ ಮತ್ತು ಎರಡು ಬೆಟಾಲಿಯನ್ ಲಾಂಚರ್ಗಳನ್ನು ಒಳಗೊಂಡಿದೆ (ಪ್ರತಿ ಬೆಟಾಲಿಯನ್ ಎಂಟು ಸಿಬ್ಬಂದಿಯನ್ನು ಹೊಂದಿದೆ). ಪ್ರತಿ ಲಾಂಚರ್ ನಾಲ್ಕು ಟ್ಯೂಬ್ಗಳನ್ನು ಹೊಂದಿರುತ್ತದೆ.·
 • S-400 ಅನ್ನು 400 ಕಿ.ಮೀ., 250 ಕಿ.ಮೀ., 120 ಕಿ.ಮೀ. ಮತ್ತು 40 ಕಿ.ಮೀ. ವ್ಯಾಪ್ತಿಯ ನಾಲ್ಕು ವಿಭಿನ್ನ ರೀತಿಯ ಕ್ಷಿಪಣಿಗಳೊಂದಿಗೆ ಶಸ್ತ್ರಸಜ್ಜಿತಗೊಳಿಸಬಹುದು. ದೀರ್ಘ-ಶ್ರೇಣಿಯ ರಾಡಾರ್ ಒಂದು ಡಜನ್ ಗುರಿಯನ್ನು ತೊಡಗಿಸಿಕೊಳ್ಳುವ ಜತೆಗೆ ಏಕಕಾಲದಲ್ಲಿ 100ಕ್ಕೂ ಹೆಚ್ಚು ಹಾರುವ ವಸ್ತುಗಳನ್ನು ಟ್ರ್ಯಾಕ್ ಮಾಡಬಹುದು.

ಪ್ರತಿಸ್ಪರ್ಧಿಗಳೊಂದಿಗೆ ಹೋಲಿಕೆ·        

 • ಅಮೆರಿಕ-ನಿರ್ಮಿತ ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್, ಅಥವಾ THAAD, “ಕಡಿಮೆ ವ್ಯಾಪ್ತಿಯನ್ನು ಹೊಂದಿದೆ ಮತ್ತು ಕ್ಷಿತಿಜವನ್ನು ಮೀರಿ ಗುರಿಗಳನ್ನು ಹೊಡೆಯಲು ಅಸಮರ್ಥವಾಗಿದೆ.” ಆದರೆ ಇದು ಕೇವಲ ಸಿಡಿತಲೆ ವಿರೋಧಿ ಕ್ಷಿಪಣಿ ವ್ಯವಸ್ಥೆಯಾಗಿರುವುದರಿಂದ, ಇತರ ವೈಮಾನಿಕ ಗುರಿಗಳನ್ನು ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. S-400 ರ ಮತ್ತೊಂದು ಸುವಿಖ್ಯಾತ ಸಾಮರ್ಥ್ಯವೆಂದರೆ ಅದರ “ಉಡಾಯಿಸಿ ಮರೆತುಬಿಡಬಹುದಾದ ಸಾಮರ್ಥ್ಯ” (fire-and-forget capability) ಕ್ಷಿಪಣಿಗಳೊಂದಿಗೆ ಹೋಮಿಂಗ್ ಸಾಧನವನ್ನು ಅಳವಡಿಸಲಾಗಿದ್ದು, ಅದು ಗುರಿಯನ್ನು ಲಾಕ್ ಮಾಡುತ್ತದೆ ಮತ್ತು ನಾಶಪಡಿಸುತ್ತದೆ.·
 • ಕಾರ್ಯನಿರ್ವಹಿಸಬಹುದಾದ ವ್ಯಾಪ್ತಿ ಮತ್ತು ಎತ್ತರ ಎರಡರಲ್ಲೂ ಅಮೆರಿಕದ ತಂತ್ರಜ್ಞಾನಕ್ಕಿಂತ ಇದು ಉತ್ತಮವಾಗಿದೆ ಎಂದು ರಷ್ಯಾದ ಮಿಲಿಟರಿ ತಜ್ಞರು S-400 ಕುರಿತಾಗಿ ಹೇಳಿರುವುದು ವರದಿಯಾಗಿದೆ. ಇದು 400 ಕಿ.ಮೀ. ದೂರದ ಗುರಿಗಳತ್ತ ಕ್ಷಿಪಣಿಗಳನ್ನು ಉಡಾಯಿಸುವ ಜತೆಗೆ 27 ಕಿ.ಮೀ. ಎತ್ತರದಲ್ಲಿ ಬೆದರಿಕೆಗಳನ್ನು ತಡೆಯುತ್ತದೆ. “ಗರಿಷ್ಠ ಗುರಿ ವಿನಾಶದ ಶ್ರೇಣಿಯ ವಿಷಯದಲ್ಲಿ, S-400 ಅದರ ಪ್ರತಿರೂಪಗಳನ್ನು ಸುಮಾರು ಎರಡು ಪಟ್ಟು ಮೀರಿಸುತ್ತದೆ … (ಮತ್ತು) 10 ಮೀಟರ್ ಎತ್ತರದಲ್ಲಿ ಕ್ರೂಸ್ ಕ್ಷಿಪಣಿ ಅಥವಾ ಯಾವುದೇ ಶತ್ರು ವಿಮಾನವನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ”.

ಕಾಟ್ಸಾ ಕಾಯ್ದೆ

 • ನಿರ್ಬಂಧಗಳ ಮೂಲಕ ಅಮೆರಿಕದ ವಿರೋಧಿಗಳನ್ನು ಎದುರಿಸುವ ಕಾಯಿದೆ (CAATSA) ಇರಾನ್, ರಷ್ಯಾ ಮತ್ತು ಉತ್ತರ ಕೊರಿಯಾದ ವಿರುದ್ಧ ನಿರ್ಬಂಧಗಳನ್ನು ವಿಧಿಸಿರುವ ಯುನೈಟೆಡ್ ಸ್ಟೇಟ್ಸ್ ಫೆಡರಲ್ ಕಾನೂನು. ಈ ಕಾಯಿದೆಯು ಯುನೈಟೆಡ್ ಸ್ಟೇಟ್ಸ್‌ನ ವ್ಯಾಪಾರ ಪಾಲುದಾರರು ಈ ಮೂರು ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳುವುದನ್ನು ತಡೆಯುತ್ತದೆ.·
 • ಮಸೂದೆಯನ್ನು 27 ಜುಲೈ 2017 ರಂದು ಅಂಗೀಕರಿಸಲಾಯಿತು. 2017ರಲ್ಲಿ ಜಾರಿಗೆ ತರಲಾದ CAATSA, ರಷ್ಯಾದ ರಕ್ಷಣಾ ಮತ್ತು ಗುಪ್ತಚರ ಕ್ಷೇತ್ರಗಳೊಂದಿಗೆ ವಹಿವಾಟುಗಳಲ್ಲಿ ತೊಡಗಿರುವ ಯಾವುದೇ ದೇಶದ ವಿರುದ್ಧ ದಂಡನಾತ್ಮಕ ಕ್ರಮಗಳಿಗೆ ಅವಕಾಶ ಒದಗಿಸುತ್ತದೆ.