Published on: July 19, 2022

ಕಾಟ್ಸಾ ಕಾಯ್ದೆಯಿಂದ ಭಾರತಕ್ಕೆ ವಿನಾಯಿತಿ:

ಕಾಟ್ಸಾ ಕಾಯ್ದೆಯಿಂದ ಭಾರತಕ್ಕೆ ವಿನಾಯಿತಿ:

painfully ಸುದ್ದಿಯಲ್ಲಿ ಏಕಿದೆ?

http://gentlemantraveller.com/quilted-shacket-aw14/?share=pinterest ಚೀನಾದಂತಹ ಆಕ್ರಮಣಕಾರರನ್ನು ತಡೆಯಲು ನೆರವಾಗಲು ರಷ್ಯಾದಿಂದ ಭಾರತ ಖರೀದಿಸುತ್ತಿರುವ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಸಿಎಎಟಿಎಸ್ ಎಸ್ (ಕಾಟ್ಸಾ) ಕಾಯ್ದೆಯಿಂದ ವಿನಾಯಿತಿ ನೀಡುವ ತಿದ್ದುಪಡಿ ಮಸೂದೆಗೆ ಅಮೆರಿಕದ ಪ್ರಜಾ ಪ್ರತಿನಿಧಿ ಸಭೆಯಲ್ಲಿ ಧ್ವನಿಮತದ ಅಂಗೀಕಾರ ದೊರೆತಿದೆ.

ಮುಖ್ಯಾಂಶಗಳು

  • ಭಾರತೀಯ-ಅಮೆರಿಕನ್ ಕಾಂಗ್ರೆಸ್ ಸದಸ್ಯ ರೋ ಖನ್ನಾ ಅವರು ತಿದ್ದುಪಡಿ ಮಸೂದೆ ಮಂಡಿಸಿದರು. ಈ ತಿದ್ದುಪಡಿ ಕಾಯ್ದೆಯು ಚೀನಾದಂತಹ ಆಕ್ರಮಣಕಾರರನ್ನು ತಡೆಯಲು ಸಹಾಯ ಮಾಡುವ ನಿಟ್ಟಿನಲ್ಲಿ ವಿನಾಯಿತಿಯನ್ನು ಭಾರತಕ್ಕೆ ಒದಗಿಸಲು ಬೈಡನ್ ಆಡಳಿತ ಅನುವು ಮಾಡಿಕೊಟ್ಟಿದೆ.
  • ಅಕ್ಟೋಬರ್ 2018ರಲ್ಲಿ ಎಸ್ -400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಷೆಗಳ ಐದು ಘಟಕಗಳನ್ನು ಖರೀದಿಸಲು ಭಾರತ ರಷ್ಯಾದೊಂದಿಗೆ 5 ಶತಕೋಟಿ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿತ್ತು.

ಕಾಟ್ಸಾ ಕಾನೂನು ಎಂದರೇನು?

  • 2014ರಲ್ಲಿ ಕ್ರೈಮಿಯಾವನ್ನು ಸ್ವಾಧೀನಪಡಿಸಿಕೊಂಡ ಮತ್ತು 2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಧ್ಯ ಪ್ರವೇಶಿಸಿದ್ದ ರಷ್ಯಾ ಕ್ರಮಕ್ಕೆ ಪ್ರತಿಯಾಗಿ ಆ ದೇಶದಿಂದ ಪ್ರಮುಖ ರಕ್ಷಣಾ ಯಂತ್ರಗಳನ್ನು ಖರೀದಿಸುವ ದೇಶಗಳ ಮೇಲೆ ನಿರ್ಬಂಧಗಳನ್ನು ವಿಧಿಸಲು ಕಾಟ್ಸಾ ಅಮೆರಿಕ ಆಡಳಿತಕ್ಕೆ ಅಧಿಕಾರ ನೀಡುವ ಕಠಿಣ ಕಾನೂನು ಆಗಿದೆ.