Published on: October 12, 2021
ಕಾಮನ್ ಮೊಬಿಲಿಟಿ ಕಾರ್ಡ್
ಕಾಮನ್ ಮೊಬಿಲಿಟಿ ಕಾರ್ಡ್
ಸುದ್ಧಿಯಲ್ಲಿ ಏಕಿದೆ? ಬಿಎಂಆರ್ಸಿಎಲ್ ಅಕ್ಟೋಬರ್ 21 ರಂದು, ಬಹುನಿರೀಕ್ಷಿತ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಬಿಡುಗಡೆ ಮಾಡುತ್ತಿದೆ.
- ಮೊದಲ ಹಂತದಲ್ಲಿ 25,000 ಕಾರ್ಡ್ಗಳನ್ನು ಸಂಸ್ಥೆ ಪರಿಚಯಿಸುತ್ತಿದೆ. ನಮ್ಮ ಮೆಟ್ರೋದಲ್ಲಿ ಮಾತ್ರವಲ್ಲದೆ ಶಾಪಿಂಗ್ಗೂ ಇದನ್ನು ಉಪಯೋಗ ಮಾಡಬಹುದಾಗಿದೆ.
- ಈ ಕಾರ್ಡ್ ಅನ್ನು ಕೇವಲ ಕರ್ನಾಟಕದ ಮೆಟ್ರೋ ಮಾತ್ರವಲ್ಲದೆ ದೇಶದಲ್ಲಿರುವ ಇನ್ಯಾವುದೇ ರಾಜ್ಯದ ಮೆಟ್ರೋದಲ್ಲಿ ಬೇಕಾದರೂ ಈ ಕಾರ್ಡ್ಗಳನ್ನು ಬಳಸಬಹುದಾಗಿದೆ.
- ಈ ಕಾರ್ಡಿನ ಸಹಾಯದಿಂದಾಗಿ ಸಾರ್ವಜನಿಕರು ಯಾವುದೇ ಸಾರ್ವಜನಿಕ ಸಾರಿಗೆ ಸೇರಿದಂತೆ ಇತರೆ ಸೇವೆಗಳಿಗೆ ಪಾವತಿ ಕಾರ್ಯವನ್ನು ಸುಲಭದಲ್ಲಿ ಮಾಡಲು ಸಾಧ್ಯವಾಗುತ್ತದೆ.
- ದಿಲ್ಲಿ ಮೆಟ್ರೋದ ವಿಮಾನ ನಿಲ್ದಾಣ ಮಾರ್ಗದಲ್ಲಿ 2020ರ ಡಿಸೆಂಬರ್ನಲ್ಲಿ ಎನ್ಸಿಎಂಸಿ ಕಾರ್ಡ ಬಳಕೆಗೆ ಚಾಲನೆ ನೀಡಲಾಗಿದೆ.
ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಎಂದರೇನು?
- ರುಪೇ ಪೇಮೆಂಟ್ ವ್ಯವಸ್ಥೆಯ ಆಧಾರದಲ್ಲಿ ಈ ಕಾರ್ಡ್ ಕಾರ್ಯನಿರ್ವಹಣೆ ಮಾಡಲಿದ್ದು ಬಸ್, ಪಾರ್ಕಿಂಗ್, ಎಲ್ಲಾ ಕಡೆಯ ಮೆಟ್ರೋ ಸಂಪರ್ಕ, ರೀಟೇಲ್ ಶಾಪಿಂಗ್ಗಳಲ್ಲಿ ಒಂದೇ ಕಾರ್ಡ್ ಮೂಲಕ ವ್ಯವಹರಿಸಬಹುದಾಗಿದೆ. ಬ್ಯಾಂಕ್ನಿಂದ ನೀಡಲಾಗುವ ರೂಪೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ನಂತೆಯೇ ಈ ಕಾರ್ಡ್ ಕೂಡ ಇರುತ್ತದೆ.
- ಈ ರೂಪೇ ಕಾರ್ಡ್ ಅನ್ನು ಪಾಲುದಾರ ಬ್ಯಾಂಕಿನ ಡೆಬಿಟ್/ಕ್ರೆಡಿಟ್ ಅಥವಾ ಪ್ರಿಪೇಯ್ಡ್ ಕಾರ್ಡ್ ರೂಪದಲ್ಲಿ ನೀಡಬಹುದು. ‘ಒಂದು ದೇಶ, ಒಂದು ಕಾರ್ಡ್’ ಎಂಬ ಪರಿಕಲ್ಪನೆಯಡಿ ಕಾರ್ಡ್ ರೂಪಿಸಿದ್ದು, ಇಡೀ ದೇಶದ ಮೆಟ್ರೋದಲ್ಲಿ ಇದನ್ನು ಬಳಸಬಹುದು.