Published on: January 20, 2023

ಕಿತ್ತಳೆ ಬಣ್ಣದ ಬಾವಲಿ

ಕಿತ್ತಳೆ ಬಣ್ಣದ ಬಾವಲಿ


ಸುದ್ದಿಯಲ್ಲಿ ಏಕಿದೆ? ಚತ್ತೀಸ್ಗಢದ ಕಾಂಗರ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪದ ಕಿತ್ತಳೆ ಬಣ್ಣದ ಬಾವಲಿ ಪತ್ತೆಯಾಗಿದೆ


ಮುಖ್ಯಾಂಶಗಳು

  • ಕಾಂಗರ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದ ಬಳಿ ಇರುವ ಪರಲಿ ಬೋಡಾಲ್ ಗ್ರಾಮದಲ್ಲಿ ಬಾವಲಿ ಪತ್ತೆಯಾಗಿದೆ.
  • ಬಸ್ತಾರ್ ಜಿಲ್ಲೆಯಲ್ಲಿನ ಕಾಂಗರ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರನೇ ಬಾರಿಗೆ ಪತ್ತೆಯಾಗಿದೆ. ಇದಕ್ಕೂ ಮುನ್ನ 2020 ಹಾಗೂ 2022 ರಲ್ಲಿ ಪತ್ತೆಯಾಗಿತ್ತು.
  • ಈ ರಾಷ್ಟ್ರೀಯ ಉದ್ಯಾನವನ ಲೈಮ್ ಸ್ಟೋನ್ ಗುಹೆಗಳಿಗೆ ಪ್ರಖ್ಯಾತಿ ಹೊಂದಿದ್ದು, ಬಾವಲಿಗಳಿಗೆ ಅತ್ಯುತ್ತಮ ಪ್ರದೇಶವಾಗಿದೆ.

ಬಾವಲಿಯ ವಿವರ

  • ಲಕ್ಷಣಗಳು : ಪೇಂಟೆಡ್ ಬ್ಯಾಟ್ ಎಂದೇ ಕರೆಸಿಕೊಳ್ಳುವ ಈ ಅಪರೂಪದ ಪ್ರಾಣಿ, ಕಿತ್ತಳೆ ಬಣ್ಣದಲ್ಲಿರುತ್ತದೆ ಹಾಗೂ ಕಪ್ಪು ಬಣ್ಣದ ರೆಕ್ಕೆಗಳನ್ನು ಹೊಂದಿರುತ್ತದೆ. ಹಿಂಭಾಗದಲ್ಲಿ ದಟ್ಟವಾದ ಕಿತ್ತಳೆ ಬಣ್ಣದ ಕೂದಲು ಇರುತ್ತದೆ
  • ಅತ್ಯಂತ ಅಪರೂಪದ ಹಾಗೂ ಅಳಿವಿನ ಅಂಚಿನಲ್ಲಿರುವ ಜೀವಿಗಳಾಗಿವೆ.
  • ವೈಜ್ಞಾನಿಕ ಹೆಸರು : ಕೆರಿವೌಲಾ ಪಿಕ್ಟಾ

ಎಲ್ಲಿ ಕಂಡುಬರುತ್ತವೆ?

  • ಈ ಬಾವಲಿಗಳು ಬಾಂಗ್ಲಾದೇಶ, ಮ್ಯಾನ್ಮಾರ್, ಕಾಂಬೋಡಿಯಾ, ಚೀನಾ, ಭಾರತ, ಇಂಡೋನೇಷ್ಯಾ, ಮಲೇಷ್ಯಾ, ನೇಪಾಳ, ಶ್ರೀಲಂಕಾ, ಥಾಯ್ಲ್ಯಾಂಡ್, ವಿಯೆಟ್ನಾಮ್ ಸಾಮಾನ್ಯವಾಗಿ ಕಂಡುಬರಲಿವೆ.
  • ಭಾರತದಲ್ಲಿ ಬಾವಲಿಗಳು ಪಶ್ಚಿಮ ಘಟ್ಟಗಳಲ್ಲಿ, ಕೇರಳ, ಮಹಾರಾಷ್ಟ್ರ, ಒಡಿಶಾ, ಕಾಂಗರ್ ಕಣಿವೆಯಲ್ಲಿ ಹೆಚ್ಚು ಕಾಣಸಿಗುತ್ತವೆ.

ಬಾವಲಿಯ ವಿಶೇಷತೆಗಳು

  • ಈ ಬಾವಲಿಗಳು ಹಾರುತ್ತಿರುವಾಗಲೇ ಕೀಟಗಳನ್ನು ಹಿಡಿದು ತಮ್ಮ ಆಹಾರವಾಗಿಸಿಕೊಳ್ಳುತ್ತವೆ ಹಾಗೂ ಜೋಳದ ಕೊಯ್ಲಿನ ವೇಳೆ ಕಂಡುಬರುತ್ತದೆ.
  • ಬಾವಲಿಗಳು ಒಣ ಪ್ರದೇಶದಲ್ಲಿ ಹಾಗೂ ದಟ್ಟವಾದ ತೇವಾಂಶವುಳ್ಳ ಕಾಡುಗಳಲ್ಲಿ ಜೀವಿಸಲು ಬಯಸುತ್ತವೆ. ನಿದ್ರಿಸುವುದಕ್ಕೆ ಅಥವಾ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಅವು ಬಾಳೆ ಎಲೆಗಳ ನೆರಳನ್ನು ಆಶ್ರಯಿಸುತ್ತವೆ.

ಕಾಂಗರ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ

  • ಛತ್ತೀಸಗಡದ ಬಸ್ತಾರ್ ಜಿಲ್ಲೆಯಲ್ಲಿದೆ
  • ಕಂಗರ್ ಘಾಟಿ ರಾಷ್ಟ್ರೀಯ ಉದ್ಯಾನವನದ ಹೆಸರು ಕಂಗರ್ ನದಿಯಿಂದ ಬಂದಿದೆ. ಕಾಂಗರ್ ಕಣಿವೆಯು 200 ಸ್ಕ್ವೇರ್ ಕಿ.ಮೀ ವ್ಯಾಪ್ತಿಯಲ್ಲಿದ್ದು, ಅಪರೂಪದ ಜೀವಿಗಳಿವೆ.
  • ಕಾಂಗರ್ ಕಣಿವೆಯು 1982 ರಲ್ಲಿ ರಾಷ್ಟ್ರೀಯ ಉದ್ಯಾನವನದ ಸ್ಥಾನಮಾನವನ್ನು ಪಡೆಯಿತು.
  • ವನ್ಯಜೀವಿಗಳು ಮತ್ತು ಸಸ್ಯಗಳ ಹೊರತಾಗಿ, ಈ ರಾಷ್ಟ್ರೀಯ ಉದ್ಯಾನವನವು ಮೂರು ಅಸಾಧಾರಣ ಗುಹೆಗಳಿಗೆ ನೆಲೆಯಾಗಿದೆ – ಕುಟುಂಬಸರ್, ಕೈಲಾಶ್ ಮತ್ತು ದಂಡಕ್- ಸ್ಟೆಲ್ಲಾಗ್ಮಿಟ್ಸ್ ಮತ್ತು ಸ್ಟಾಲಾಕ್ಟೈಸ್‌ಗಳ ಅದ್ಭುತ ಭೌಗೋಳಿಕ ರಚನೆಗಳಿಗೆ ಹೆಸರುವಾಸಿಯಾಗಿದೆ.

ನಿಮಗಿದು ತಿಳಿದಿರಲಿ : ಭಾರತದಲ್ಲಿ 131 ಪ್ರಭೇದದ ಬಾವಲಿಗಳಿದ್ದು ಈ ಪೈಕಿ 31 ದೇಶದ ಕೇಂದ್ರ ಭಾಗಗಳಲ್ಲಿ ಪತ್ತೆಯಾಗಿದೆ.