Published on: October 25, 2022

ಕಿತ್ತೂರು ಉತ್ಸವ:2022

ಕಿತ್ತೂರು ಉತ್ಸವ:2022

ಸುದ್ದಿಯಲ್ಲಿ ಏಕಿದೆ?

1824ರ ಅಕ್ಟೋಬರ್‌ 23ರಂದು ಕಿತ್ತೂರು ಕಲಿಗಳು ಬ್ರಿಟಿಷ್‌ ಸೈನ್ಯವನ್ನು ಸೋಲಿಸಿ ಹಿಮ್ಮೆಟ್ಟಿಸಿದರು. ಆ ವಿಜಯದ ಸಂಕೇತವಾಗಿ ಉತ್ಸವ ಆಚರಿಲಾಗುತ್ತಿದೆ. ಇದೇ ಮೊದಲ ಬಾರಿಗೆ ಉತ್ಸವಕ್ಕೆ ರಾಜ್ಯಮಟ್ಟದ ಮಾನ್ಯತೆ ನೀಡಿದ್ದರಿಂದ ವೈಭವ ಇಮ್ಮಡಿಗೊಂಡಿತು. ಇದು 198ನೇ ಕಿತ್ತೂರು ಉತ್ಸವವಾಗಿದೆ.

ಮುಖ್ಯಾಂಶಗಳು

 • ರಾಷ್ಟ್ರೀಯ ಹೆದ್ದಾರಿ ಬಳಿಯ ರಾಣಿ ಚನ್ನಮ್ಮನ ಪುತ್ಥಳಿ ಆವರಣದಲ್ಲಿ ಕಿತ್ತೂರು ಸಂಸ್ಥಾನದ ನಂದಿಧ್ವಜ ಆರೋಹಣ ಮಾಡಿದರು.
 • ಮಹಿಳೆಯರಿಗೆ ಮೀಸಲಿಟ್ಟ ದಿನ: ರಾಣಿ ಚನ್ನಮ್ಮಾಜಿ ಸ್ಮರಣಾರ್ಥವಾಗಿ ಈ ಬಾರಿ ಕಿತ್ತೂರು ಉತ್ಸವದ ಮಧ್ಯದ ದಿನವಾದ ಅ.24 ಅನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಮಹಿಳಾ ಸಬಲೀಕರಣಕ್ಕೆ ಸಂಬಂಧಪಟ್ಟಂತೆ ವಿಚಾರಗೋಷ್ಠಿಗಳು ಅಂದು ಜರುಗಲಿವೆ.

ಕಿತ್ತೂರು ಉತ್ಸ ವ ಆಚರಣೆ ಏಕೆ?

 • ಭಾರತವನ್ನು ತಮ್ಮ ಕಪಿಮುಷ್ಟಿ ಯಲ್ಲಿ ಇಟ್ಟು ಕೊಳ್ಳಬೇಕೆಂಬ ಕಾರಣಕ್ಕೆ ಬ್ರಿಟಿಷರು ಒಂದೊಂದೇ ಸಂಸ್ಥಾನಗಳ ಮೇಲೆ ದಬ್ಬಾ ಳಿಕೆ ಹಾಗೂಯುದ್ಧ ಮಾಡುತ್ತ ಸಾಗಿದ್ದ ರು. ಬ್ರಿ ಟಿಷ್ ಅಧಿಕಾರಿ ಧಾರವಾಡದ ಥ್ಯಾ ಕರೆ 1824ರ ಅ.23ರಂದು ಕಿತ್ತೂರಿನ ಕೋಟೆಯ ಬಾಗಿಲು ತೆರೆಯಲು ಆಜ್ಞೆ ಮಾಡಿದನು. ಬಾಗಿಲನ್ನು ತೆರೆಯದೆ ಇದ್ದಾ ಗ ಕೋಟೆಯ ಬಾಗಿಲು ಒಡೆಯುವಂತೆ ಹೇಳಿದನು. ಕೊನೆಗೆಯುದ್ಧ ವನ್ನೂ ಸಾರಿದನು.
 • ಈಯುದ್ಧ ದಲ್ಲಿ ಪತಿ ಮರಣವನ್ನ ಪ್ಪಿ ದರೂ ಹೆದರದೆಮುನ್ನು ಗ್ಗಿ ದ ಚನ್ನ ಮ್ಮ ಪರಾಕ್ರಮ ಮೆರೆಯುತ್ತಾಳೆ. ತನ್ನ ಬಲಗೈ ಬಂಟರಾದ ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರು ಬಾಳಪ್ಪ ಸೈನ್ಯ ದೊಂದಿಗೆಯುದ್ಧ ಕ್ಕೆ ಇಳಿಯುತ್ತಾಳೆ.
 • ಮಹಾನವಮಿಯಂದು ಬ್ರಿ ಟಿಷ್ ಕಲೆಕ್ಟ ರ್ ಥ್ಯಾ ಕರೆ ಸಾಹೇಬನ ರುಂಡ ಚೆಂಡಾಡಿ ಜಯ ಸಾಧಿಸುತ್ತಾಳೆ. ಬ್ರಿಟಿಷರ ವಿರುದ್ಧ ಗೆಲುವಿನ ನೆನಪಿಗಾಗಿ ಪ್ರ ತಿವರ್ಷ ಅ.23ರಿಂದ 25ರವರೆಗೆ ಆಚರಿಸು ವುದೇ ಕಿತ್ತೂರು ಉತ್ಸವ.
 • ಈ ಉತ್ಸವದಮೂಲಕ ಕಿತ್ತೂರು ಸಂಸ್ಥಾನದ ಸಮಗ್ರ ಇತಿಹಾಸವನ್ನು ಯುವಕರಿಗೆ ಪರಿಚಯಿಸುವ ಸಲುವಾಗಿ 1967ರಲ್ಲಿ ದಿ.ಪ್ರೊ.ವಿ.ಜಿ.ಮಾರಿಹಾಳ ಮಾರ್ಗದರ್ಶನದಲ್ಲಿ ಈರಣ್ಣ ಮಾರಿಹಾಳ ವೀರರಾಣಿ ಚನ್ನಮ್ಮ ಯುವಕ ಸಂಘ ಹುಟ್ಟು ಹಾಕಿದರು. ಸರ್ಕಾರದ ಸಹಾಯಕ್ಕೆ ಕೈಯೊಡ್ಡದೆಯುವಕ ಸಂಘಗಳ ದೇಣಿಗೆಯಲ್ಲೇ ಉತ್ಸವ ಆಚರಿಸತೊಡಗಿದರು. 1982 ರಲ್ಲಿ ದಿ.ಚನ್ನ ಪ್ಪ ಮಾರಿಹಾಳ ಅಧ್ಯ ಕ್ಷತೆಯಲ್ಲಿ ಚನ್ನ ಮ್ಮ ವಿಜಯೋತ್ಸವ ಕಮಿಟಿ ರಚಿಸಲಾಯಿತು. ಈ ಕಮಿಟಿ 1996 ರವರೆಗೆ ವಿಜಯೋತ್ಸ ವ ಆಚರಿಸಿತು.1997 ರಿಂದ ಸರ್ಕಾರದ ವತಿಯಿಂದ ಕಿತ್ತೂರು ಉತ್ಸವವನ್ನು ಆಚರಿಸಲಾಗುತ್ತಿದೆ.

ಚನ್ನಮ್ಮನ ಇತಿಹಾಸ

 • 1585-1824ರ ಅವಧಿಯಲ್ಲಿ ಕಿತ್ತೂರು ಸಂಸ್ಥಾನ ಆಳಿದ ಪ್ರಮುಖ 12 ದೇಸಾಯರಲ್ಲಿ ಕಾಕತಿಯ ದೇಸಾಯಿ ದೂಳಪ್ಪಗೌಡ-ಪದ್ಮಾವತಿಯವರ ಏಕಮಾತ್ರ ಪುತ್ರಿ ಚನ್ನಮ್ಮ ಒಬ್ಬಳು. ಬ್ರಿಟಿಷರದ್ದು ಒಡೆದು ಆಳುವ ನೀತಿ. ಈ ಕುತಂತ್ರಕ್ಕೆ ಟಿಪ್ಪು ಹಾಗೂ ಪೇಶ್ವೆಯಂಥ ರಾಜರು ಬಲಿಯಾಗಿದ್ದರು.
 • ಇದು ದೇಶಾಭಿಮಾನಿ ಮಲ್ಲಸರ್ಜನ ಕಳವಳಕ್ಕೆ ಕಾರಣವಾಗಿತ್ತು. ಹಾಗಾಗಿ, ಕೊಲ್ಲಾಪುರದ ದೇಸಾಯರು ಒಳಗೊಂಡಂತೆ ದಕ್ಷಿಣದ ದೇಸಾಯರನ್ನು ಒಗ್ಗೂಡಿಸುವ ಪ್ರಯತ್ನವಾಗಿ ಊರೂರು ಅಲೆದ. ಒಮ್ಮೆ ಕಾಕತಿಗೂ ಬಂದ. ಕಾಕತಿಯಲ್ಲಿ ಹುಲಿಬೇಟೆ ಸಂದರ್ಭ ಮಲ್ಲಸರ್ಜನೊಂದಿಗೆ ಚನ್ನಮ್ಮನ ಭೇಟಿಯಾಯಿತು. ನಂತರ ಇಬ್ಬರ ವಿವಾಹವಾಯಿತು.
 • ಟಿಪ್ಪು ಸುಲ್ತಾನನ ಸಮಕಾಲೀನ ಮಲ್ಲಸರ್ಜನು 1782 ರಲ್ಲಿ ಸಿಂಹಾಸನವೇರಿದ. ಆತ ಸಾಹಸಿ ಮತ್ತು ಸಮರ್ಥ ಆಡಳಿತಗಾರನಾಗಿದ್ದ. ದೇಸಾಯಿಣಿ ಚನ್ನಮ್ಮನೊಂದಿಗೆ ಸುಖದಿಂದ ರಾಜ್ಯವಾಳಿ 1816ರಲ್ಲಿ ತೀರಿಕೊಂಡ. ಆಗ ಹಿರಿಯ ದೇಸಾಯಿಣಿ ರುದ್ರಮ್ಮಳ ಮಗ ಶಿವಲಿಂಗಸರ್ಜನಿಗೆ ಆಡಳಿತ ನೀಡಲಾಯಿತು. ಆದರೆ, ರೋಗ ಪೀಡಿತನಾದ ಈತನೂ ಮೃತಪಟ್ಟ. ಆಗ ದತ್ತಕ ತೆಗೆದುಕೊಳ್ಳಲು ಹೊರಟಾಗ ಬ್ರಿಟಿಷ್ ಸರ್ಕಾರ ಒಪ್ಪಿಗೆ ನೀಡಲಿಲ್ಲ. ಈ ಕಾರಣದಿಂದ ಬ್ರಿಟಿಷರು ಕಿತ್ತೂರು ಸಂಸ್ಥಾನವನ್ನು ಅಧೀನಪಡಿಸಿಕೊಳ್ಳುವ ಹೊಂಚು ಹಾಕಿದರು. ಇದನ್ನು ರಾಣಿ ಚನ್ನಮ್ಮ ವಿರೋಧಿಸಿದಳು.
 • ಶಿವಲಿಂಗಸರ್ಜನ ಮರಣದ ನಂತರ ಆಗಿನ ಧಾರವಾಡದ ಕಲೆಕ್ಟರ್ ಥ್ಯಾಕರೆ ಕಿತ್ತೂರಿಗೆ ಬಂದು ರಾಜಭಂಡಾರಕ್ಕೆ ಬೀಗ ಹಾಕಿ ತನ್ನ ಅಧಿಕಾರಿಗಳನ್ನು ನೇಮಕ ಮಾಡಿದ. ಈ ಕ್ರಮ ಚನ್ನಮ್ಮನಿಗೆ ಸರಿ ಅನಿಸದೆ ಥ್ಯಾಕರೆ ವಿರುದ್ಧ ಯುದ್ಧ ಸಾರಿದಳು. ಆದರೆ, ಸಂಧಾನ ಬಾಗಿಲು ತೆರೆದಿತ್ತು. ಮಾತುಕತೆ ನೆಪದಲ್ಲಿ ಥ್ಯಾಕರೆ ಹೊರಬಂದ. ಆಗ ಕಿತ್ತೂರ ಕೋಟೆ ಬಾಗಿಲು ಮುಚ್ಚಿತು. ಬಾಗಿಲು ತೆರೆಯಲು ನೀಡಿದ ಆದೇಶ ವಿಫಲವಾಯಿತು. ಆಗ ಚನ್ನಮ್ಮನ ಆದೇಶದಂತೆ ಅಮಟೂರ ಬಾಳಪ್ಪ ಗುಂಡುಹಾರಿಸಿ, ಥ್ಯಾಕರೆ ಕೊಲೆಗೈದನು. ನಂತರ ನಡೆದ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ
 • ಕಿತ್ತೂರು ಸಂಸ್ಥಾನ ಜಯ ಸಾಧಿಸಿತು. ಆದರೆ 2ನೇ ಯುದ್ಧದಲ್ಲಿ ಚನ್ನಮ್ಮ ಸೋತು ಬ್ರಿಟಿಷರಿಗೆ ಸೆರೆಯಾಗಿ 1829 ಫೆ.2ರಂದು ಬೈಲಹೊಂಗಲದ ಕಾರಾಗೃಹದಲ್ಲಿ ದೇಹತ್ಯಾಗ ಮಾಡುತ್ತಾಳೆ.