Published on: June 13, 2024

ಕಿಸಾನ್ ಕವಚ

ಕಿಸಾನ್ ಕವಚ

ಸುದ್ದಿಯಲ್ಲಿ ಏಕಿದೆ? ಬೆಂಗಳೂರಿನ ‘ಐಸ್ಟೆಮ್’ ಅಥವಾ ‘ಇನ್ಸ್ಟಿಟ್ಯೂಟ್ ಫಾರ್ ಸ್ಟೆಮ್ ಸೆಲ್ ಥೆರಪಿ ಅಂಡ್ ರೀಜನರೇಟಿವ್ ಮೆಡಿಸಿನ್’ ಸಂಸ್ಥೆಯ ವಿಜ್ಞಾನಿಗಳು, ಕೀಟನಾಶಕ ದೇಹಕ್ಕೆ ತಗುಲಿದರೂ ಅಪಾಯವಾಗದಂತೆ ತಡೆಯುವ ಬಟ್ಟೆಯನ್ನು ಸಿದ್ಧಪಡಿಸಿದ್ದಾರೆ. ಇದೊಂದು ರೈತರನ್ನು ಕೀಟನಾಶಕಗಳಿಂದ ರಕ್ಷಿಸುವ ಬಟ್ಟೆಯ ಗುರಾಣಿಯಾಗಿದೆ.

ಮುಖ್ಯಾಂಶಗಳು

  • ಈ ಬಟ್ಟೆಯನ್ನು ‘ಕಿಸಾನ್ ಕವಚ್’ ಎಂಬ ಹೆಸರಿನಲ್ಲಿ ಪೇಟೆಂಟು ಮಾಡಲಾಗಿದೆ.
  • ಅಧ್ಯಯನದ ಪ್ರಕಾರ ಕೀಟನಾಶಕಗಳಿಂದ ಪ್ರತಿವರ್ಷವೂ ಆಂಧ್ರಪ್ರದೇಶ ಒಂದರಲ್ಲಿಯೇ ನೂರ ಅರವತ್ತು ಮಂದಿ ಕೀಟನಾಶಕದ ವಿಷದಿಂದಾಗಿ ಸಾಯುತ್ತಾರಂತೆ.
  • ಭತ್ತ, ಗೋಧಿ, ಬೇಳೆಗಳನ್ನು ಬೆಳೆಯುವ ಆಂಧ್ರಪ್ರದೇಶ, ಕರ್ನಾಟಕ, ಪಂಜಾಬು, ಒಡಿಶಾಗಳಲ್ಲಿ ಕೀಟನಾಶಕದ

ದುಷ್ಪರಿಣಾಮದಿಂದ ಸಾವನ್ನಪ್ಪುವವರು ಹೆಚ್ಚು.

  • ವಿದೇಶಗಳಲ್ಲಿ ಕೀಟನಾಶಕಗಳನ್ನು ಸಿಂಪಡಿಸುವಾಗ ಸೈನಿಕರು ಯುದ್ಧದಲ್ಲಿ ಬಳಸುವಂತಹ ದಿರಿಸು, ಮುಖಗವಸುಗಳನ್ನು ಧರಿಸುವುದುಂಟು. ಆದರೆ ಬಿಸಿಲಿನ ನಾಡಿನಲ್ಲಿ ಈ ದಿರಿಸುಗಳು ಭಾರಿ ಎನ್ನಿಸುತ್ತವೆ; ಜೊತೆಗೆ ದುಬಾರಿ ಕೂಡ.

ಕೀಟನಾಶಕಗಳಿಂದ ಆರೋಗ್ಯದ ಮೇಲಾಗುವ ಪರಿಣಾಮ

ಕೀಟನಾಶಕಗಳು ನರವಿಷಗಳು. ದೇಹದೊಳಗೆ ಹೊಕ್ಕಾಗ ಅವು ನರಮಂಡಲದ ಚಟುವಟಿಕೆಗೆ ಅವಶ್ಯಕವಾದ ‘ಅಸಿಟೈಲ್ಕೋಲಿನ್ ಎಸ್ಟರೇಸ್’ (ಎಸಿಇ) ಎನ್ನುವ ರಾಸಾಯನಿಕವನ್ನು ನಾಶಮಾಡುತ್ತವೆ.

ತಲೆನೋವು, ವಾಂತಿ, ಪಾರ್ಶ್ವವಾಯು, ಹೃದಯದ ಬಡಿತ ನಿಲ್ಲುವುದು ಮೊದಲಾದ ಗಂಭೀರ ಸಮಸ್ಯೆಗಳೂ ತೋರಬಹುದು. ಕೀಟನಾಶಕದ ಪ್ರಮಾಣ ಹೆಚ್ಚಿದ್ದಲ್ಲಿ ಸಾವು ಕೂಡ ಸಂಭವಿಸಬಹುದು.

ಹೇಗೆ ತಯಾರಿಸಲಾಗುತ್ತದೆ?

ಹತ್ತಿ ಬಟ್ಟೆಗೆ ಕೀಟನಾಶಕಗಳನ್ನು ನಾಶಪಡಿಸುವ ಶಕ್ತಿಯನ್ನು ವಿಶೇಷ ರಾಸಾಯನಿಕ ತಂತ್ರಗಳಿಂದ ಒದಗಿಸಿದ್ದಾರೆ.

ಸ್ವಚ್ಛವಾಗಿ ಒಗೆದು, ಒಣಗಿಸಿದ ಬಟ್ಟೆಯನ್ನು ಸಿಲೈಲು ಆಕ್ಸೈಮು ದ್ರಾವಣದಲ್ಲಿ ಅದ್ದಿ ತೆಗೆದು, ಇಸ್ತ್ರಿ

ಮಾಡುವಂತೆ ಅತಿ ಹೆಚ್ಚಿನ ಉಷ್ಣತೆಯಲ್ಲಿ ಬಿಸಿಮಾಡಿ ಒಣಗಿಸಿದ್ದಾರೆ. ಇದನ್ನು ತಯಾರಿಸಿ, ಮಾರಾಟ ಮಾಡುವ  ಜವಾಬ್ದಾರಿಯನ್ನು ‘ಸೆಪಿಯೋ ಹೆಲ್ತ್ ಪ್ರೈಲಿ ಕಂಪನಿ ವಹಿಸಿದೆ.

ಪ್ರಯೋಜನ 

ಕವಚ ಪರಿಣಾಮಕಾರಿಯಾಗಿ ಕೀಟನಾಶಕಗಳ ಕೆಟ್ಟ ಪರಿಣಾಮಗಳನ್ನು ತಡೆಗಟ್ಟುತ್ತದೆ.  ಈ ಬಟ್ಟೆಯಿಂದ ಹೊಲಿದ ದಿರಿಸನ್ನು ಧರಿಸಿ ಎಂದಿನಂತೆ ಕೃಷಿ ಕೆಲಸದಲ್ಲಿ ತೊಡಗಿಕೊಳ್ಳಬಹುದು. ಮುಖಗವುಸನ್ನು ಮಾಡಿ, ಕೀಟನಾಶಕಗಳಿರುವ ಗಾಳಿಯಿಂದ ಅಪಾಯವಾಗದಂತೆ ಕಾಪಾಡಬಹುದು.