Published on: December 29, 2021
ಕುಕ್ಕುಟೋದ್ಯಮ ಉತ್ಪನ್ನ
ಕುಕ್ಕುಟೋದ್ಯಮ ಉತ್ಪನ್ನ
ಸುದ್ಧಿಯಲ್ಲಿ ಏಕಿದೆ ? ಭಾರತದ ಕುಕ್ಕುಟೋದ್ಯಮ ಉತ್ಪನ್ನಗಳ ಮೇಲೆ ಹೇರಿದ್ದ ನಿಷೇಧವನ್ನು ಸಂಯುಕ್ತ ಅರಬ್ ಸಂಸ್ಥಾನ ತೆರವುಗೊಳಿಸಿದೆ. ಆ ಮೂಲಕ ಐದು ವರ್ಷಗಳ ಬಳಿಕ ಯುಎಇ, ಭಾರತದ ಕುಕ್ಕುಟೋದ್ಯಮ ಉತ್ಪನ್ನಗಳ ಮೇಲೆ ಹೇರಿದ್ದ ನಿರ್ಬಂಧವನ್ನು ರದ್ದು ಮಾಡಿದೆ.
ಹಿನ್ನಲೆ
- ಭಾರತದಲ್ಲಿ ಹಕ್ಕಿ ಜ್ವರದ ಸೋಂಕು ಹೆಚ್ಚಳವಾದ ಬಳಿಕ, ಭಾರತದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ, ಮೊಟ್ಟೆ, ಮಾಂಸ ಮುಂತಾದ ಕುಕ್ಕುಟೋದ್ಯಮದ ಉತ್ಪನ್ನಗಳ ಮೇಲೆ ಯುಎಇ ನಿಷೇಧ ಹೇರಿತ್ತು. ಇದೀದ ಈ ನಿಷೇಧ ತೆರವಾಗಿದೆ.
ನಿಷೇಧವನ್ನು ತೆರವು ಮಾಡಲು ಕಾರಣ
- ಹಕ್ಕಿ ಜ್ವರ ತಡೆಯಲು ಹಾಗೂ ಅದರಿಂದ ಉಂಟಾಗುವ ಸೋಂಕು ನಿಯಂತ್ರಣಕ್ಕೆ, ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ ಸೂಚಿಸಿರುವ ‘ಜೈವಿಕ ಸುರಕ್ಷಾ’ ನಿಯಮಾವಳಿಗಳನ್ನು ಪಾಲನೆ ಮಾಡುವುದಾಗಿ ಭಾರತ ಹೇಳಿದ ಬಳಿಕ, ಈ ನಿಷೇಧವನ್ನು ತೆರವು ಮಾಡಲಾಗಿದೆ.
ನಿಷೇದ ತೆರೆವಿನಿಂದಾಗುವ ಲಾಭಗಳು
- ಯುಎಇಯ ಈ ಹೊಸ ನಿರ್ಧಾರದಿಂದಾಗಿ ಮೊಟ್ಟೆ, ಕಾವು ಕೊಡುವ ಮೊಟ್ಟೆಗಳು ಹಾಗೂ ಒಂದು ದಿನದ ಕೋಳಿ ಮರಿ ಸೇರಿ ಹಲವು ಕುಕ್ಕುಟೋದ್ಯಮದ ಉತ್ಪನ್ನಗಳು ಇನ್ನು ಭಾರತದಿಂದ ಯುಎಇಗೆ ರಫ್ತಾಗಲಿವೆ. ತಮಿಳುನಾಡಿನಲ್ಲಿರುವ ಎರಡು ಕುಕ್ಕುಟೋದ್ಯಮದ ಸಂಸ್ಥೆಗಳು ಇವೆಲ್ಲನ್ನು ಯುಎಇಗೆ ಕಳುಹಿಸಿ ಕೊಡಲಿವೆ.
ಭಾರತ ಹಾಗೂ ಯುಎಇ ವ್ಯಾಪಾರ ಒಪ್ಪಂದ
- ಭಾರತ ಹಾಗೂ ಯುಎಇ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದನ್ವಯ ವಾಷಿಂಗ್ ಮಷೀನ್, ಹವಾ ನಿಯಂತ್ರಕಗಳು, ಕಾಳುಗಳು, ತಂಬಾಕು, ಹತ್ತಿಯ ಬಟ್ಟೆಗಳು, ಜವಳಿ ಹಾಗೂ ಚರ್ಮದ ಉತ್ಪನ್ನಗಳನ್ನು ಭಾರತ ಯುಎಇಗೆ ರಫ್ತು ಮಾಡಲು ಅವಕಾಶ ಇದೆ. ಯುಇಎಯಿಂದ ಖರ್ಜೂರ, ಮಿಠಾಯಿ ಹಾಗೂ ಸಕ್ಕರೆ ಉತ್ಪನ್ನಗಳನ್ನು ಭಾರತ ಆಮದು ಮಾಡಿಕೊಳ್ಳುವ ಅವಕಾಶ ಉಂಟು.
- ಜಾಗತಿಕವಾಗಿ ಯುಎಇ ಭಾರತದ ಮೂರನೇ ಅತೀ ದೊಡ್ಡ ವ್ಯಾಪಾರ ಪಾಲುದಾರನಾಗಿದ್ದು, 2020ರ ಆರ್ಥಿಕ ವರ್ಷದಲ್ಲಿ ಉಭಯ ರಾಷ್ಟ್ರಗಳ ನಡುವೆ 60 ಬಿಲಿಯನ್ ಡಾಲರ್ ಮೌಲ್ಯದಷ್ಟು ವ್ಯಾಪಾರ ನಡೆದಿದೆ. ಅಮೆರಿಕ ಹೊರೆತು ಪಡಿಸಿದರೆ ಯುಇಗೆ ಅತೀ ಹೆಚ್ಚು ಉತ್ಪನ್ನಗಳು ಭಾರತದಿಂದ ರಫ್ತಾಗಿವೆ. 2020ರ ಆರ್ಥಿಕ ವರ್ಷದಲ್ಲಿ ಸುಮಾರು 29 ಬಿಲಿಯನ್ ಡಾಲರ್ ಮೌಲ್ಯದ ಭಾರತೀಯ ಉತ್ಪನ್ನಗಳು ಯುಎಇಗೆ ರಫ್ತಾಗಿವೆ.
- ಇನ್ನು ಉಭಯ ರಾಷ್ಟ್ರಗಳ ವ್ಯಾಪಾರ ಸಂಬಂಧ ಸುಧಾರಣೆಗೆ ‘ಭಾರತ ಯುಎಇ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ’ ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮುಂದಿನ ಪ್ರವಾಸ ವೇಳೆ ಘೋಷಣೆ ಮಾಡುವ ಸಾಧ್ಯತೆ ಇದೆ.