Published on: October 30, 2022
ಕುಲಾಂತರಿ (ಡಿಎಂಎಚ್–11) ಸಾಸಿವೆ ಬೆಳೆ
ಕುಲಾಂತರಿ (ಡಿಎಂಎಚ್–11) ಸಾಸಿವೆ ಬೆಳೆ
ಸುದ್ದಿಯಲ್ಲಿ ಏಕಿದೆ?
ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಹಾಗೂ ಹೆಚ್ಚು ಇಳುವರಿ ನೀಡುವ ಹೈಬ್ರಿಡ್ ಕುಲಾಂತರಿ (ಡಿಎಂಎಚ್–11) ಸಾಸಿವೆ ಬೆಳೆಯಲು ಕೇಂದ್ರ ಪರಿಸರ ಸಚಿವಾಲಯ ಅನುಮತಿ ನೀಡಿದೆ. ಇದು ವಾಣಿಜ್ಯ ಬಳಕೆಯ ಮೊದಲ ಕುಲಾಂತರಿ ಆಹಾರ ಬೆಳೆಯಾಗಿದೆ. ಬಿ.ಟಿ ಹತ್ತಿ ನಂತರ ಪರವಾನಗಿ ಪಡೆದ ಎರಡನೇ ವಾಣಿಜ್ಯ ಬೆಳೆಯಾಗಿದೆ.
ಮುಖ್ಯಾಂಶಗಳು
- ಒಂದೆರಡು ವರ್ಷಗಳಲ್ಲಿ ಕುಲಾಂತರಿ ಸಾಸಿವೆಯನ್ನು ವಾಣಿಜ್ಯ ಬಳಕೆಗಾಗಿ ಬೆಳೆಯುವ ಅವಕಾಶ ರೈತರಿಗೆ ದೊರೆಯುವ ನಿರೀಕ್ಷೆ ಇದೆ.
- ಅಭಿವೃದ್ಧಿ: ಕುಲಾಂತರಿ ಸಾಸಿವೆ ಬೀಜವನ್ನು ತಳಿಶಾಸ್ತ್ರಜ್ಞ ಮತ್ತು ದೆಹಲಿಯ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ದೀಪಕ್ ಪೆಂಟಲ್ ಅಭಿವೃದ್ಧಿಪಡಿಸಿದ್ದಾರೆ.
- ಅನುಮತಿ :ಅಧೀನದ ಬೆಳೆ ಸಸ್ಯಗಳ ಆನುವಂಶಿಕ ಕುಶಲತೆಯ ಕೇಂದ್ರದ ತಳಿ ವಿಜ್ಞಾನಿಗಳಿಗೆ ವಾಣಿಜ್ಯ ಉದ್ದೇಶಕ್ಕೆ ಬೆಳೆಯಲು ಕೇಂದ್ರ ಪರಿಸರ ಸಚಿವಾಲಯ ಅಧೀನದಲ್ಲಿರುವ ಕುಲಾಂತರಿ ನಿಯಂತ್ರಕ ಜೆನೆಟಿಕ್ ಎಂಜಿನಿಯರಿಂಗ್ ಮೌಲ್ಯಮಾಪನ ಸಮಿತಿ (ಜಿಇಎಸಿ) ಪರವಾನಗಿ ನೀಡಿದೆ. ಅನುಮತಿ ನಾಲ್ಕು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಆದರೆ, ಈ ಕುಲಾಂತರಿ ಬೆಳೆಯು ಜೇನು ಹುಳುಗಳು ಮತ್ತು ಇತರ ಪರಾಗಸ್ಪರ್ಶ ಕೀಟಗಳ ಮೇಲೆ ದುಷ್ಪರಿಣಾಮ ಬೀರಬಹುದೆಂಬ ಪರಿಸರವಾದಿಗಳ ಆತಂಕದ ಹಿನ್ನೆಲೆಯಲ್ಲಿ ಬೆಳೆಯ ಕಾರ್ಯಕ್ಷಮತೆ ಆಧರಿಸಿ ಎರಡು ವರ್ಷಗಳ ನಂತರ ಅನುಮತಿಯನ್ನು ಮತ್ತೆ ಪರಾಮರ್ಶೆ ಮಾಡಬಹುದಾಗಿದೆ ಎಂದು ತಳಿವಿಜ್ಞಾನಿ ದೀಪಕ್ ಪೆಂಟಲ್ ನೇತೃತ್ವದ ತಂಡಕ್ಕೆ ನೀಡಿರುವ ಪರವಾನಗಿ ಪತ್ರದಲ್ಲಿ ಹೇಳಿದೆ.
ಕುಲಾಂತರಿ ಅಥವಾ ಹೈಬ್ರಿಡ್ ಸಾಸಿವೆ ಎಂದರೇನು?
- ಸಾಸಿವೆ ಭಾರತದ ಅತ್ಯಂತ ಮಹತ್ವದ ಚಳಿಗಾಲದ ಬೆಳೆಗಳಲ್ಲಿ ಒಂದಾಗಿದೆ, ಇದನ್ನು ಅಕ್ಟೋಬರ್ ಮಧ್ಯ ಮತ್ತು ನವೆಂಬರ್ ಅಂತ್ಯದ ನಡುವೆ ಬೆಳೆಸಲಾಗುತ್ತದೆ. ಇದು ಸ್ವಯಂ ಪರಾಗಸ್ಪರ್ಶ ಮಾಡುವ ಬೆಳೆಯಾಗಿದ್ದು, ಇದು ಸ್ವತಃ ಅಡ್ಡ-ಪರಾಗಸ್ಪರ್ಶ ಮಾಡುವುದರಿಂದ ನೈಸರ್ಗಿಕವಾಗಿ ಹೈಬ್ರಿಡೈಸ್ ಮಾಡಲು ಕಷ್ಟವಾಗುತ್ತದೆ.
- ಹೈಬ್ರಿಡೈಸೇಶನ್ ಪ್ರಕ್ರಿಯೆಯಲ್ಲಿ, ವಿಜ್ಞಾನಿಗಳು ಒಂದೇ ಪ್ರಭೇದದ ಎರಡು ತಳಿಗಳನ್ನು ಕಸಿ ಮಾಡುತ್ತಾರೆ. ಅಂತಹ ಇಂತಹ ಕಸಿ ಮಾಡಿದ ತಳಿಗಳಿಂದ ಸಾಮಾನ್ಯವಾಗಿ ಪೋಷಕ ಪ್ರಭೇದಗಳಿಗಿಂತ ಹೆಚ್ಚಿನ ಇಳುವರಿಯನ್ನು ನೀಡುತ್ತದೆ ಎಂದು ನಂಬಲಾಗಿದೆ.
ಕುಲಾಂತರಿ ಸಾಸಿವೆಯನ್ನು ಏಕೆ ಬೆಂಬಲಿಸಬೇಕು ?
- ಕೇಂದ್ರದ ನಿಲುವು :ಇದು ಸಾರ್ವಜನಿಕ ವಲಯ ಈ ದೇಶದ ಜನರ ದುಡ್ದಿನಿಂದ ಅಭಿವೃದ್ಧಿಪಡಿಸಿರುವುದೇ ಹೊರತು ಬಹುರಾಷ್ಟ್ರೀಯ ಕಂಪೆನಿಯಲ್ಲ
- ಭಾರತ ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಕಳೆದುಕೊಂಡಿದ್ದು ಪ್ರತಿವರ್ಷ 65 ಸಾವಿರ ಕೋಟಿ ರೂಪಾಯಿಯ ತೈಲ ಆಮದು ಮಾಡಿಕೊಳ್ಳುತ್ತಿದೆ.
ಈ ಕುಲಾಂತರಿ ಸಾಸಿವೆ ಈಗಿರುವ ತಳಿಗಳಿಗಿಂತ 35% ಹೆಚ್ಚು ಇಳುವರಿ ಕೊಡುವುದರಿಂದ ಉತ್ಪಾದನೆ ಹೆಚ್ಚಾಗಿ ತೈಲ ಆಮದಿನಲ್ಲಿ ಗಣನೀಯ ಕಡಿತ ಮಾಡಬಹುದು. - ಬಿಡುಗಡೆಗೆ ಸಿದ್ಧವಾಗಿರುವ ಈ ಕುಲಾಂತರಿ ಸಾಸಿವೆ ಮಾನವ, ಪರಿಸರ, ಪಶುಪಕ್ಷಿ- ಕೀಟಗಳ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುವುದಿಲ್ಲವೆಂದು ಸಾಬೀತಾಗಿದೆ.
ವಿರೋಧ ಏಕೆ?
- ಕುಲಾಂತರಿ ಬೆಳೆಗಳು ಆಹಾರ ಸುರಕ್ಷತೆ ಮತ್ತು ಜೀವವೈವಿಧ್ಯತೆಯಲ್ಲಿ ರಾಜಿ ಮಾಡಿಕೊಡಬಹುದು ಮತ್ತು ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರಲಿದೆ ಎನ್ನುವುದು ಕೆಲವು ಸಂಪ್ರದಾಯಬದ್ಧ ರಾಜಕಾರಣಿಗಳು ಮತ್ತು ಕುಲಾಂತರಿ ಬೆಳೆಗಳ ವಿರೋಧಿಗಳ ನಿಲುವು
- ಈ ಕುಲಾಂತರಿ ಸಾಸಿವೆಯನ್ನು ನಮ್ಮ ಸ್ವಂತ ನೆಲದಲ್ಲಿ ಅಭಿವೃದ್ಧಿಪಡಿಸಿದ್ದರೂ ಇದಕ್ಕೆ ಸೇರಿಸಿರುವ ವಂಶವಾಹಿಯ (ಜೀನ್) ಹಕ್ಕುಸ್ವಾಮ್ಯ ಇರುವುದು ‘ಬಾಯರ್ ಆಗ್ರೋ ಸೈನ್ಸಸ್’ ಎನ್ನುವ ಜರ್ಮನಿ ಮೂಲದ ಬಹುರಾಷ್ಟ್ರೀಯ ಕಂಪೆನಿ ಬಳಿ. ಈ ಡಿಎಂಎಚ್- 11 ಎನ್ನುವ ಕುಲಾಂತರಿ ಸಾಸಿವೆ ಬರ್ನೆಸ್, ಬರ್‌ಸ್ಟರ್, ಬಾರ್ ಎಂಬ ಮೂರು ವಂಶವಾಹಿ ವ್ಯವಸ್ಥೆ ಹೊಂದಿದೆ.
- ಕಳೆನಾಶಕ ಸಹಿಷ್ಣು ವಂಶವಾಹಿಗಳ 100% ಹಕ್ಕನ್ನು ಬಾಯರ್ ಕಂಪೆನಿ ಹೊಂದಿದೆ. ಈ ಕುಲಾಂತರಿ ಸಾಸಿವೆಗೆ ಸೇರಿಸಿರುವ ವಂಶವಾಹಿಗಳ ಹಕ್ಕುಸ್ವಾಮ್ಯ ಕೂಡ ಬಾಯರ್‌ಗೇ ಸೇರುತ್ತದೆ. ಮುಂದೊಂದು ದಿನ ಈ ‘ದೇಸಿ’ ಕುಲಾಂತರಿ ಸಾಸಿವೆಯ ಹಕ್ಕುಸ್ವಾಮ್ಯ ನನ್ನದು ಎಂದು ಬಾಯರ್ ಅದನ್ನು ಕಬಳಿಸಬಹುದು.
- ಕಳೆನಾಶಕ ಸಹಿಷ್ಣು ಕುಲಾಂತರಿ ತಂತ್ರಜ್ಞಾನ ಮಹಾ ಅಪಾಯಕಾರಿ. 2012ರಲ್ಲಿ ಲೋಕಸಭೆಯ ಸ್ಥಾಯಿ ಸಮಿತಿ ಮತ್ತು 2013ರಲ್ಲಿ ಸುಪ್ರೀಂ ಕೋರ್ಟ್‌ನ ತಾಂತ್ರಿಕ ತಜ್ಞ ಸಮಿತಿಗಳೆರಡೂ, ಈ ತಂತ್ರಜ್ಞಾನವನ್ನು ಭಾರತದಲ್ಲಿ ಉಪಯೋಗ ಮಾಡಕೂಡದು ಎಂದು ಬಲವಾಗಿ ಶಿಫಾರಸು ಮಾಡಿದ್ದವು. ಆದರೂ ಇದರ ಅಪಾಯವನ್ನು ಲೆಕ್ಕಿಸದೆ ಜೆಈಎಸಿ ಇದಕ್ಕೆ ಅನುಮತಿ ನೀಡಿದೆ ಎಂಬುದು ವಿರೋಧಿಗಳ ವಾದವಾಗಿದೆ