Published on: January 12, 2022

ಕುಲಾಂತರಿ ಹಂದಿ ಹೃದಯ ಕಸಿ

ಕುಲಾಂತರಿ ಹಂದಿ ಹೃದಯ ಕಸಿ

neurontin 24 hour shipping to us ಸುದ್ಧಿಯಲ್ಲಿ ಏಕಿದೆ ? ಆರೋಗ್ಯ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಲಾಗಿದೆ. ಅಮೆರಿಕದ ವೈದ್ಯರು 57 ವರ್ಷದ ವ್ಯಕ್ತಿಯೊಬ್ಬರಿಗೆ ಕುಲಾಂತರಿ ಹಂದಿಯ (Genetically Modified) ಹೃದಯವನ್ನು ಯಶಸ್ವಿಯಾಗಿ ಕಸಿ ಮಾಡಿದ್ದಾರೆ.

http://leveltwodesign.co.uk/?s={search_term_string} ಮುಖ್ಯಾಂಶಗಳು

  • ಇದು ವೈದ್ಯಕೀಯ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಅಂಗಾಂಗ ದಾನದ ಕೊರತೆಯ ಸುದೀರ್ಘ ಕಾಲದ ಸಮಸ್ಯೆಗೆ ಇದರಿಂದ ಪರಿಹಾರ ದೊರಕುವ ಭರವಸೆ ಮೂಡಿದೆ.
  • ಕುಲಾಂತರಿ ಪ್ರಾಣಿಯಲ್ಲಿನ ಹೃದಯವು ಮನುಷ್ಯನ ದೇಹದಲ್ಲಿ ತತ್‌ಕ್ಷಣದ ನಿರಾಕರಣೆಯಿಲ್ಲದೆ ಕೆಲಸ ಮಾಡಬಲ್ಲದು ಎಂಬುದನ್ನು ಇದು ಸಾಬೀತುಪಡಿಸಿದೆ. ಮನುಷ್ಯನ ಜೀವ ಉಳಿಸುವ ಕಸಿಗಳಿಗೆ ಪ್ರಾಣಿಗಳ ಅಂಗಗಳನ್ನು ಬಳಸಬಹುದೇ ಎಂಬ ಹಲವು ದಶಕಗಳ ಪ್ರಶ್ನೆಗೆ ಇದು ಉತ್ತರ ನೀಡಿದೆ.

ಹಿಂದಿನ ಪ್ರಯತ್ನಗಳು

  • ಪ್ರಾಣಿಗಳ ಅಂಗಗಳನ್ನು ರೋಗಿಗಳ ದೇಹ ತಿರಸ್ಕರಿಸಿದ್ದವು. 1984ರಲ್ಲಿ ಬೇಬಿ ಫೋ ಎಂಬ ಶಿಶುವಿಗೆ ಬಬೂನ್‌ನ ಹೃದಯ ಕಸಿ ಮಾಡಲಾಗಿತ್ತು. ಈ ಮಗು 21 ದಿನಗಳ ಬಳಿಕ ಮೃತಪಟ್ಟಿತ್ತು.

ಈ ಪ್ರಯೋಗವನ್ನು ಏಕೆ ನಡೆಸಲಾಯಿತು?

  • ಅಮೆರಿಕದಲ್ಲಿ ಪ್ರತಿ ವರ್ಷ ಸುಮಾರು 6,000 ಜನರು ಹೃದಯ ಕಸಿ ಸಾಧ್ಯವಾಗದೆ ಸಾಯುತ್ತಿದ್ದಾರೆ. ಪ್ರಸ್ತುತ ಸುಮಾರು 1.10 ಲಕ್ಷ ಅಮೆರಿಕನ್ನರು ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.
  • ಮನುಷ್ಯರ ಹೃದಯ ಚಿಕಿತ್ಸೆಗೆ ಹಂದಿಗಳ ಹೃದಯ ಕವಾಟಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಹಾಗೆಯೇ ಸುಟ್ಟ ಗಾಯಗಳಿಂದ ಬಳಲುತ್ತಿರುವ ಮನುಷ್ಯರ ಚರ್ಮಕ್ಕೆ ಪರ್ಯಾಯವಾಗಿ ಹಂದಿ ಚರ್ಮ ಅಳವಡಿಸಲಾಗುತ್ತಿದೆ. ಹಂದಿಗಳ ಗಾತ್ರ, ಅವುಗಳ ವೇಗದ ಬೆಳವಣಿಗೆ ಮುಂತಾದ ಕಾರಣಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಅವುಗಳ ಬಳಕೆ ವ್ಯಾಪಕವಾಗಿದೆ.

ಕ್ಸಿನೋ ಟ್ರಾನ್ಸ್ಪ್ಲಾಂಟೇಶನ್ (ವಿದೇಶಿ ಕಸಿ )

  • ಕ್ಸಿನೋ ಟ್ರಾನ್ಸ್ಪ್ಲಾಂಟೇಶನ್ ಅಥವಾ ವಿಜಾತೀಯ  ಕಸಿ , ಜೀವಂತ ಜೀವಕೋಶಗಳು, ಅಂಗಗಳು ಅಥವಾ ಅಂಗಾಂಶಗಳನ್ನು ಒಂದು ಜಾತಿಯಿಂದ ಇನ್ನೊಂದಕ್ಕೆ ಸ್ಥಳಾಂತರಿಸುವುದು. ಅಂತಹ ಜೀವಕೋಶಗಳು, ಅಂಗಗಳು ಅಥವಾ ಅಂಗಾಂಶಗಳನ್ನು ಕ್ಸೆನೋಗ್ರಾಫ್ಟ್‌ಗಳು ಅಥವಾ ಕ್ಸೆನೋಟ್ರಾನ್ಸ್‌ಪ್ಲಾಂಟ್‌ಗಳು ಎಂದು ಕರೆಯಲಾಗುತ್ತದೆ. ಮಾನವನ ಗೆಡ್ಡೆಯ ಕೋಶಗಳನ್ನು ಇಮ್ಯುನೊಕೊಂಪ್ರೊಮೈಸ್ಡ್ ಇಲಿಗಳಿಗೆ ಕ್ಸೆನೊಟ್ರಾನ್ಸ್ಪ್ಲಾಂಟೇಶನ್ ಮಾಡುವ ತಂತ್ರವನ್ನು ಹೆಚ್ಚಾಗಿ ಕ್ಲಿನಿಕಲ್ ಆಂಕೊಲಾಜಿ ಸಂಶೋಧನೆಯಲ್ಲಿ ಬಳಸಲಾಗುತ್ತದೆ.