Published on: August 30, 2022

ಕೃಷಿ ಅರಣ್ಯ ಯೋಜನೆ:

ಕೃಷಿ ಅರಣ್ಯ ಯೋಜನೆ:

João Câmara ಸುದ್ದಿಯಲ್ಲಿ ಏಕಿದೆ?

http://tiffaneejacob.com/wp-json/wp/v2/tags/457 ಕಾವೇರಿ ಜಲಾನಯನ ಪ್ರದೇಶದ ಒಂಬತ್ತು ಜಿಲ್ಲೆಗಳ ವ್ಯಾಪ್ತಿಯಲ್ಲಿ ಈಶಾ ಫೌಂಡೇಷನ್‌ನ ಕಾವೇರಿ ಕೂಗು ಹಾಗೂ ಸರ್ಕಾರದ ವಿವಿಧ ಕೃಷಿ ಅರಣ್ಯ ಯೋಜನೆಗಳ ಕುರಿತು ಜಂಟಿಯಾಗಿ ಪ್ರಚಾರ ನಡೆಸಲು ರಾಜ್ಯ ಸರ್ಕಾರ ಮತ್ತು ಈಶಾ ಔಟ್‌ರೀಚ್‌ ಒಪ್ಪಂದಕ್ಕೆ ಸಹಿ ಹಾಕಿವೆ.

ಮುಖ್ಯಾಂಶಗಳು

  • ಕೊಡಗು, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೃಷಿ ಅರಣ್ಯ ಯೋಜನೆಗಳ ಕುರಿತು ರಾಜ್ಯ ಸರ್ಕಾರ ಹಾಗೂ ಈಶಾ ಔಟ್‌ರೀಚ್‌ ಸಹಭಾಗಿತ್ವದಲ್ಲಿ ಕೆಲಸ ಮಾಡಲಿವೆ.
  • ‘ಮರ ಆಧಾರಿತ ಕೃಷಿಗೆ ಪ್ರೋತ್ಸಾಹ ನೀಡಲು ಕರ್ನಾಟಕ ಸರ್ಕಾರ ಬದ್ಧತೆ ತೋರಿದೆ. ಈ ಒಪ್ಪಂದವು ಕಾವೇರಿಯನ್ನು ಪುನರುಜ್ಜೀವನಗೊಳಿಸಲು, ಮಣ್ಣಿನ ಸಂರಕ್ಷಣೆ ಮತ್ತು ರೈತರಿಗೆ ನೆರವಾಗಲು ಈ ಯೋಜನೆ ಸಹಕಾರಿಯಾಗಲಿದೆ’.

ಏನಿದು ಕಾವೇರಿ ಕೂಗು?

  • 2019 ರಲ್ಲಿ ಕಾವೇರಿ ನದಿಯ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾವೇರಿ ಕಾಲಿಂಗ್ (ಕಾವೇರಿ ಕೂಗು) ಎಂಬ ಹೆಸರಿನ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈ ಅಭಿಯಾನದ ಅಡಿಯಲ್ಲಿ ತಮಿಳುನಾಡು ಹಾಗೂ ಕರ್ನಾಟಕದ 28 ಜಿಲ್ಲೆಗಳನ್ನು ವಾಹನಗಳ ಮೇಲೆ ಪ್ರಯಾಣ ಮಾಡುವುದಾಗಿತ್ತು.
  • ತಮಿಳುನಾಡಿನ ವೆಲ್ಲಿಯಂ ಗಿರಿ ಪರ್ವತದ ತಪ್ಪಲಿನಲ್ಲಿ ಸ್ಥಾಪಿತವಾದ 112 ಅಡಿ ಎತ್ತರದ ಆದಿಯೋಗಿಯ ಸಮ್ಮುಖದಿಂದ ಈ ಅಭಿಯಾನಕ್ಕೆ ಈಶ ಫೌಂ ಡೇಶನ್ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಚಾಲನೆ ನೀಡಿದರು.

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ

  • ರೈತರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳನ್ನು ಅರಣ್ಯೀಕರಣ ಕಾರ್ಯಕ್ರಮರ್ಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರೇಪಿಸುವ ಹಾಗೂ ಅವರ ಸಹಕಾರವನ್ನು ಪಡೆಯುವ ದೃಷ್ಟಿಯಿಂದ ಸಾರ್ವಜನಿಕ ಸಹಬಾಗಿತ್ವದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಎಂಬ ಹೊಸ ಯೋಜನೆಯನ್ನು 2011-12ನೇ ಸಾಲಿನಿಂದ ಪ್ರಾರಂಭಿಸಲಾಗಿದೆ.
  • ಈ ಕಾರ್ಯಕ್ರಮದ ಅನ್ವಯ ರೈತರು, ಸಾರ್ವಜನಿಕರು ರಿಯಾಯಿತಿ ದರದಲ್ಲಿ ಹತ್ತಿರದ ಸಸ್ಯಕ್ಷೇತ್ರಗಳಿಂದ ಸಸಿಗಳನ್ನು ಪಡೆದು ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದರೆ ಪ್ರತಿ ಬದುಕುಳಿದ ಸಸಿಗೆ ಮೊದಲನೇ ವರ್ಷದ ಅಂತ್ಯದಲ್ಲಿ ರೂ. 35/- ಗಳನ್ನು ಹಾಗೂ ಎರಡನೇ ಮತ್ತು ಮೂರನೇ ವರ್ಷದ ಅಂತ್ಯದಲ್ಲಿ ಕ್ರಮವಾಗಿ ರೂ. 40/- ಹಾಗೂ ರೂ. 50/- ಹೀಗೆ ಒಟ್ಟು ರೂ. 125/- ಗಳನ್ನು ಪ್ರೋತ್ಸಾಹ ಧನವನ್ನಾಗಿ ಪಾವತಿಸಲಾಗುತ್ತದೆ.