Published on: November 19, 2023

ಕೃಷಿ ಭಾಗ್ಯ ಯೋಜನೆ

ಕೃಷಿ ಭಾಗ್ಯ ಯೋಜನೆ

ಸುದ್ದಿಯಲ್ಲಿ ಏಕಿದೆ? ಮಳೆಯಾಶ್ರಿತ ಪ್ರದೇಶದಲ್ಲಿ ಸುಸ್ಥಿರ ಕೃಷಿಗೆ ಒತ್ತು ನೀಡುವ ‘ಕೃಷಿ ಭಾಗ್ಯ’ ಯೋಜನೆಯನ್ನು ಮರು ಜಾರಿ ಮಾಡುವ ಮಹತ್ವದ ತೀರ್ಮಾನವನ್ನು ಕರ್ನಾಟಕ  ರಾಜ್ಯ ಸಚಿವ ಸಂಪುಟ ಸಭೆ  ನಿರ್ಧರಿಸಿದೆ.

ಮುಖ್ಯಾಂಶಗಳು

  • ಮಳೆಯಾಶ್ರಿತ ಕೃಷಿ ನೀತಿ -2014 ರನ್ವಯ 24 ಜಿಲ್ಲೆಗಳಲ್ಲಿನ ಒಟ್ಟು 106 ತಾಲೂಕುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಯೋಜನೆಯನ್ನು ಜಾರಿ ಮಾಡಲು 100 ಕೋಟಿ ರೂ. ಒದಗಿಸಲಾಗುವುದು.
  • ಈ ಹಿಂದೆ 2013-18ರ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಜಾರಿ ಮಾಡಲಾಗಿದ್ದ ಈ ಮಹತ್ವದ ಯೋಜನೆಯನ್ನು ಮರು ಜಾರಿ ಮಾಡಿ, ಕೃಷಿ ಹೊಂಡ ಹಾಗೂ ಇತರ ಘಟಕಗಳನ್ನು ಒಳಗೊಂಡು ಪ್ಯಾಕೇಜ್‌ ಮಾದರಿಯಲ್ಲಿಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ

ಏನಿದು ಕೃಷಿ ಭಾಗ್ಯ ಯೋಜನೆ?

  • ಮಳೆ ನೀರಿನ ಸಮರ್ಪಕ ನಿರ್ವಹಣೆ ಮತ್ತು ಉಪಯುಕ್ತ ಬಳಕೆ ಮೂಲಕ ಉತ್ಪಾದಕತೆ ಹೆಚ್ಚಿಸುವುದು, ಕೃಷಿ ಆದಾಯ ಹೆಚ್ಚಿಸುವುದು ಹಾಗೂ ಮಳೆ ನೀರು ವ್ಯರ್ಥವಾಗದಂತೆ ಆಯ್ದ ಸ್ಥಳಗಳಲ್ಲಿ ಕೃಷಿ ಹೊಂಡ ನಿರ್ಮಿಸಿ ರಕ್ಷಣಾತ್ಮಕ ನೀರಾವರಿ ಸೌಲಭ್ಯ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
  • ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣೆಗೆ ಹೊಂಡ ನಿರ್ಮಾಣ, ನೀರು ಇಂಗದಂತೆ ತಡೆಯಲು ಪಾಲಿಥೀನ್‌ ಹೊದಿಕೆ ಅಳವಡಿಸುವುದು, ಹೊಂಡದಿಂದ ನೀರು ಎತ್ತಲು ಡೀಸೆಲ್‌ ಪಂಪ್‌ಸೆಟ್‌ ಪೂರೈಕೆ, ನೀರನ್ನು ಬೆಳೆಗೆ ಹಾಯಿಸಲು ಲಘು ನೀರಾವರಿ ಘಟಕ ಪೂರೈಕೆ ಹಾಗೂ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಾಣವನ್ನು ಈ ಯೋಜನೆ ಒಳಗೊಂಡಿದೆ. ​
  • ಹಾರ್ವೆಸ್ಟರ್‌ ಹಬ್‌: ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಬಲಪಡಿಸಿ ಹಂತಹಂತವಾಗಿ 300 ಹೈಟೆಕ್‌ ಹಾರ್ವೆಸ್ಟರ್‌ ಹಬ್‌ಗಳಾಗಿ ಪರಿವರ್ತಿಸುವುದು, ಪ್ರಸಕ್ತ ಸಾಲಿನಲ್ಲಿ ಮೊದಲ ಹಂತದಲ್ಲಿ 100 ಹಬ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.