Published on: February 3, 2023
‘ಕೃಷಿ ವೇಗ ವರ್ಧಕ ನಿಧಿ’
‘ಕೃಷಿ ವೇಗ ವರ್ಧಕ ನಿಧಿ’
ಸುದ್ದಿಯಲ್ಲಿ ಏಕಿದೆ? ಕೃಷಿ ಕ್ಷೇತ್ರದ ಸ್ಟಾರ್ಟ್ ಅಪ್ ಆರಂಭಿಸುವ ಯುವಕರಿಗೆ ಉತ್ತೇಜನ ನೀಡಲು ನಿಗದಿತ ಮೊತ್ತದ ಅನುದಾನ ಮೀಸಲಿಡಲಾಗುತ್ತದೆ ಎಂದು ಬಜೆಟ್ ನಲ್ಲಿ ಘೋಷಿಸಲಾಗಿದೆ.
ಏನಿದು ನಿಧಿ?
- ಯುವ ಉದ್ಯಮಿಗಳು ಕೃಷಿ ಕ್ಷೇತ್ರದ ಸ್ಟಾರ್ಟ್ ಅಪ್ ಸ್ಥಾಪನೆ ಮಾಡುವುದಾದರೆ ಉತ್ತೇಜನ ನೀಡಲಾಗುತ್ತದೆ. ಅದಕ್ಕಾಗಿಯೇ ಬಜೆಟ್ನಲ್ಲಿ ‘ಕೃಷಿ ವೇಗ ವರ್ಧಕ ನಿಧಿ’ ಸ್ಥಾಪನೆ ಮಾಡುವ ಭರವಸೆ ನೀಡಲಾಗಿದೆ. ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿಗೆ ಏರಿಕೆ ಮಾಡಲಾಗುತ್ತದೆ.
- ರೈತರು ಎದುರಿಸುತ್ತಿರುವ ಸವಾಲುಗಳಿಗೆ ನವೀನ ಮತ್ತು ಕೈಗೆಟುಕುವ ಪರಿಹಾರಗಳನ್ನು ಒದಗಿಸಲು ಗುರಿಯನ್ನು ಈ ನಿಧಿ ಹೊಂದಿದೆ.
- ಕ್ರಷಿ ಪದ್ದತಿಗಳನ್ನು ಪರಿವರ್ತಿಸಲು, ಉತ್ಪಾದಕತೆ ಮತ್ತು ಲಾಭದಾಯಕತೆಯನ್ನು ಹೆಚ್ಚಿಸಲು ಆಧುನಿಕ ತಂತ್ರಜ್ಞಾನಗಳನ್ನು ಪೂರೈಸಲು ಇದರಲ್ಲಿ ಯೋಜಿಸಲಾಗಿದೆ.
- ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡಲಾಗುತ್ತದೆ.