Published on: January 11, 2024

ಕೃಷ್ಣರಾಜಸಾಗರ ಅಣೆಕಟ್ಟೆ

ಕೃಷ್ಣರಾಜಸಾಗರ ಅಣೆಕಟ್ಟೆ

ಸುದ್ದಿಯಲ್ಲಿ ಏಕಿದೆ? ಕೆಆರ್​​​​ಎಸ್ ಅಣೆಕಟ್ಟೆಯ ಸುತ್ತಮುತ್ತ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿರ್ಬಂಧ ಹೇರಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಮುಖ್ಯಾಂಶಗಳು

  • ಕೆ ಆರ್ ಎಸ್ ಡ್ಯಾಂ ಬಳಿ ಹಲವು ಭಾರಿ ದೊಡ್ಡ ಶಬ್ಬಗಳು ಕೇಳಿ ಬಂದಿದೆ. ಅಣೆಕಟ್ಟಿನ ಬಳಿ ಗಣಿಗಾರಿಕೆ ನಡೆಸಿದರೆ ಅಪಾಯವಾಗುವ ಸಂಭವವಿದೆ ಎಂದು ಹೈಕೋರ್ಟ್ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.
  • ಧನ್ ಬಾದನಲ್ಲಿರುವ ಭಾರತೀಯ ಗಣಿ ಮತ್ತು ಇಂಧನ ಸಂಶೋಧನಾ ಸಂಸ್ಥೆಯಿಂದ ಅಣೆಕಟ್ಟು ಕುರಿತಂತೆ ವೈಜ್ಞಾನಿಕ ಸಮೀಕ್ಷೆಗಾಗಿ ಆದೇಶ ನೀಡಲಾಗಿದೆ. ಹೀಗಾಗಿ, ಅಲ್ಲಿಯವರೆಗೆ ಗಣಿಗಾರಿಕೆಗೆ ಅನುಮತಿಸುವುದಿಲ್ಲ ಮತ್ತುಈ ನಿಷೇಧವು ಅಸ್ತಿತ್ವದಲ್ಲಿರುವ ಗಣಿಗಾರಿಕೆ ಪರವಾನಗಿಗಳ ಮೇಲೂ ಅನ್ವಯಿಸುತ್ತದೆ.

ಕೆಆರ್​​​​ಎಸ್ ಅಣೆಕಟ್ಟೆ

  • ಮಂಡ್ಯ ಜಿಲ್ಲೆಯ ಕನ್ನಂಬಾಡಿಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾದ ಅಣೆಕಟ್ಟನ್ನು ಆರಂಭದಲ್ಲಿ ‘ಕನ್ನಂಬಾಡಿ ಕಟ್ಟೆ’ ಎಂದು ಕರೆಯಲಾಗುತ್ತಿತ್ತು, ನಂತರ 1917 ರಲ್ಲಿ ನಾಲ್ಕನೆಯ ರಾಜ ಕೃಷ್ಣರಾಜ ಒಡೆಯರ ಅವರ ಹೆಸರಿನಿಂದ ಕೃಷ್ಣ ರಾಜ ಸಾಗರ ಎಂದು ಹೆಸರಿಸಲಾಯಿತು.
  • ಅಣೆಕಟ್ಟಿನ ನೀರನ್ನು ಮೈಸೂರು ಮತ್ತು ಮಂಡ್ಯದಲ್ಲಿ ನೀರಾವರಿಗಾಗಿ ಬಳಸಲಾಗುತ್ತದೆ ಮತ್ತು ಮೈಸೂರು, ಮಂಡ್ಯ ಮತ್ತು ಬೆಂಗಳೂರು ನಗರಗಳಿಗೆ ಕುಡಿಯುವ ನೀರಿನ ಮುಖ್ಯ ಮೂಲವಾಗಿದೆ.
  • ಇದು ಶಿವನಸಮುದ್ರ ಜಲವಿದ್ಯುತ್ ಕೇಂದ್ರಕ್ಕೆ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸುತ್ತದೆ.
  • ಈ ಅಣೆಕಟ್ಟಿನಿಂದ ಬಿಡುಗಡೆಯಾಗುವ ನೀರು ತಮಿಳುನಾಡು ರಾಜ್ಯಕ್ಕೆ ಹರಿದು ಸೇಲಂ ಜಿಲ್ಲೆಯ ಮೆಟ್ಟೂರು ಅಣೆಕಟ್ಟಿನಲ್ಲಿ ಸಂಗ್ರಹವಾಗುತ್ತದೆ.
  • ಅಣೆಕಟ್ಟಿನ ನಿರ್ಮಾಣವು 1911 ರಲ್ಲಿ ಪ್ರಾರಂಭವಾಯಿತು ಮತ್ತು ಇದು 1931 ರಲ್ಲಿ ಪೂರ್ಣಗೊಂಡಿತು.
  • ಈ ಅಣೆಕಟ್ಟನ್ನು ಭಾರತದ ಪ್ರಸಿದ್ಧ ಇಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ ವಿನ್ಯಾಸಗೊಳಿಸಿದ್ದಾರೆ.
  • ಉದ್ದ: 2,621 ಮೀಟರ್ (8,600 ಅಡಿ)
  • ಎತ್ತರ: 40 ಮೀಟರ್ (130 ಅಡಿ)
  • ಇದರ ಜಲಾಶಯವು ಸುಮಾರು 130 ಚ.ಕಿ.ಮೀ ಆಗಿದೆ, ಇದನ್ನು ನಿರ್ಮಿಸಿದ ಅವಧಿಯಲ್ಲಿ ಏಷ್ಯಾದಲ್ಲೇ ಅತಿ ದೊಡ್ಡದಾಗಿತ್ತು.
  • ಅಲಂಕಾರಿಕ ಬೃಂದಾವನ್ ಉದ್ಯಾನ ಅಣೆಕಟ್ಟಿಗೆ ಹೊಂದಿಕೊಂಡಿದೆ.

ಕಾವೇರಿ ನದಿ

  • ಇದು ದಕ್ಷಿಣ ಭಾರತದ ಪವಿತ್ರ ನದಿಯಾಗಿದೆ. ಇದನ್ನು ದಕ್ಷಿಣ ಭಾರತದ ಗಂಗಾ ಎಂದು ಕರೆಯಲಾಗುತ್ತದೆ.
  • ಮೂಲ : ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಬ್ರಹ್ಮಗಿರಿ ಬೆಟ್ಟ
  • ಕಾವೇರಿ ಜಲಾನಯನ ಪ್ರದೇಶ: ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಪುದುಚೇರಿಗಳಲ್ಲಿ ವ್ಯಾಪಿಸಿದೆ.
  • ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯ ಪೂಂಪುಹಾರ್‌ನಲ್ಲಿ ಈ ನದಿಯು ಬಂಗಾಳಕೊಲ್ಲಿಯನ್ನು ಸೇರುತ್ತದೆ.
  • ಎಡದಂಡೆಯ ಪ್ರಮುಖ ಉಪನದಿಗಳು: ಹಾರಂಗಿ, ಹೇಮಾವತಿ, ಶಿಂಷಾ ಮತ್ತು ಅರ್ಕಾವತಿ.
  • ಬಲದಂಡೆಯ ಪ್ರಮುಖ ಉಪನದಿಗಳು: ಲಕ್ಷ್ಮಣತೀರ್ಥ, ಕಬಿನಿ, ಸುವರ್ಣಾವತಿ, ಭವಾನಿ, ನೋಯಿಲ್ ಮತ್ತು ಅಮರಾವತಿ.