Published on: April 23, 2022

ಕೇಂದ್ರದ ಪಿಎಲ್ಐ ಯೋಜನೆಗೆ ಭಾರೀ ಬೆಂಬಲ

ಕೇಂದ್ರದ ಪಿಎಲ್ಐ ಯೋಜನೆಗೆ ಭಾರೀ ಬೆಂಬಲ

http://simplecommunion.com/welcome/ ಸುದ್ಧಿಯಲ್ಲಿ ಏಕಿದೆ? http://greymarkconstruction.com/baths  ಭಾರತದ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ ಯೋಜನೆಗೆ (ಪಿಎಲ್‌ಐ) ಭಾರಿ ಬೆಂಬಲ ಲಭಿಸಿದ್ದು, 14 ಕ್ಷೇತ್ರಗಳಲ್ಲಿ 2.34 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಹೆಚ್ಚು ಬಂಡವಾಳವನ್ನು ಯಾವ ಕ್ಷೇತ್ರಗಳು ಆಕರ್ಷಿಸಿವೆ ?

  • ಆಟೋಮೊಬೈಲ್‌ ಮತ್ತು ಆಟೋ ಬಿಡಿ ಭಾಗಗಳು, ಅತ್ಯಾಧುನಿಕ ರಾಸಾಯನಿಕ ಸೆಲ್‌ ಬ್ಯಾಟರಿ, ವಿಶೇಷ ಉಕ್ಕು, ಅಧಿಕ ದಕ್ಷತೆಯ ಸೌರ ಫಲಕಗಳ ವಲಯವು ಹೆಚ್ಚು ಬಂಡವಾಳವನ್ನು ಆಕರ್ಷಿಸಿವೆ ಎಂದು ಸಚಿವಾಲಯಗಳು ನೀಡಿದ ಅಂಕಿ ಅಂಶಗಳು ತಿಳಿಸಿವೆ.

ಹಿನ್ನಲೆ

  • ಎರಡು ವರ್ಷಗಳ ಹಿಂದೆ ಈ ಯೋಜನೆ ಜಾರಿಯಾಗಿತ್ತು. ಇದರಲ್ಲಿ ಸೇರ್ಪಡೆಯಾದ ಕಂಪನಿಗಳು ಭಾರತದಲ್ಲಿಯೇ ತಮ್ಮ ಉತ್ಪನ್ನಗಳನ್ನು ಉತ್ಪಾದಿಸಬೇಕಾಗುತ್ತದೆ ಹಾಗೂ ಉತ್ಪಾದನೆಯನ್ನು ಆಧರಿಸಿ ಪ್ರೋತ್ಸಾಹ ಧನವೂ ಈ ಕಂಪನಿಗಳಿಗೆ ಲಭಿಸಲಿದೆ. ಹೀಗಾಗಿ ಹೂಡಿಕೆಯ ಹರಿವು ಲಭಿಸುತ್ತಿದೆ. 14 ಕ್ಷೇತ್ರಗಳಲ್ಲಿ ಸರಕಾರ 1.97 ಲಕ್ಷ ಕೋಟಿ ರೂ.ಗಳ ಸಹಾಯಧನವನ್ನು ವಿತರಿಸುತ್ತಿದೆ.
  • ಭಾರತದ ರಫ್ತು ಹೆಚ್ಚಿಸಲು ಕೂಡ ಇದು ಸಹಕಾರಿಯಾಗಲಿದೆ