Published on: December 23, 2022

ಕೇಂದ್ರ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಕೃತಿ ಪ್ರಶಸ್ತಿ

ಕೇಂದ್ರ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಕೃತಿ ಪ್ರಶಸ್ತಿ

ಸುದ್ದಿಯಲ್ಲಿ ಏಕಿದೆ? ಕೇಂದ್ರ ಸಾಹಿತ್ಯ ಅಕಾಡೆಮಿಯು ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ನೀಡುವ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು ಕನ್ನಡದ ಪ್ರಮುಖ ಲೇಖಕರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ತ್ವಿಕತೆ’ ಕೃತಿಯು ಈ ವರ್ಷದ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ. ಅನುವಾದ ಪ್ರಶಸ್ತಿಗೆ ಪದ್ಮರಾಜ ದಂಡಾವತಿ ಅವರು ಅನುವಾದಿಸಿದ ‘ಸೀತಾ: ರಾಮಾಯಣದ ಸಚಿತ್ರ ಮರುಕಥನ’ ಕೃತಿ  ಆಯ್ಕೆಯಾಗಿದೆ.

ಮುಖ್ಯಾಂಶಗಳು

  • 23 ಭಾಷೆಗಳಲ್ಲಿ ಪ್ರಶಸ್ತಿಗಳು ಏಳು ಕವನ ಪುಸ್ತಕಗಳು, ಆರು ಕಾದಂಬರಿಗಳು, ಎರಡು ಸಣ್ಣ ಕಥೆಗಳು, ಮೂರು ನಾಟಕಗಳು, ಎರಡು ಸಾಹಿತ್ಯ ವಿಮರ್ಶೆ ಮತ್ತು ಆತ್ಮಚರಿತ್ರೆಯ ಪ್ರಬಂಧಗಳು, ಲೇಖನಗಳ ಸಂಗ್ರಹ ಮತ್ತು ಸಾಹಿತ್ಯ ಇತಿಹಾಸವನ್ನು ಒಳಗೊಂಡಿವೆ.
  • ಮುಖ್ಯ ಪ್ರಶಸ್ತಿಯು ಒಂದು ಲಕ್ಷ ರುಪಾಯಿ ಹಾಗೂ ಸನ್ಮಾನ ಒಳಗೊಂಡಿದ್ದರೆ ಅನುವಾದ ಪ್ರಶಸ್ತಿ ಐವತ್ತು ಸಾವಿರ ರುಪಾಯಿ ಹಾಗೂ ಸನ್ಮಾನಗಳು ಒಳಗೊಂಡಿರುತ್ತವೆ.
  • ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ತ್ವಿಕತೆ’ ಕೃತಿಯು ವಿವಿಧ ಪ್ರಬಂಧಗಳ ಸಂಕಲನವಾಗಿದೆ.
  • ಪದ್ಮರಾಜ ದಂಡಾವತಿ ಅವರು ದೇವದತ್ತ ಪಟ್ಟನಾಯಕ ಅವರ ‘ಸೀತಾ’ ಕೃತಿಯನ್ನು ಇಂಗ್ಲಿಷನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

ಭಾಷಾ ಸಮ್ಮಾನ್ ಪ್ರಶಸ್ತಿ

  • ಶಾಸ್ತ್ರೀಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಾಗಿ ಉದಯ ನಾಥ್ ಝಾ (ಒಡಿಶಾ) ಅವರಿಗೆ ಭಾಷಾ ಸಮ್ಮಾನ್ ನೀಡಲಾಗುತ್ತಿದೆ.

ಬಾಲ ಸಾಹಿತ್ಯ ಪುರಸ್ಕಾರ ಮತ್ತು ಯುವ ಪ್ರಶಸ್ತಿ

  • ಗಣೇಶ್ ಮರಾಂಡಿ ಅವರ ಹಪನ್ ಮೈ ಪುಸ್ತಕಕ್ಕೆ ಸಂತಾಲಿಯಲ್ಲಿ ಬಾಲ ಸಾಹಿತ್ಯ ಪುರಸ್ಕಾರವನ್ನು ನೀಡಲಾಗಿದೆ.
  • 35 ವರ್ಷದೊಳಗಿನವರಿಗೆ ಮೀಸಲಾಗಿರುವ ‘ಯುವ ಪ್ರಶಸ್ತಿ’ ಪವನ್ ನಲತ್ ಅವ ಮರಾಠಿ ಕವನ ಸಂಕಲನ ಪೋಖರತೋಯ್​ಗೆ ಸಿಕ್ಕಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ

  • ಪ್ರಧಾನ ಕಛೇರಿ: ನವದೆಹಲಿ
  • ಅಧ್ಯಕ್ಷರು: ಚಂದ್ರಶೇಖರ ಕಂಬಾರ
  • ಸ್ಥಾಪನೆ: 12 ಮಾರ್ಚ್ 1954
  • ಸ್ಥಾಪಕರು: ಭಾರತ ಸರ್ಕಾರ
  • ಪೋಷಕ ಸಂಸ್ಥೆ: ಸಂಸ್ಕೃತಿ ಸಚಿವಾಲಯ
  • ಇಂಗ್ಲೀಷ ಸೇರಿದಂತೆ ಭಾರತದ 24 ಭಾಷೆಗಳ ಸಾಹಿತ್ಯಗಳಿಗೆ ಪ್ರಶಸ್ತಿ ನೀಡಲಾಗುತ್ತದೆ

ಮುಡ್ನಾಕೂಡು ಚಿನ್ನಸ್ವಾಮಿ :

  • ಕನ್ನಡ ಕವಿ, ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಮುಡ್ನಾಕುಡು ಗ್ರಾಮದವರಾಗಿದ್ದಾರೆ. ಇವರು 22 ಸೆಪ್ಟೆಂಬರ್ 1954 ರಲ್ಲಿ ಜನಿಸಿದ್ದಾರೆ.
  • ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಎಂಬ ಆತ್ಮಕಥೆ 2020ರಲ್ಲಿ ಪ್ರಕಟಗೊಂಡಿದೆ.
  • ಇವರು ಪಡೆದ ಪ್ರಶಸ್ತಿಗಳು : ಹಂಪಿ ಕನ್ನಡ ವಿಶ್ವವಿದ್ಯಾಲಯವು ಜಾಗತಿಕ ಗ್ರಾಮ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ಎಂಬ ಪ್ರಬಂಧಕ್ಕೆ ಡಿ.ಲಿಟ್.ಅನ್ನು ನೀಡಿದೆ.ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ – 2009

ಪದ್ಮರಾಜ ದಂಡಾವತಿ

  • ಪ್ರಜಾವಾಣಿ ಪತ್ರಿಕೆಯ ಅಂಕಣಕಾರರಾಗಿ ಕೆಲಸ ನಿರ್ವಹಿಸಿರುವ ದಂಡಾವತಿಯವರು, ಸಾಹಿತ್ಯಿಕ ಚಟುವಟಿಕೆಗಳ ಸಂಘಟಕರಾಗಿ ಗುರುತಿಸಿಕೊಂಡಿದ್ದಾರೆ.
  • ಜನನ: ಆಗಸ್ಟ್‌ 30, 1955ರಲ್ಲಿ ವಿಜಯಪುರ ಜಲ್ಲೆಯ ಮುದ್ದೆಬಿಹಾಳ ತಾಲೂಕಿನ ದಂಡಾವತಿಯವರು, ತಂದೆ ದೇವೇಂದ್ರಪ್ಪ, ತಾಯಿ ಚಂಪಮ್ಮ ಇವರ ಮಗನಾಗಿ ಜನಿಸಿದರು.
  • ಇವರು ಪಡೆದ ಪ್ರಶಸ್ತಿಗಳು: ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌