Published on: December 23, 2022
ಕೇಂದ್ರ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಕೃತಿ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಕೃತಿ ಪ್ರಶಸ್ತಿ
http://wendykeithdesigns.co.uk/accessories-i64.html ಸುದ್ದಿಯಲ್ಲಿ ಏಕಿದೆ? ಕೇಂದ್ರ ಸಾಹಿತ್ಯ ಅಕಾಡೆಮಿಯು ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ನೀಡುವ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು ಕನ್ನಡದ ಪ್ರಮುಖ ಲೇಖಕರಾದ http://thebandchoice.com/blog/page/3/ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ತ್ವಿಕತೆ’ ಕೃತಿಯು ಈ ವರ್ಷದ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ. ಅನುವಾದ ಪ್ರಶಸ್ತಿಗೆ ಪದ್ಮರಾಜ ದಂಡಾವತಿ ಅವರು ಅನುವಾದಿಸಿದ ‘ಸೀತಾ: ರಾಮಾಯಣದ ಸಚಿತ್ರ ಮರುಕಥನ’ ಕೃತಿ ಆಯ್ಕೆಯಾಗಿದೆ.
ಮುಖ್ಯಾಂಶಗಳು
- 23 ಭಾಷೆಗಳಲ್ಲಿ ಪ್ರಶಸ್ತಿಗಳು ಏಳು ಕವನ ಪುಸ್ತಕಗಳು, ಆರು ಕಾದಂಬರಿಗಳು, ಎರಡು ಸಣ್ಣ ಕಥೆಗಳು, ಮೂರು ನಾಟಕಗಳು, ಎರಡು ಸಾಹಿತ್ಯ ವಿಮರ್ಶೆ ಮತ್ತು ಆತ್ಮಚರಿತ್ರೆಯ ಪ್ರಬಂಧಗಳು, ಲೇಖನಗಳ ಸಂಗ್ರಹ ಮತ್ತು ಸಾಹಿತ್ಯ ಇತಿಹಾಸವನ್ನು ಒಳಗೊಂಡಿವೆ.
- ಮುಖ್ಯ ಪ್ರಶಸ್ತಿಯು ಒಂದು ಲಕ್ಷ ರುಪಾಯಿ ಹಾಗೂ ಸನ್ಮಾನ ಒಳಗೊಂಡಿದ್ದರೆ ಅನುವಾದ ಪ್ರಶಸ್ತಿ ಐವತ್ತು ಸಾವಿರ ರುಪಾಯಿ ಹಾಗೂ ಸನ್ಮಾನಗಳು ಒಳಗೊಂಡಿರುತ್ತವೆ.
- ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ತ್ವಿಕತೆ’ ಕೃತಿಯು ವಿವಿಧ ಪ್ರಬಂಧಗಳ ಸಂಕಲನವಾಗಿದೆ.
- ಪದ್ಮರಾಜ ದಂಡಾವತಿ ಅವರು ದೇವದತ್ತ ಪಟ್ಟನಾಯಕ ಅವರ ‘ಸೀತಾ’ ಕೃತಿಯನ್ನು ಇಂಗ್ಲಿಷನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.
ಭಾಷಾ ಸಮ್ಮಾನ್ ಪ್ರಶಸ್ತಿ
- ಶಾಸ್ತ್ರೀಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಾಗಿ ಉದಯ ನಾಥ್ ಝಾ (ಒಡಿಶಾ) ಅವರಿಗೆ ಭಾಷಾ ಸಮ್ಮಾನ್ ನೀಡಲಾಗುತ್ತಿದೆ.
ಬಾಲ ಸಾಹಿತ್ಯ ಪುರಸ್ಕಾರ ಮತ್ತು ಯುವ ಪ್ರಶಸ್ತಿ
- ಗಣೇಶ್ ಮರಾಂಡಿ ಅವರ ಹಪನ್ ಮೈ ಪುಸ್ತಕಕ್ಕೆ ಸಂತಾಲಿಯಲ್ಲಿ ಬಾಲ ಸಾಹಿತ್ಯ ಪುರಸ್ಕಾರವನ್ನು ನೀಡಲಾಗಿದೆ.
- 35 ವರ್ಷದೊಳಗಿನವರಿಗೆ ಮೀಸಲಾಗಿರುವ ‘ಯುವ ಪ್ರಶಸ್ತಿ’ ಪವನ್ ನಲತ್ ಅವ ಮರಾಠಿ ಕವನ ಸಂಕಲನ ಪೋಖರತೋಯ್ಗೆ ಸಿಕ್ಕಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿ
- ಪ್ರಧಾನ ಕಛೇರಿ: ನವದೆಹಲಿ
- ಅಧ್ಯಕ್ಷರು: ಚಂದ್ರಶೇಖರ ಕಂಬಾರ
- ಸ್ಥಾಪನೆ: 12 ಮಾರ್ಚ್ 1954
- ಸ್ಥಾಪಕರು: ಭಾರತ ಸರ್ಕಾರ
- ಪೋಷಕ ಸಂಸ್ಥೆ: ಸಂಸ್ಕೃತಿ ಸಚಿವಾಲಯ
- ಇಂಗ್ಲೀಷ ಸೇರಿದಂತೆ ಭಾರತದ 24 ಭಾಷೆಗಳ ಸಾಹಿತ್ಯಗಳಿಗೆ ಪ್ರಶಸ್ತಿ ನೀಡಲಾಗುತ್ತದೆ
ಮುಡ್ನಾಕೂಡು ಚಿನ್ನಸ್ವಾಮಿ :
- ಕನ್ನಡ ಕವಿ, ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಮುಡ್ನಾಕುಡು ಗ್ರಾಮದವರಾಗಿದ್ದಾರೆ. ಇವರು 22 ಸೆಪ್ಟೆಂಬರ್ 1954 ರಲ್ಲಿ ಜನಿಸಿದ್ದಾರೆ.
- ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಎಂಬ ಆತ್ಮಕಥೆ 2020ರಲ್ಲಿ ಪ್ರಕಟಗೊಂಡಿದೆ.
- ಇವರು ಪಡೆದ ಪ್ರಶಸ್ತಿಗಳು : ಹಂಪಿ ಕನ್ನಡ ವಿಶ್ವವಿದ್ಯಾಲಯವು ಜಾಗತಿಕ ಗ್ರಾಮ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ಎಂಬ ಪ್ರಬಂಧಕ್ಕೆ ಡಿ.ಲಿಟ್.ಅನ್ನು ನೀಡಿದೆ.ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ – 2009
ಪದ್ಮರಾಜ ದಂಡಾವತಿ
- ಪ್ರಜಾವಾಣಿ ಪತ್ರಿಕೆಯ ಅಂಕಣಕಾರರಾಗಿ ಕೆಲಸ ನಿರ್ವಹಿಸಿರುವ ದಂಡಾವತಿಯವರು, ಸಾಹಿತ್ಯಿಕ ಚಟುವಟಿಕೆಗಳ ಸಂಘಟಕರಾಗಿ ಗುರುತಿಸಿಕೊಂಡಿದ್ದಾರೆ.
- ಜನನ: ಆಗಸ್ಟ್ 30, 1955ರಲ್ಲಿ ವಿಜಯಪುರ ಜಲ್ಲೆಯ ಮುದ್ದೆಬಿಹಾಳ ತಾಲೂಕಿನ ದಂಡಾವತಿಯವರು, ತಂದೆ ದೇವೇಂದ್ರಪ್ಪ, ತಾಯಿ ಚಂಪಮ್ಮ ಇವರ ಮಗನಾಗಿ ಜನಿಸಿದರು.
- ಇವರು ಪಡೆದ ಪ್ರಶಸ್ತಿಗಳು: ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್