Published on: July 26, 2022

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ

where can i buy cytotec without a perscription? ಸುದ್ದಿಯಲ್ಲಿ ಏಕಿದೆ?

can i buy dapoxetine over the counter ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ (ಸ್ವೈನ್ ಫಿವರ್) ಪತ್ತೆಯಾಗಿದೆ. ಕೇರಳದ ವಯನಾಡ್ ಜಿಲ್ಲೆಯ ಮಾನಂದವಾಡಿಯ ಎರಡು ಸಾಕಣೆ ಕೇಂದ್ರದಲ್ಲಿ ಆಫ್ರಿಕನ್ ಹಂದಿ ಜ್ವರ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಾಂಶಗಳು

ಹಿನ್ನೆಲೆ

 • ಈ ಸೋಂಕು ಮೊದಲು 1920 ರಲ್ಲಿ ಆಫ್ರಿಕಾದ ಪ್ರಾಣಿಗಳಲ್ಲಿ ಪತ್ತೆಯಾಗಿತ್ತು.
 • ಫಾರ್ಮ್‌ವೊಂದರಲ್ಲಿ ಹಂದಿಗಳು ಸಾಮೂಹಿಕವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಸ್ಯಾಂಪಲ್ ಪರೀಕ್ಷೆಗಾಗಿ ಭೋಪಾಲಕ್ಕೆ ರವಾನಿಸಲಾಗಿತ್ತು. ಭೋಪಾಲದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸ್‌ ಕೇಂದ್ರದಲ್ಲಿ ಮಾದರಿಗಳನ್ನು ಪರೀಕ್ಷಿಸಿದ ಬಳಿಕ ಎರಡು ಫಾರ್ಮ್‌ಗಳಲ್ಲಿ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿವೆ.
 • ಈ ಹಿನ್ನೆಲೆಯಲ್ಲಿ ಎರಡನೇ ಫಾರ್ಮ್‌ನಲ್ಲಿದ್ದ 300 ಹಂದಿಗಳನ್ನು ಕೊಲ್ಲಲು ನಿರ್ದೇಶನ ನೀಡಲಾಗಿದೆ. ಅಲ್ಲದೆ ಹಂದಿ ಜ್ವರ ಹರಡುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಬಿಹಾರ ಹಾಗೂ ಈಶಾನ್ಯದ ಕೆಲವು ರಾಜ್ಯಗಳಲ್ಲಿ ಆಫ್ರಿಕನ್ ಹಂದಿ ಜ್ವರ ಈಗಾಗಲೇ ವರದಿಯಾಗಿದೆ. ಇದು ದೇಶೀಯ ಹಂದಿಗಳ ಮೇಲೆ ಪರಿಣಾಮ ಬೀರುವ ಸಾಂಕ್ರಾಮಿಕ ಹಾಗೂ ಮಾರಣಾಂತಿಕ ಕಾಯಿಲೆಯಾಗಿದೆ.
 • ಉತ್ತರ ಪ್ರದೇಶದಲ್ಲೂ ಹಂದಿಜ್ವರ ಸೋಂಕು : ಕೇರಳ ಬೆನ್ನಲ್ಲೇ ಉತ್ತರ ಪ್ರದೇಶದಲ್ಲೂ ಈ ಹಂದಿ ಜ್ವರ ಸೋಂಕು ಕಾಣಿಸಿಕೊಂಡಿದ್ದು,ಅಸ್ಸಾಂನಲ್ಲಿ ಮೊದಲ ಪ್ರಕರಣ ASF ನ ಪ್ರಕರಣಗಳು ಭಾರತದಲ್ಲಿ ಮೊದಲ ಬಾರಿಗೆ ಮೇ 2020 ರಲ್ಲಿ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದವು. ಬಳಿಕ ಈ ಹಿಂದೆ ಜುಲೈ ಆರಂಭದಲ್ಲಿ, ಉತ್ತರಾಖಂಡ ರಾಜ್ಯದಲ್ಲಿ ಆಫ್ರಿಕನ್ ಹಂದಿ ಜ್ವರದ ಪ್ರಕರಣಗಳು ವರದಿಯಾಗಿತ್ತು. ಅಂತೆಯೇ ಈ ತಿಂಗಳ ಆರಂಭದಲ್ಲಿ, ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರಾ ಎಎಸ್ಎಫ್ ವರದಿ ಮಾಡಿದ್ದವು. ಏಪ್ರಿಲ್‌ನಲ್ಲಿ, ತ್ರಿಪುರಾದಲ್ಲಿ ಅಜ್ಞಾತ ಕಾರಣಗಳಿಂದಾಗಿ ಒಟ್ಟು 63 ಪ್ರೌಢ ಹಂದಿಗಳು ಸಾವನ್ನಪ್ಪಿದವು.

ಲಸಿಕೆ ಇಲ್ಲದ ರೋಗ:

 • ಈ ರೋಗವು ಹೆಚ್ಚು ಸಾಂಕ್ರಾಮಿಕವಾಗಿದ್ದು, ಇದಕ್ಕೆ ಈ ವರೆಗೂ ಯಾವುದೇ ರೀತಿಯ ಲಸಿಕೆ ಅಭಿವೃದ್ಧಿ ಪಡಿಸಲಾಗಿಲ್ಲ. ಹಂದಿ ಮಾಂಸವನ್ನು ಸೇವಿಸುವುದನ್ನು ತಪ್ಪಿಸುವಂತೆ ಕೇರಳ ಸರ್ಕಾರವು ನಿವಾಸಿಗಳನ್ನು ಒತ್ತಾಯಿಸಿದೆ. ಈ ಹೆಮರಾಜಿಕ್ ರೋಗವು ಮನುಷ್ಯರಿಗೆ ಹಾನಿಕಾರಕವಲ್ಲ ಆದರೆ ಹಂದಿಗಳಿಗೆ ಮಾರಕವಾಗಿದೆ. ಪ್ರಸ್ತುತ ಈ ASF ಪ್ರಪಂಚದಾದ್ಯಂತ ಹರಡುವುದನ್ನು ಮುಂದುವರೆಸಿದ್ದು, ಇದು ಹಂದಿ ಆರೋಗ್ಯ ಮತ್ತು ಸಾಕಾಣಿಕಾ ಉದ್ಯಮಕ್ಕೆ ಬೆದರಿಕೆ ಹಾಕುತ್ತಿದೆ.
 • ಈ ರೋಗವು ಏಷ್ಯಾ, ಕೆರಿಬಿಯನ್, ಯುರೋಪ್ ಮತ್ತು ಪೆಸಿಫಿಕ್‌ನಾದ್ಯಂತ ಅನೇಕ ದೇಶಗಳನ್ನು ತಲುಪಿದ್ದು, ಇದು ದೇಶೀಯ ಮತ್ತು ಕಾಡು ಹಂದಿಗಳ ಮೇಲೆ ಪರಿಣಾಮ ಬೀರುತ್ತದೆ. ಜಾಗತಿಕವಾಗಿ, 2005 ರಿಂದ, ASF ಒಟ್ಟು 73 ದೇಶಗಳಲ್ಲಿ ವರದಿಯಾಗಿತ್ತು.

ಏನಿದು ಹಂದಿ ಜ್ವರ?

 • ಎಚ್ 1ಎನ್ 1 ಎಂದು ಕರೆಯಲ್ಪಡುವಂತಹ ಹಂದಿ ಜ್ವರವು ಹಂದಿಗೆ ಕಾಡುವಂತಹ ಜ್ವರವಾಗಿದೆ. ಇದು ಹಂದಿಗಳಿಂದ ಮನುಷ್ಯರಿಗೆ ಕೂಡ ಹಬ್ಬುವಂತಹ ವೈರಸ್ ಆಗಿದ್ದು, ಸರಿಯಾದ ಚಿಕಿತ್ಸೆ ಸಿಗದೆ ಇದ್ದರೆ ಆಗ ಖಂಡಿತವಾಗಿಯೂ ಪ್ರಾಣಾಂತಿಕವಾಗಬಹುದು.
 • ವಿಶ್ವ ಆರೋಗ್ಯ ಸಂಸ್ಥೆಯು ಹಂದಿಜ್ವರವನ್ನು ಜಾಗತಿಕ ಸಾಂಕ್ರಾಮಿಕ ರೋಗ ಎಂದು ಕೂಡ ಘೋಷಣೆ ಮಾಡಿದೆ.

ಹಂದಿಜ್ವರಕ್ಕೆ ಕಾರಣಗಳು

 • ಹಂದಿಜ್ವರ ಅಂದರೆ ಎಚ್ 1ಎನ್ 1 ಎನ್ನುವುದು ಸಾಮಾನ್ಯವಾಗಿ ವೈರಸ್ ನಿಂದ ಹಬ್ಬುವಂತಹ ರೋಗವಾಗಿದೆ. ಎಚ್ 1ಎನ್ 1 ಮನುಷ್ಯರಿಂದ ಮನುಷ್ಯರಿಗೆ ಹಬ್ಬುವ ರೋಗ. ಕೆಮ್ಮು, ಶೀತ ಮತ್ತು ನೇರವಾಗಿ ಸೋಂಕಿತ ವ್ಯಕ್ತಿಗಳ ಸಂಪರ್ಕಕ್ಕೆ ಬರುವುದರಿಂದ ಈ ರೋಗವು ಹರಡುವುದು. ಮನುಷ್ಯರಲ್ಲಿ ಕಂಡುಬರುವ ಎಚ್ 1ಎನ್ 1 ಸ್ವೈನ್ ಫ್ಲೂ ಭಿನ್ನವಾಗಿರುವುದು.

ಹಂದಿಜ್ವರದ ಲಕ್ಷಣಗಳು

 • ಹಂದಿಜ್ವರದ ಲಕ್ಷಣಗಳು ಸಾಮಾನ್ಯ ಜ್ವರದ ಲಕ್ಷಣಗಳಂತೆ ಇರುವುದು. ಸಾಮಾನ್ಯ ಜ್ವರ ಮತ್ತು ಹಂದಿ ಜ್ವರದ ನಡುವಿನ ವ್ಯತ್ಯಾಸವೆಂದರೆ ಹಂದಿಜ್ವರವು ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು.
 • ಜ್ವರ, ತಲೆನೋವು, ಅತಿಸಾರ, ಕೆಮ್ಮು ಮತ್ತು ಶೀನು, ನಿಶ್ಯಕ್ತಿ ಮತ್ತು ದೇಹದಲ್ಲಿ ನೋವಿನಂತಹ ಲಕ್ಷಣಗಳಿರುತ್ತವೆ.