Published on: June 7, 2024
ಕೊನೊಕಾರ್ಪಸ್ ಗಿಡಗಳು
ಕೊನೊಕಾರ್ಪಸ್ ಗಿಡಗಳು
ಸುದ್ದಿಯಲ್ಲಿ ಏಕಿದೆ? ಕೊನೊಕಾರ್ಪಸ್ ಗಿಡಗಳು ಮಳೆ ಪರಿಸರವನ್ನು ಹಾಳುಮಾಡುತ್ತವೆ, ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ಇತ್ತೀಚಿನ ಒಂದು ಸಂಶೋಧನೆ ಹೇಳಿದೆ.
ಮುಖ್ಯಾಂಶಗಳು
- ‘ದುಬೈ ಗಿಡ’ ಎಂದೂ ಕರೆಯಲಾಗುವ ಹಾನಿಕಾರ ಕೊನೊಕಾರ್ಪಸ್ ಗಿಡವನ್ನು ನಗರದ ಪ್ರಮುಖ ಮುಖ್ಯ ರಸ್ತೆ, ಹೊರವರ್ತುಲ ರಸ್ತೆಗಳು, ಕೇಂದ್ರ ಭಾಗ ರಸ್ತೆಗಳ ಮಧ್ಯ ಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಅರಣ್ಯ ಇಲಾಖೆ, ಬಿಬಿಎಂಪಿ, ಬಿಡಿಎ ನಗರದ ಬಹುತೇಕ ಪ್ರದೇಶಗಳಲ್ಲಿ ನೆಟ್ಟಿದೆ ಹಾಗೂ ನೆಡುತ್ತಿದೆ.
- ಅತಿವೇಗದಲ್ಲಿ ಬೆಳೆಯುವ ಕೊನೊಕಾರ್ಪಸ್ಗೆ ಹೆಚ್ಚಿನ ಆರೈಕೆ ಬೇಕಾಗುವುದಿಲ್ಲ. ಬದಲಿಗೆ ಬೇಗ ಹಸಿರು ಹರಡಿಕೊಂಡು, ಬೇರೂರುತ್ತದೆ. ಈ ಕಾರಣದಿಂದ ಸರ್ಕಾರಿ ಇಲಾಖೆಗಳು ಈ ಗಿಡವನ್ನು ಹೆಚ್ಚು ನೆಡುತ್ತಿದ್ದಾರೆ. ಇದು ಅಂತರ್ಜಲವನ್ನು ಹೆಚ್ಚು ಹೀರಿಕೊಳ್ಳುತ್ತದೆ ಹಾಗೂ ಉಸಿರಾಟದ ಮೇಲೆ ಪರಿಣಾಮ ಬೀಳುತ್ತದೆ
ಈ ಗಿಡವನ್ನು ನಿಷೇಧಿಯಸಿದ ದೇಶ ಮತ್ತು ರಾಜ್ಯಗಳು
ಯುಎಇ ಹಾಗೂ ದೇಶದ ಎರಡು ರಾಜ್ಯಗಳಾದ ಗುಜರಾತ್, ತೆಲಂಗಾಣ ಮಾನವನ ಆರೋಗ್ಯಕ್ಕೆ ಮಾರಕ ಹಾಗೂ ಈ ಗಿಡಗಳು ಹೆಚ್ಚಾಗುವ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಬರದ ಪರಿಸ್ಥಿತಿ ಉಂಟಾಗುತ್ತದೆ ಎಂದು 2023ರಲ್ಲಿ ಕೊನೊಕಾರ್ಪಸ್ ಗಿಡವನ್ನು ನಿಷೇಧಿಸಿವೆ. ಗುಜರಾತ್ನಲ್ಲಿ ಈ ಗಿಡ–ಮರಗಳನ್ನು ಬುಡಸಹಿತ ತೆರವುಗೊಳಿಸಿ, ಸುಟ್ಟು ಹಾಕಲಾಗಿದೆ.
ಕೊನೊಕಾರ್ಪಸ್
- ಇದು ಕಾಂಬ್ರೆಟೇಸಿ ಕುಟುಂಬಕ್ಕೆ ಸೇರಿದ ಹೂವಿನ ಸಸ್ಯವಾಗಿದೆ.
- ಮ್ಯಾಂಗ್ರೋವ್ ನ ಒಂದು ಜಾತಿಯಾಗಿದೆ.
- ಈ ಜಾತಿಯ ಮರಗಳು ಚಳಿಗಾಲದಲ್ಲಿ ಅರಳುತ್ತವೆ
- ಅರೇಬಿಯನ್ ಪೆನಿನ್ಸುಲಾದ ದೇಶಗಳು ಮರುಭೂಮಿಯ ಬಿರುಗಾಳಿಗಳಿಂದ ಮರಳನ್ನು ತಡೆಯಲು ಮತ್ತು ಮಾಲಿನ್ಯವನ್ನು ನಿಯಂತ್ರಿಸಲು ಸಸ್ಯವನ್ನು ಬಳಸಿಕೊಂಡಿವೆ.
- ಈ ಮರವು ವರ್ಷವಿಡೀ ಅದರ ಕಡು ಹಸಿರು ಎಲೆಗಳ ಬಣ್ಣಕ್ಕೆ ಹೆಸರುವಾಸಿಯಾಗಿದೆ ಮತ್ತು ಹೆಚ್ಚಿನ ಮತ್ತು ಕಡಿಮೆ ತಾಪಮಾನದಂತಹ ಕಠಿಣ ಪರಿಸರ ಪರಿಸ್ಥಿತಿಗಳನ್ನು ತಡೆದುಕೊಳ್ಳುತ್ತದೆ ಮತ್ತು ವಿಪರೀತ ಲವಣಾಂಶವಿರುವ ಪ್ರದೇಶಗಳಲ್ಲಿಯೂ ಸಹ ಬೆಳೆಯಬಹುದು.
- ಇದು ಉತ್ತರ ಮತ್ತು ದಕ್ಷಿಣ ಅಮೆರಿಕಾದ ಕೆಲವು ಭಾಗಗಳಿಗೆ ಮತ್ತು ಆಫ್ರಿಕಾದ ಭಾಗಗಳಿಗೆ ಸ್ಥಳೀಯವಾಗಿದೆ.