Published on: May 5, 2024

ಕೋಫಿ ಅನ್ನಾನ್ ಕರೇಜ್ ಇನ್ ಕಾರ್ಟೂನಿಂಗ್ ಪ್ರಶಸ್ತಿ

ಕೋಫಿ ಅನ್ನಾನ್ ಕರೇಜ್ ಇನ್ ಕಾರ್ಟೂನಿಂಗ್ ಪ್ರಶಸ್ತಿ

ಸುದ್ದಿಯಲ್ಲಿ ಏಕಿದೆ? ಭಾರತದ ವ್ಯಂಗ್ಯಚಿತ್ರ ಕಲಾವಿದೆ ರಚಿತಾ ತನೇಜಾ ಹಾಗೂ ಹಾಂಗಕೊಂಗ್ ಜುಂಜಿ ಅವರಿಗೆ ‘ಕೋಫಿ ಅನ್ನಾನ್ ಕರೇಜ್ ಇನ್ ಕಾರ್ಟೂನಿಂಗ್’ ಪ್ರಶಸ್ತಿಯನ್ನು ನೀಡಲಾಗಿದೆ. ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಮುಖ್ಯಾಂಶಗಳು

  • ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಹಮ್ಮಿಕೊಂಡಿದ್ದ ವ್ಯಂಗ್ಯಚಿತ್ರಗಳ ಪ್ರದರ್ಶನವನ್ನು ಇರಾನ್ನ ವಕೀಲೆ ಹಾಗೂ ನೊಬೆಲ್ ಶಾಂತಿ ಪುರಸ್ಕಾರ ಪುರಸ್ಕೃತರಾದ ಶಿರಿನ್ ಎಬಾದಿ ಉದ್ಘಾಟಿಸಿದರು.
  • “ಸ್ವಾತಂತ್ರ್ಯಕ್ಕಾಗಿನ ಹೋರಾಟದಲ್ಲಿ ಮಹಿಳೆಯರ ಪಾತ್ರ ಹಾಗೂ ಜಾಗತಿಕವಾಗಿ ಮಹಿಳಾ ವ್ಯಂಗ್ಯ ಚಿತ್ರಕಾರ್ತಿಯರು ಎದುರಿಸುತ್ತಿರುವ ಸವಾಲುಗಳು” ಎಂಬ ವಿಷಯದ ಮಹತ್ವವನ್ನು ಈ ವರ್ಷದ ಪ್ರಶಸ್ತಿ ಮತ್ತು ವ್ಯಂಗ್ಯಚಿತ್ರ ಪ್ರದರ್ಶನ ವಿವರಿಸುತ್ತದೆ ಎಂದು ಸಂಘಟಕ ಸಂಸ್ಥೆ ಫ್ರೀಡಮ್ ಕಾರ್ಟೂನಿಸ್ಟ್ಸ್ ಫೌಂಡೇಷನ್ ಹೇಳಿದೆ.
  • ಎರಡು ವರ್ಷಕ್ಕೊಮ್ಮೆ ನೀಡಲಾಗುವ ಈ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಮಾಧ್ಯಮ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನ ಮಾಡಲಾಗಿದೆ.
  • ಭಾರತದ ಖ್ಯಾತ ವ್ಯಂಗ್ಯ ಚಿತ್ರ ಕಲಾವಿದೆ, ಮೊನಚು ಕಾರ್ಟೂನ್‌ಗಳ ಮೂಲಕ ದೇಶಾದ್ಯಂತ ಗಮನ ಸೆಳೆದಿದ್ದಾರೆ. ಮೊನಚು ಕಾರ್ಟೂನ್‌ಗಳ ಮೂಲಕವೇ ಮಾಧ್ಯಮ ಸ್ವಾತಂತ್ರ್ಯವನ್ನು ಎತ್ತಿಹಿಡಿದ, ಜನರಲ್ಲಿ ಅರಿವು ಮೂಡಿಸಿದ ಹಿನ್ನೆಲೆಯಲ್ಲಿ ಇವರಿಗೆ ಪ್ರಶಸ್ತಿ ನೀಡಲಾಗಿದೆ

ರಚಿತಾ ತನೇಜಾ

ರಚಿತಾ ತನೇಜಾ ಅವರು ‘ಸ್ಯಾನಿಟರಿ ಪ್ಯಾನೆಲ್ಸ್’ ಎಂಬ ಆನ್ಲೈನ್ ವೇದಿಕೆಯನ್ನು ಮುನ್ನಡೆಸುತ್ತಿದ್ದು, ಕಿರುಕುಳ, ಸಲಿಂಗಕಾಮ ಕುರಿತು ನಕಾರಾತ್ಮಕತೆ, ಮುಟ್ಟು ಹಾಗೂ ಸರ್ವಾಧಿಕಾರ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿಡಂಬನಾತ್ಮಕ ಚಿತ್ರಗಳನ್ನು ಪ್ರಕಟಿಸುತ್ತಾರೆ.

ಪ್ರಶಸ್ತಿಯ ವಿವರ

ಜಿನೀವಾ ಮೂಲದ ಫ್ರೀಡಂ ಕಾರ್ಟೂನಿಸ್ಟ್ ಫೌಂಡೇಶನ್ಸ್, ಜಿನೀವಾ ನಗರದ ಸಹಭಾಗಿತ್ವದಲ್ಲಿ 2012 ರಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿ ವಿಜೇತರು 15,000 CHF(ಸ್ವಿಟ್ಜರ್ಲೆಂಡ್‌ನ ಅಧಿಕೃತ ಕರೆನ್ಸಿ)ನಗದು ಬಹುಮಾನವನ್ನು ನೀಡಲಾಗುತ್ತದೆ