Published on: September 14, 2021

ಕೋವಿಡ್ ಲಸಿಕೆ ವಿತರಣೆಗೆ ಡ್ರೋನ್ ಬಳಕೆ

ಕೋವಿಡ್ ಲಸಿಕೆ ವಿತರಣೆಗೆ ಡ್ರೋನ್ ಬಳಕೆ

ಸುದ್ಧಿಯಲ್ಲಿ ಏಕಿದೆ? ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮಣಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ಕೊರೋನಾ ಲಸಿಕೆಗಳನ್ನು ವಿಸ್ತರಿಸಲು ಡ್ರೋನ್‌ಗಳನ್ನು ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಗೆ ಷರತ್ತುಬದ್ಧ ಅನುಮತಿಯನ್ನು ನೀಡಲಾಗಿದೆ

  • ಲಸಿಕೆಗಳನ್ನು ನೀಡಲು 3,000 ಮೀಟರ್‌ಗಳಷ್ಟು ಎತ್ತರದವರೆಗೆ ಡ್ರೋನ್‌ಗಳನ್ನು ಬಳಸಲು ಐಸಿಎಂಆರ್‌ಗೆ ಅನುಮತಿ ನೀಡಲಾಗಿದೆ
  • ಐಐಟಿ ಮತ್ತು ಐಸಿಎಂಆರ್ – ಎರಡೂ ಸಂಸ್ಥೆಗಳಿಗೆ 2021ರ ಡ್ರೋನ್ ನಿಯಮಗಳ ಅಡಿಯಲ್ಲಿ ಷರತ್ತುಬದ್ಧ ವಿನಾಯಿತಿಯನ್ನು ನೀಡಲಾಗಿದೆ.

ಹಿನ್ನಲೆ

  • ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮೊದಲ ಬಾರಿಗೆ ತೆಲಂಗಾಣದ ವಿಕಾರಾಬಾದ್‌ನಲ್ಲಿ ‘ಆಕಾಶದ ಮೂಲಕ ಔಷಧ’ ಯೋಜನೆಯನ್ನು ಪ್ರಾರಂಭಿಸಿದರು. ಇದರ ಅಡಿಯಲ್ಲಿ ಡ್ರೊನ್‌ಗಳನ್ನು ಬಳಸಿ ಔಷಧಗಳು ಮತ್ತು ಲಸಿಕೆಗಳನ್ನು ವಿತರಿಸಲಾಗುವುದು.