Published on: June 11, 2022

ಕೋವಿಡ್ 19 ಲಸಿಕೆ ‘ಅನೊಕೊವ್ಯಾಕ್ಸ್’ ಬಿಡುಗಡೆ

ಕೋವಿಡ್ 19 ಲಸಿಕೆ ‘ಅನೊಕೊವ್ಯಾಕ್ಸ್’ ಬಿಡುಗಡೆ

ಸುದ್ದಿಯಲ್ಲಿ ಏಕಿದೆ?

ಪ್ರಾಣಿಗಳಿಗೆ ನೀಡಬಹುದಾದ, ದೇಶಿಯವಾಗಿಯೇ ಅಭಿವೃದ್ಧಿಪಡಿಸಿರುವ ಕೋವಿಡ್ 19 ಲಸಿಕೆ ‘ಅನೊಕೊವ್ಯಾಕ್ಸ್’ ಅನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಬಿಡುಗಡೆ ಮಾಡಿದರು. 

ಮುಖ್ಯಾಂಶಗಳು

  • ಯಾರು ಅಭಿವೃದ್ಧಿಪಡಿಸಿದ್ದಾರೆ? ಹರಿಯಾಣ ಮೂಲದ ಐಸಿಎಆರ್-ನ್ಯಾಷನಲ್ ರಿಸರ್ಚ್ ಸೆಂಟರ್ ಆನ್ ಇಕ್ವೈನ್ಸ್ (ಎನ್ಆರ್ಸಿ) ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.
  • ಈ ಲಸಿಕೆ ನಾಯಿ, ಸಿಂಹ, ಚಿರತೆ, ಇಲಿ ಮತ್ತು ಮೊಲಗಳಿಗೆ ಸುರಕ್ಷಿತವಾಗಿದೆ ಎಂದು ಐಸಿಎಆರ್ ಹೇಳಿಕೆಯಲ್ಲಿ ತಿಳಿಸಿದೆ.