Published on: June 21, 2022
ಕ್ರೀಡಾ ಜ್ಯೋತಿಯಾತ್ರೆಗೆ ಪ್ರಧಾನಿ ಚಾಲನೆ
ಕ್ರೀಡಾ ಜ್ಯೋತಿಯಾತ್ರೆಗೆ ಪ್ರಧಾನಿ ಚಾಲನೆ
ಸುದ್ದಿಯಲ್ಲಿ ಏಕಿದೆ?
ಚೆಸ್ ಒಲಿಂಪಿಯಾಡ್‌ನಲ್ಲಿ ಇದೇ ಮೊದಲ ಬಾರಿ ಆಯೋಜಿಸಿರುವ ಕ್ರೀಡಾ ಜ್ಯೋತಿ ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ಮುಖ್ಯಾಂಶಗಳು
- 44ನೇ ಚೆಸ್ ಒಲಿಂಪಿಯಾಡ್ ತಮಿಳುನಾಡಿನ ಮಹಾಬಲಿಪುರಂನಲ್ಲಿ ಜುಲೈ 28 ರಿಂದ ಆಗಸ್ಟ್ 10ರ ವರೆಗೆ ನಡೆಯಲಿದೆ.
- ಅಂತರರಾಷ್ಟ್ರೀಯ ಚೆಸ್ ಸಂಸ್ಥೆ (ಫಿಡೆ) ಇದೇ ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್‌ನಲ್ಲಿ ಒಲಿಂಪಿಕ್ ಮಾದರಿಯಲ್ಲಿ ಜ್ಯೋತಿಯಾತ್ರೆ ಪರಿಚಯಿಸಿದೆ
- ಜ್ಯೋತಿಯಾತ್ರೆ 40 ದಿನಗಳಲ್ಲಿ 75 ನಗರಗಳಲ್ಲಿ ಸಾಗಿ, ಚೆನ್ನೈ ಸಮೀಪದ ಮಹಾಬಲಿಪುರಂ ತಲುಪಲಿದೆ. ಪ್ರತಿ ತಾಣದಲ್ಲೂ ಆಯಾ ರಾಜ್ಯದ ಗ್ರ್ಯಾಂಡ್‌ಮಾಸ್ಟರ್‌ಗಳು ಜ್ಯೋತಿಯನ್ನು ಸ್ವೀಕರಿಸಲಿದ್ದಾರೆ. ಲೆಹ್, ಶ್ರೀನಗರ, ಜೈಪುರ, ಸೂರತ್, ಮುಂಬೈ, ಭೋಪಾಲ್, ಪಟ್ನಾ, ಕೋಲ್ಕತ್ತ, ಗ್ಯಾಂಗ್ಟಕ್, ಹೈದರಾಬಾದ್, ಬೆಂಗಳೂರು, ತ್ರಿಶೂರ್, ಪೋರ್ಟ್‌ಬ್ಲೇರ್ ಮತ್ತು ಕನ್ಯಾಕುಮಾರಿ ನಗರಗಳಲ್ಲಿ ಯಾತ್ರೆ ಸಾಗಲಿದೆ.
- 100 ವರ್ಷಗಳ ಇತಿಹಾಸ ಹೊಂದಿರುವ ಚೆಸ್ ಒಲಿಂಪಿಯಾಡ್‌ಗೆ ಭಾರತ ಆತಿಥ್ಯ ವಹಿಸುತ್ತಿರುವುದು ಇದೇ ಮೊದಲು.
-
188 ದೇಶಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ.’ಚೆಸ್ ಒಲಿಂಪಿಯಾಡ್‌ನ ಮೊಟ್ಟಮೊದಲ ಜ್ಯೋತಿಯಾತ್ರೆಗೆ ಭಾರತದಲ್ಲಿ ಚಾಲನೆ ಲಭಿಸಿದೆ.