Published on: October 11, 2022

ಕ್ಷುದ್ರಗ್ರಹಕ್ಕೆ ಗಗನನೌಕೆ ಡಿಕ್ಕಿ:

ಕ್ಷುದ್ರಗ್ರಹಕ್ಕೆ ಗಗನನೌಕೆ ಡಿಕ್ಕಿ:

rebukingly ಸುದ್ದಿಯಲ್ಲಿ ಏಕಿದೆ?

buy antabuse online usa ನಾಸಾದ ಬಾಹ್ಯಾಕಾಶ ನೌಕೆ ‘ಡಾರ್ಟ್‌’, ಡಿಮಾರ್ಫೋಸ್‌ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬಾಹ್ಯಾಕಾಶಲ್ಲಿ ಸಾವಿರಾರು ಕಿ.ಮೀ. ವರೆಗೂ ಕ್ಷುದ್ರಗ್ರಹದಿಂದ ಹೊಮ್ಮಿದ ದೂಳು ಹಾಗೂ ಶಿಲೆಗಳ ಚೂರುಗಳು ಚದುರಿದ ಚಿತ್ರಗಳನ್ನು ಚಿಲಿಯಲ್ಲಿರುವ ದೂರದರ್ಶಕ ಸೆರೆಹಿಡಿದಿದೆ.

ಮುಖ್ಯಾಂಶಗಳು

  • ರೀಡೈರೆಕ್ಷನ್‌ ಟೆಸ್ಟ್‌ – ಕ್ಷುದ್ರಗ್ರಹದ ಪಥ ಬದಲಿಸುವ ಪರೀಕ್ಷೆ)’ ಕ್ಷುದ್ರಗ್ರಹ ‘ಡಿಮೊರ್ಫಾಸ್’ಗೆ ಹೈಪರ್‌ ಸಾನಿಕ್‌ ವೇಗದಲ್ಲಿ ಡಿಕ್ಕಿ ಹೊಡೆದಿದೆ. 530 ಅಡಿ ಅಗಲದ ಕ್ಷುದ್ರಗ್ರಹದ ಪಥ ಬದಲಿಸುವ ಸಲುವಾಗಿ ಅದರ ಮೇಲೆ ಬಾಹ್ಯಾಕಾಶ ನೌಕೆಯು ಡಿಕ್ಕಿ ಹೊಡೆಯಿತು.
  • ಭೂಮಿಯಿಂದ 7 ದಶಲಕ್ಷ ಮೈಲುಗಳ (11 ದಶಲಕ್ಷ ಕಿಲೋಮೀಟರ್) ದೂರದಲ್ಲಿ ಈ ವಿದ್ಯಮಾನ ನಡೆದಿದೆ. ಈ ಪರೀಕ್ಷೆಗಾಗಿ ‘ಡಾರ್ಟ್‌’ ಅನ್ನು ಹತ್ತು ತಿಂಗಳ ಹಿಂದೆ ನಭಕ್ಕೆ ಉಡಾಯಿಸಲಾಗಿತ್ತು.
  • ಈ ಪರೀಕ್ಷೆಯ ಎರಡು ದಿನಗಳ ನಂತರ, ಖಗೋಳವಿಜ್ಞಾನಿಗಳು ಚಿಲಿಯಲ್ಲಿರುವ ‘ಸೌಥ್ ಆಸ್ಟ್ರೋಫಿಸಿಕಲ್ ರಿಸರ್ಚ್‌ ಟೆಲಿಸ್ಕೋಪ್‌’ (ಎಸ್‌ಒಎಆರ್‌) ಮೂಲಕ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಕ್ಷುದ್ರಗ್ರಹದ ಕಕ್ಷೆಯನ್ನು ಮಾರ್ಪಡಿಸಲು ಕೈಗೊಂಡ ಮೊದಲ ಗ್ರಹಗಳ ರಕ್ಷಣಾ ಪರೀಕ್ಷೆ ಇದಾಗಿದೆ.
  • ಅನ್ಯಗ್ರಹಗಳಿಂದ ಭೂಮಿಗೆ ಎದುರಾಗುವ ಹಾನಿಯನ್ನು ತಪ್ಪಿಸುವ ಈ ಮಹತ್ವದ ಯೋಜನೆಯಲ್ಲಿ ಬೆಂಗಳೂರಿನ ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಸ್ಟ್ರೊಫಿಸಿಕ್ಸ್‌) ವಿಜ್ಞಾನಿ ಕ್ರಿಶ್ಪಿನ್‌ ಕಾರ್ತಿಕ್‌ ಸಹ ಇದ್ದರು.

ಉದ್ದೇಶ :

  • ಚಲನ ಶಕ್ತಿಯನ್ನು ಬಳಸಿಕೊಂಡು ಕ್ಷುದ್ರಗ್ರಹದ ಪಥವನ್ನು ಬದಲಾಯಿಸುವ ಸಾಮರ್ಥ್ಯವನ್ನು ಬಾಹ್ಯಾಕಾಶ ನೌಕೆಯು ಹೊಂದಿದೆಯೇ ಎಂದು ಅವಲೋಕಿಸಲು ಈ ಕಾರ್ಯಾಚರಣೆಯನ್ನು ರೂಪಿಸಲಾಗಿತ್ತು.

ಡಿಕ್ಕಿ ಹೊಡೆಸಲು ಕಾರಣ

  • ಭೂಮಿಗೆ ಆಕಾಶ ಕಾಯಗಳಿಂದ ಸಂಭಾವ್ಯ ಅಪಾಯವನ್ನು ತಪ್ಪಿಸಲು, ಸೆಪ್ಟೆಂಬರ್‌ 26ರಂದು ‘ಡಾರ್ಟ್‌’ ನೌಕೆಯಿಂದ ಉದ್ದೇಶಪೂರ್ವಕವಾಗಿ ಡಿಮಾರ್ಫೋಸ್‌ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆಸಲಾಗಿತ್ತು. 66 ದಶಲಕ್ಷ ವರ್ಷಗಳ ಹಿಂದೆ ಭೂಮಿಗೆ ಅಪ್ಪಳಿಸಿದ ಕ್ಷುದ್ರಗಹದಿಂದಾಗಿಯೇ ಡೈನೋಸಾರ್‌ಗಳ ಸಂತತಿ ಅಳಿಯಿತು ಎಂದು ಊಹಿಸಲಾಗಿದೆ.
  • ಭವಿಷ್ಯದಲ್ಲಿ ಇಂತಹ ಗಂಡಾಂತರ ಎದುರಾಗದಿರಲಿ ಎಂಬ ಕಾರಣಕ್ಕೇ ಈ ಪರೀಕ್ಷೆ ನಡೆಸಲಾಗಿದೆ’. ‘ಭೂಮಿಯಿಂದ ಬಹುದೂರದಲ್ಲಿರುವ ಕ್ಷುದ್ರಗ್ರಹವೊಂದರ ಪಥವನ್ನು ಸ್ವಲ್ಪ ಬದಲಿಸಿದರೂ ಅದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇರುವುದಿಲ್ಲ. ಹೀಗಾಗಿ ಇಂತಹ ಪ್ರಯೋಗಗಳು ಅಗತ್ಯ ವಾಗಿವೆ.