Published on: November 24, 2021

ಕ್ಷುದ್ರಗ್ರಹದ ಪಥ ಬದಲಿಸಲು ಬಾಹ್ಯಾಕಾಶ ನೌಕೆಯನ್ನು ಡಿಕ್ಕಿ ಹೊಡೆಸಲಿರುವ ನಾಸಾ

ಕ್ಷುದ್ರಗ್ರಹದ ಪಥ ಬದಲಿಸಲು ಬಾಹ್ಯಾಕಾಶ ನೌಕೆಯನ್ನು ಡಿಕ್ಕಿ ಹೊಡೆಸಲಿರುವ ನಾಸಾ

ಸುದ್ಧಿಯಲ್ಲಿ ಏಕಿದೆ ?  ನಮ್ಮ ಸೌರ ಮಂಡಲದ ರಚನೆಯ ಸಂದರ್ಭದಲ್ಲಿ ಗ್ರಹಕಾಯಗಳಾಗದೇ ಉಳಿದ ಕ್ಷುದ್ರಗ್ರಹಗಳೆಂಬ ಆಕಾಶಕಾಯಗಳಿಂದ ನಮ್ಮ ಭೂಮಿಗೆ ನಿರಂತರ ಬೆದರಿಕೆ ಇದ್ದೇ ಇರುತ್ತದೆ. ಕ್ಷುದ್ರಗ್ರಹಗಳು ತಮ್ಮ ಪಥ ಬದಲಿಸಿ ಭೂಮಿಯತ್ತ ಧಾವಿಸಿ ಬಂದು ಅಪ್ಪಳಿಸಿದರೆ ಉಂಟಾಗುವ ಅನಾಹುತ ಊಹಿಸಲೂ ಅಸಾಧ್ಯ. ಇದೇ ಕಾರಣಕ್ಕೆ ಮಾನವ ಇತಿಹಾಸದಲ್ಲೇ  ಮೊದಲ ಬಾರಿಗೆ ಭಾರೀ ಸಾಹಸವೊಂದಕ್ಕೆ ಅಮೆರಿಕದ ಖಗೋಳ ವಿಜ್ಞಾನ ಸಂಸ್ಥೆ ನಾಸಾ ಕೈ ಹಾಕಿದೆ.

ಮುಖ್ಯಾಂಶಗಳು

  • ಡಿಡಿಮೋಸ್ ಎಂದು ಕರೆಯಲ್ಪಡುವ ಜೋಡಿ ಕ್ಷುದ್ರಗ್ರಹಕ್ಕೆ DART(ಡಬಲ್ ಆಸ್ಟ್ರಾಯ್ಡ್ ರಿಡೈರೆಕ್ಷನ್ ಟೆಸ್ಟ್ ) ಎಂಬ ಹೆಸರಿನ ಬಾಹ್ಯಾಕಾಶ ನೌಕೆಯನ್ನು ನಾಸಾ ಡಿಕ್ಕಿ ಹೊಡೆಸಲಿದೆ.
  • ಡಿಡಿಮೋಸ್ ಜೋಡಿ ಕ್ಷುದ್ರಗ್ರಹಗಳಲ್ಲಿ ಎರಡು ಕ್ಷುದ್ರಗ್ರಹಗಳಿದ್ದು, ಒಂದು 163 ಮೀಟರ್ ಸುತ್ತಳತೆಯ ಚಿಕ್ಕ ಕ್ಷುದ್ರಗ್ರಹವು 780 ಮೀಟರ್ ಸುತ್ತಳತೆಯ ದೊಡ್ಡ ಕ್ಷುದ್ರಗ್ರಹವನ್ನು ಸುತ್ತುತ್ತಿದೆ. ಈ ಜೋಡಿ ಕ್ಷುದ್ರಗ್ರಹ ನಿಯರ್ ಅರ್ಥ್ ಆಬ್ಜೆಕ್ಟ್ ಪಟ್ಟಿಯಲ್ಲಿದ್ದು, ಇದಕ್ಕೆ DART ನೌಕೆಯನ್ನು ಡಿಕ್ಕಿ ಹೊಡೆಸಿ ಈ ಜೋಡಿ ಕ್ಷುದ್ರಗ್ರಹದ ಪಥ ಬದಲಿಸುವ ಪ್ರಯತ್ನಕ್ಕೆ ನಾಸಾ ಕೈ ಹಾಕಿದೆ.
  • ಕ್ಯಾಲಿಫೋರ್ನಿಯಾದ ವಾಂಡೆನ್‌ಬರ್ಗ್ ಬಾಹ್ಯಾಕಾಶ ನೆಲೆಯಿಂದ, ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್‌ನಲ್ಲಿ DART ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲು ನಿರ್ಧರಿಸಲಾಗಿದೆ. ಈ ನೌಕೆ ಗಂಟೆಗೆ 24,000 ಕಿ.ಮೀ ವೇಗದಲ್ಲಿ ಡಿಡಿಮೋಸ್ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆಯಲಿದೆ.
  • 1,210 ಪೌಂಡ್‌ಗಳಷ್ಟು ತೂಕವಿರುವ DART ಬಾಹ್ಯಾಕಾಶ ನೌಕೆ, ಡಿಡಿಮೋಸ್ ಕ್ಷುದ್ರಗ್ರಹವನ್ನು ನಾಶಗೊಳಿಸುವುದಿಲ್ಲ. ಬದಲಿಗೆ ಅದರ ಪಥವನ್ನು ಬದಲಿಸಲಿದೆ ಎಂದು ನಾಸಾ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.