Published on: July 27, 2024

ಖಾನ್ ಕ್ವೆಸ್ಟ್ ಮಿಲಿಟರಿ ವ್ಯಾಯಾಮ

ಖಾನ್ ಕ್ವೆಸ್ಟ್ ಮಿಲಿಟರಿ ವ್ಯಾಯಾಮ

ಸುದ್ದಿಯಲ್ಲಿ ಏಕಿದೆ? ಭಾರತದ ಸೇನಾತುಕಡಿಯು ಬಹುರಾಷ್ಟ್ರೀಯ ಮಿಲಿಟರಿ ವ್ಯಾಯಾಮ ಖಾನ್ ಕ್ವೆಸ್ಟ್ 2024 ರಲ್ಲಿ ಭಾಗವಹಿಸಲು ತನ್ನ ಪ್ರಯಾಣವನ್ನು ಆರಂಭಿಸಿದೆ. ಈ ವ್ಯಾಯಾಮ ಮಂಗೋಲಿಯಾದ ಉಲಾನ್‌ಬಾಟರ್‌ನಲ್ಲಿ ನಡೆಯಲಿದೆ.

ಮುಖ್ಯಾಂಶಗಳು

ಭಾರತವು ಪ್ರಾಥಮಿಕವಾಗಿ ಮದ್ರಾಸ್ ರೆಜಿಮೆಂಟ್‌ನ ಬೆಟಾಲಿಯನ್‌ ನಿಂದ ಒಟ್ಟು 40 ಸಿಬ್ಬಂದಿವುಳ್ಳ ಪಡೆಯನ್ನು ಕಳುಹಿಸಿದೆ

ಉದ್ದೇಶ

ಈ ವ್ಯಾಯಾಮವು ವಿಶ್ವಾದ್ಯಂತ ಮಿಲಿಟರಿ ಪಡೆಗಳಿಗೆ ತಮ್ಮ ಶಾಂತಿಪಾಲನಾ ಸಾಮರ್ಥ್ಯವನ್ನು ಸಹಯೋಗಿಸಲು ಮತ್ತು ಹೆಚ್ಚಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಖಾನ್ ಕ್ವೆಸ್ಟ್

2003 ರ ಹಿಂದಿನ ಇತಿಹಾಸವನ್ನು ಹೊಂದಿದೆ.

  • ಇದು ಆರಂಭದಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಮಂಗೋಲಿಯನ್ ಸಶಸ್ತ್ರ ಪಡೆಗಳ ನಡುವಿನ ದ್ವಿಪಕ್ಷೀಯ ವ್ಯಾಯಾಮವಾಗಿ ಪ್ರಾರಂಭವಾಯಿತು.
  • 2006 ರಲ್ಲಿ, ಈ ವ್ಯಾಯಾಮವು ಬಹುರಾಷ್ಟ್ರೀಯ ಶಾಂತಿಪಾಲನಾ ವ್ಯಾಯಾಮವಾಗಿ ವಿಕಸನಗೊಂಡಿತು.
  • 2024 ರ ಆವೃತ್ತಿಯು ಈ ಬಹುರಾಷ್ಟ್ರೀಯ ವ್ಯಾಯಾಮದ 21 ನೇ ಆವೃತ್ತಿಯನ್ನು ಸೂಚಿಸುತ್ತದೆ.
  • ಹಿಂದಿನ ಆವೃತ್ತಿ(2023)ಯನ್ನು ಮಂಗೋಲಿಯಾದಲ್ಲಿ ನಡೆಸಲಾಯಿತು.

ಪ್ರಾಯೋಜಕತ್ವ ಮತ್ತು ಆಯೋಜನೆ

ಈ ವ್ಯಾಯಾಮವನ್ನು ವಾರ್ಷಿಕವಾಗಿ:

ಪ್ರಾಯೋಜಕತ್ವ:  U.S. ಇಂಡೋ-ಪೆಸಿಫಿಕ್ ಕಮಾಂಡ್‌ ಸಹಯೋಗ

ಮಂಗೋಲಿಯನ್ ಸಶಸ್ತ್ರ ಪಡೆಗಳಿಂದ ಆಯೋಜಿಸಲಾಗಿದೆ